
ಬೆಂಗಳೂರು: ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಜೂನ್ 29ರವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಿದೆ.
ಗಂಟೆಗೆ 35 ಕಿ.ಮೀ.ನಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು ಇದು 55 ಕಿ.ಮೀಗೂ ತಲುಪಬಹುದು. ಹೀಗಾಗಿ ಜೂನ್ 29ರವರೆಗೆ ಯಾರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಿದೆ. ದಕ್ಷಿಣ ಕನ್ನಡ (ಮುಲ್ಕಿಯಿಂದ ಮಂಗಳೂರು) ಉಡುಪಿ (ಬೈಂದೂರಿನಿಂದ ಕಾಪು) ಮತ್ತು ಉತ್ತರ ಕನ್ನಡ (ಮಾಜಾಳಿಯಿಂದ ಭಟ್ಕಳ) ಕರಾವಳಿಯಲ್ಲಿ ಹೆಚ್ಚಿನ ಸಮುದ್ರದ ಅಲೆಗಳ ಎಚ್ಚರಿಕೆಯನ್ನು ನೀಡಿದೆ.
ಜೂನ್ 29ರವರೆಗೆ 2.9 ಮೀ ನಿಂದ 3.7 ಮೀ ಎತ್ತರದಲ್ಲಿ ಅಲೆಗಳು ಬರುತ್ತವೆ, ಸಮುದ್ರ ಕಾರ್ಯಾಚರಣೆಗಳು ಮತ್ತು ಬೀಚ್ ಗಳಿಗೆ ಪ್ರವಾಸಿಗರ ಎಂಟ್ರಿಯನ್ನು ಬಂದ್ ಮಾಡುವಂತೆ ಇಲ್ಲವೆ ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.
ತಗ್ಗು ಪ್ರದೇಶಗಳ ಜಲಾವೃತ, ಮಣ್ಣು ಕುಸಿತದಿಂದ ಬಂಡೆಗಳು ಬೀಳುವ ಸಾಧ್ಯತೆಯಿದೆ ಎಂದು ತಿಳಿಸಿರುವ ಐಎಂಡಿ, ಹಠಾತ್ ಪ್ರವಾಹಕ್ಕೆ ಒಳಗಾಗುವ ಪ್ರದೇಶಗಳನ್ನು ತಪ್ಪಿಸಲು ಮತ್ತು ವಿದ್ಯುತ್ ಕಡಿತ ಮತ್ತು ಸಂಚಾರ ಅಡೆತಡೆಗಳಿಗೆ ಸಿದ್ಧರಾಗಿರಲು ಜನರಿಗೆ ಎಚ್ಚರಿಕೆ ನೀಡಿದೆ.
ವರದಿಯ ಪ್ರಕಾರ, ಬೆಂಗಳೂರಿನಲ್ಲಿ ಅತಿ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ. ನಾಳೆ ತಾಪಮಾನವು 26.4 ಡಿಗ್ರಿ ಸೆಲ್ಸಿಯಸ್‌ನಿಂದ 21.3 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಬಹುದು. ಕರ್ನಾಟಕದಲ್ಲಿ ಜೂನ್ 27ರಂದು ಆಗುಂಬೆಯಲ್ಲಿ ಅತಿ ಹೆಚ್ಚು ಅಂದರೆ 81.5 ಮಿಮೀ ಮತ್ತು ಬೆಂಗಳೂರು ನಗರದಲ್ಲಿ ಅತಿ ಕಡಿಮೆ ಅಂದರೆ 0.1 ಮಿಮೀ ಮಳೆಯಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ಪ್ರಕಾರ, ಜೂನ್ 28ಕ್ಕೆ ಕಬಿನಿ ಜಲಾಶಯಕ್ಕೆ ನೀರಿನ ಒಳಹರಿವು 20,113 ಕ್ಯೂಸೆಕ್ ಇದೆ.
Advertisement