ಜಾತಿಗಣತಿ ವರದಿ ಒಪ್ಪಿದರೆ ಹೋರಾಟ: ಸರ್ಕಾರಕ್ಕೆ ವೀರಶೈವ-ಲಿಂಗಾಯತ ಮಹಾಸಭಾ ಎಚ್ಚರಿಕೆ

ಜಾತಿಗಣತಿ ವರದಿಯನ್ನು ಸರ್ಕಾರ ಒಪ್ಪಬಾರದು, ಒಪ್ಪಿದರೆ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಎಚ್ಚರಿಕೆ ನೀಡಿದೆ.
ಜಾತಿಗಣತಿ ವರದಿ ಒಪ್ಪಿದರೆ ಹೋರಾಟ: ಸರ್ಕಾರಕ್ಕೆ ವೀರಶೈವ-ಲಿಂಗಾಯತ ಮಹಾಸಭಾ ಎಚ್ಚರಿಕೆ

ಬೆಂಗಳೂರು: ಜಾತಿಗಣತಿ ವರದಿಯನ್ನು ಸರ್ಕಾರ ಒಪ್ಪಬಾರದು, ಒಪ್ಪಿದರೆ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಎಚ್ಚರಿಕೆ ನೀಡಿದೆ.

ಈ ಕುರಿತು ಮಾತನಾಡಿರುವ ಮಹಾಸಭಾ ಕಾರ್ಯದರ್ಶಿ ಹೆಚ್.ಎಂ.ರೇಣುಕ ಪ್ರಸನ್ನ ಅವರ, ಮೊದಲಿಗೆ ಜಾತಿ ಗಣತಿ ಸಮೀಕ್ಷೆಯ ಉದ್ದೇಶದಿಂದಲೇ ಕಾಂತರಾಜು ಆಯೋಗ ರಚಿಸಲಾಗಿತ್ತು. ನಂತರ ಇದನ್ನು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಾಗಿ ಬದಲಾಯಿಸಲಾಯಿತು. ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಈಗ ನೀಡಿರುವ ವರದಿಯ ಬಗ್ಗೆ ಹಲವು ಅನುಮಾನಗಳಿವೆ. ಆದ್ದರಿಂದ ವರದಿಯನ್ನು ಅಂಗೀಕರಿಸಬಾರದು. ಒಂದು ವೇಳೆ ಅಂಗೀಕರಿಸಿದ್ದೇ ಆದರೆ, ಸ್ವಾಮೀಜಿಗಳ ಜೊತೆಗೂಡಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.

ಜಾತಿಗಣತಿ ವರದಿ ಒಪ್ಪಿದರೆ ಹೋರಾಟ: ಸರ್ಕಾರಕ್ಕೆ ವೀರಶೈವ-ಲಿಂಗಾಯತ ಮಹಾಸಭಾ ಎಚ್ಚರಿಕೆ
ಜಾತಿ ಗಣತಿ ವರದಿ ಸ್ವೀಕಾರಕ್ಕೆ ಆಕ್ಷೇಪ: ಹೈಕೋರ್ಟ್‌ನಲ್ಲಿಂದು ಅರ್ಜಿ ವಿಚಾರಣೆ

ವರದಿ ಸಿದ್ಧವಾಗಿ ಸುಮಾರು 8 ವರ್ಷಗಳಾಗಿವೆ ಈ ಅವಧಿಯಲ್ಲಿ ಜಾತಿವಾರು ಜನಸಂಖ್ಯೆಯಲ್ಲಿ ಸಾಕಷ್ಟು ಏರುಪೇರಾಗಿವೆ. ಈ ವರದಿ ಅಂಗೀಕರಿಸುವುದರಿಂದ ಎಲ್ಲಾ ಸಮುದಾಯಗಳಿಗೂ ಅನ್ಯಾಯವಾಗುತ್ತದೆ. ಹೀಗಾಗಿ ಮಹಾಸಭಾವು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದೆ. ದಾವಣಗೆರೆಯಲ್ಲಿ ನಡೆದ 24ನೇ ಮಹಾಧಿವೇಶನದಲ್ಲೂ ಈ ವರದಿಯನ್ನು ಅಂಗೀಕರಿಸದಂತೆ ನಿರ್ಣಯ ಕೈಗೊಳ್ಳಲಾಗಿತ್ತು ಎಂದು ತಿಳಿಸಿದರು.

ವೀರಶೈವ-ಲಿಂಗಾಯ ಸಮುದಾಯ ಕರ್ನಾಟಕದ ಅತಿದೊಡ್ಡ ಸಮುದಾಯಗಳಲ್ಲಿ ಒಂದಾಗಿದೆ. ಸಮುದಾಯದವರಿಗೆ 8 ವಕ್ಷದ ಹಿಂದೆ ಮಾಹಿತಿ ಕೊರತೆ ಇತ್ತು. ದತ್ತಾಂಶ ಸಂಗ್ರಹಿಸುವ ವೇಳೆ ನಿಗದಿಪಡಿಸಿದ ಸಂಕೇತ ನಮೂದಿಸದೇ ಇರುವುದರಿಂದ ಇದೀ ಸಮುದಾಯ ಜನಸಂಖ್ಯೆಯೇ ಕ್ಷೀಣಿಸಿದೆ. ಗಣತಿಗೆ ನಿಯುಕ್ತರಾದ ಸಿಬ್ಬಂದಿ ಹವು ಮನೆಗಳಿಗೆ ಖುದ್ದು ಭೇಟಿ ನೀಡದೇ ಸರಿಯಾದ ಮಾಹಿತಿಯನ್ನು ದಾಖಲಿಸಿಲ್ಲ. ಈ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಇನ್ನು ತರಾತುರಿಯಲ್ಲಿ ಅಂಗೀಕರಿಸಿದರೆ ಉಪಯೋಗಕ್ಕಿಂತ ಹಾನಿಯೇ ಹೆಚ್ಚಾಗುತ್ತದೆ. ಆದ್ದರಿಂದ ಸರ್ಕಾರ ವರದಿಯನ್ನು ತಿರಸ್ಕರಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಾತಿಗಣತಿ ವರದಿ ಒಪ್ಪಿದರೆ ಹೋರಾಟ: ಸರ್ಕಾರಕ್ಕೆ ವೀರಶೈವ-ಲಿಂಗಾಯತ ಮಹಾಸಭಾ ಎಚ್ಚರಿಕೆ
ನಾನ್ಯಾವ ಜಾತಿ? ಮಾಹಿತಿ ಪಡೆಯಲು ಯಾರೂ ನನ್ನ ಬಳಿ ಬಂದಿಲ್ಲ: ಸಿದ್ದಗಂಗಾ ಶ್ರೀ

ಜಾತಿವಾರು ಜನಸಂಖ್ಯೆ (ಅಂದಾಜು) ಇಂತಿದೆ...

  • ಎಸ್'ಸಿ: 1.08 ಕೋಟಿ

  • ಮುಸ್ಲಿಂ: 70 ಲಕ್ಷ

  • ಲಿಂಗಾಯತ: 65 ಲಕ್ಷ

  • ಒಕ್ಕಲಿಗ: 60 ಲಕ್ಷ

  • ಕುರುಬ: 45 ಲಕ್ಷ

  • ಎಸ್ಟಿ: 40.45 ಲಕ್ಷ

  • ಈಡಿಗ: 15 ಲಕ್ಷ

  • ವಿಶ್ವಕರ್ಮ: 15 ಲಕ್ಷ

  • ಉಪ್ಪಾರ: 15 ಲಕ್ಷ

  • ಬೆಸ್ತ: 15 ಲಕ್ಷ

  • ಬ್ರಾಹ್ಮಣ: 14 ಲಕ್ಷ

  • ಗೊಲ್ಲ: 10 ಲಕ್ಷ

  • ಮಡಿವಾಳ: 6 ಲಕ್ಷ

  • ಕುಂಬಾರ: 5 ಲಕ್ಷ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com