
ಬಳ್ಳಾರಿ: ಬಳ್ಳಾರಿಯ ನಾಲ್ವರು ರೈತರು ದಲ್ಲಾಳಿಗಳ ಕಾಟದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಸಿದ ರೈತರನ್ನು ರುದ್ರೇಶ್, ಶೇಖರಪ್ಪ, ಹನುಮಂತ, ಕೋಣೇರಪ್ಪ ಎಂದು ಗುರುತಿಸಲಾಗಿದೆ. ಸದ್ಯ ನಾಲ್ವರು ರೈತರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಗ್ರಿಗ್ರೇಡ್ ಕಂಪನಿಯ ದಲ್ಲಾಳಿಗಳಾದ ವಿರೂಪಾಕ್ಷಪ್ಪ, ಸುದರ್ಶನ, ರಾಯರೆಡ್ಡಿ ಮೂಲಕ ಕಳೆದ ವರ್ಷ ರೈತರು ಮೆಣಸಿನಕಾಯಿ ಮಾರಾಟ ಮಾಡಿದ್ದರು. ಆದರೆ 1 ಕೋಟಿ 93 ಲಕ್ಷ ರೂಪಾಯಿ ಹಣವನ್ನು ದಲ್ಲಾಳಿಗಳು ಬಾಕಿ ಉಳಿಸಿಕೊಂಡಿದ್ದಾರೆ. ಹಣ ನೀಡದೆ ದಲ್ಲಾಳಿಗಳು ಸತಾಯಿಸುತ್ತಿದ್ದು ಇದರಿಂದ ಮನನೊಂದ ರೈತರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
Advertisement