ಚಿಕ್ಕೋಡಿ: ರಾಮಮಂದಿರ ಸ್ಪೋಟಿಸುವುದಾಗಿ ಅನಾಮಧೇಯ ಪತ್ರ ಪತ್ತೆ, ತೀವ್ರ ತನಿಖೆ

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಹಸಿರಾಗಿರುವಂತೆಯೇ ಇತ್ತ ರಾಮಮಂದಿರ ಸ್ಫೋಟಿಸುವುದಾಗಿ ಹೇಳಿ ಬೆದರಿಕೆ ಪತ್ರ ಲಭಿಸಿರುವ ಘಟನೆ ವರದಿಯಾಗಿದೆ.
ರಾಮಮಂದಿರ ಸ್ಫೋಟ ಬೆದರಿಕೆ ಪತ್ರ
ರಾಮಮಂದಿರ ಸ್ಫೋಟ ಬೆದರಿಕೆ ಪತ್ರ

ಚಿಕ್ಕೋಡಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಹಸಿರಾಗಿರುವಂತೆಯೇ ಇತ್ತ ರಾಮಮಂದಿರ ಸ್ಫೋಟಿಸುವುದಾಗಿ ಹೇಳಿ ಬೆದರಿಕೆ ಪತ್ರ ಲಭಿಸಿರುವ ಘಟನೆ ವರದಿಯಾಗಿದೆ.

ಚಿಕ್ಕೋಡಿಯ ನಿಪ್ಪಾಣಿ ನಗರದ ರಾಮ ಮಂದಿರ ಸ್ಪೋಟಿಸುವುದಾಗಿ ಅನಾಮಧೇಯ ಪತ್ರವೊಂದು ದೇವಸ್ಥಾನದ ಗರ್ಭಗುಡಿಯಲ್ಲಿ ಪತ್ತೆಯಾಗಿದೆ. ನಿಪ್ಪಾಣಿ ನಗರದ ಶ್ರೀರಾಮ ಮಂದಿರದಲ್ಲಿ ಫೆ. 7 ರಂದು ಹಿಂದಿ ಭಾಷೆಯಲ್ಲಿ ಬರೆದ ಪತ್ರ ಪತ್ತೆಯಾಗಿದೆ. ಇದಲ್ಲದೆ ಫೆ.10 ರಂದು ಹನುಮಾನ ದೇವಸ್ಥಾನದಲ್ಲಿ ಮತ್ತೊಂದು ಪತ್ರ ಪತ್ತೆಯಾಗಿದೆ.

ಇದರಿಂದ ಗಡಿ ಭಾಗದಲ್ಲಿ ಆತಂಕ ಸೃಷ್ಟಿಯಾಗಿದ್ದು. ಪೊಲೀಸರು ತೀವ್ರ ಎಚ್ಚರಿಕೆ ವಹಿಸಿದ್ದಾರೆ. ದೇವಸ್ಥಾನ ಬಳಿ ಹೆಚ್ಚಿನ ಪೊಲೀಸ್ ಪಡೆ ನಿಯೋಜಿಸಲಾಗಿದ್ದು ಸಿಸಿಟಿವಿ ಅಳವಡಿಸಲಾಗಿದೆ.

ರಾಮಮಂದಿರ ಸ್ಫೋಟ ಬೆದರಿಕೆ ಪತ್ರ
ಮೆಟಲ್ ಡಿಟೆಕ್ಟರ್, ತಪಾಸಣೆ, ನಿವೃತ್ತ ಆರ್ಮಿ ಆಫೀಸರ್‌‌; ಸಕಲ ಭದ್ರತೆಯೊಂದಿಗೆ Rameshwaram Cafe 'ರೀ ಓಪನ್'; ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್!

ಪತ್ರದಲ್ಲೇನಿದೆ?

‘ಅಲ್ಲಾಹು ಅಕ್ಬರ್’ ಎಂಬ ಬರಹ ಇದೆ ಎನ್ನಲಾಗಿದೆ. “ನಿಮ್ಮ ರಾಮಮಂದಿರ ಸ್ಫೋಟಿಸುತ್ತೇವೆ. ದೊಡ್ಡ ಪ್ರಮಾಣದಲ್ಲೇ ಸ್ಫೋಟಿಸುತ್ತೇವೆ… ಸುಧಾರಿಸಿಕೊಳ್ಳಿ” ಅಂತ ಪತ್ರದಲ್ಲಿ ಬೆದರಿಕೆ ಒಡ್ಡಲಾಗಿದೆ. ಫೆಬ್ರವರಿ 29 ಹಾಗೂ 28ರ ದಿನಾಂಕದಲ್ಲಿ ಪತ್ರ ಬರೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಮುಂದಿನ 20 ಹಾಗೂ 21ನೇ ತಾರೀಖಿನ ಒಳಗಡೆ ಸ್ಫೋಟಿಸುವುದಾಗಿ ಅನಾಮಧೇಯ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಕಳೆದ ಫೆಬ್ರವರಿ 27 ಹಾಗೂ 28ರಂದೇ ದೇವಸ್ಥಾನದಲ್ಲಿ ಅನಾಮಧೇಯ ವ್ಯಕ್ತಿ ಬೆದರಿಕೆ ಪತ್ರ ಇಟ್ಟು ಹೋಗಿದ್ದಾನೆ ಎನ್ನಲಾಗಿದ್ದು, ಮುಂದಿನ 20 ಹಾಗೂ 21ನೇ ತಾರೀಖಿನ ಒಳಗೆ ಸ್ಫೋಟಿಸುತ್ತೇವೆ ಅಂತ ಬೆದರಿಕೆ ಒಡ್ಡಲಾಗಿದೆ.

ಪೊಲೀಸರಿಂದ ಬಿಗಿ ಭದ್ರತೆ

ಇನ್ನು ಬೆದರಿಕೆ ಪತ್ರ ಹಿನ್ನಲೆಯಲ್ಲಿ ನಿಪ್ಪಾಣಿ ಶಹರ ಪೊಲೀಸರು ಕಟ್ಟೆಚ್ಚರಿಕೆ ವಹಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ರಾಮ ಮಂದಿರದ ಆವರಣದಲ್ಲಿ 14 ಸಿಸಿಟಿವಿ ಅಳವಡಿಸಲಾಗಿದೆ. ಈ ಸಂಬಂಧ ನಿಪ್ಪಾಣಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮಮಂದಿರ ಸ್ಫೋಟ ಬೆದರಿಕೆ ಪತ್ರ
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಎನ್ಐಎಯಿಂದ ಶಂಕಿತನ ಮತ್ತೆರಡು ವಿಡಿಯೋ ಬಿಡುಗಡೆ

ಸಚಿವರ ಪ್ರತಿಕ್ರಿಯೆ

ಇನ್ನು ಬೆದರಿಕೆ ಪತ್ರದ ವಿಚಾರಕ್ಕೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಬೆದರಿಕೆ ಪತ್ರ, ಈ ಮೇಲ್ ಕಳುಹಿಸುತ್ತಾರೆ. ನಮ್ಮ ಪೊಲೀಸರು ಇಲಾಖೆ ಎಚ್ಚರಿಕೆ ವಹಿಸುತ್ತದೆ. ಜಿಲ್ಲೆಯಲ್ಲಿರುವ ಎಸ್‌ಪಿ ಆ ಭಾಗದ ಐಜಿ ವ್ಯವಸ್ಥಿತವಾಗಿ ಮಾಡಿಕೊಳ್ಳುತ್ತಾರೆ ಅಂತ ಹೇಳಿದ್ದಾರೆ. KSRTC ಎಂಡಿಗೆ ಆದೇಶ ಕೊಟ್ಟಿದ್ದೇನೆ. ಎಲ್ಲಾ ಲಗೆಜುಗಳು ತನಿಖೆ ಮಾಡ್ತಾರೆ. ಎಲ್ಲಾ ದೇವಸ್ಥಾನಗಳಿಗೂ ಸೂಕ್ತ ಭದ್ರತೆ ನೀಡಲು ಸೂಚನೆ ನೀಡುತ್ತೇನೆ ಅಂತ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com