ಮೆಟಲ್ ಡಿಟೆಕ್ಟರ್, ತಪಾಸಣೆ, ನಿವೃತ್ತ ಆರ್ಮಿ ಆಫೀಸರ್‌‌; ಸಕಲ ಭದ್ರತೆಯೊಂದಿಗೆ Rameshwaram Cafe ರೀ ಓಪನ್!

ಸ್ಫೋಟದ ಮೂಲಕ ಬೆಂಗಳೂರಿನಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದ್ದ ರಾಮೇಶ್ವರಂ ಕೆಫೆ ಕೇವಲ ಒಂದು ವಾರದಲ್ಲೇ ಮತ್ತೆ ಪುನಾರಂಭ ಮಾಡಿದ್ದು, ಈ ಬಾರಿ ಸಕಲ ಭದ್ರತಾ ಸಿದ್ದತೆಗಳೊಂದಿಗೆ ಕೆಫೆ ರೀ ಓಪನ್ ಆಗಿದೆ.
ರಾಮೇಶ್ವರಂ ಕೆಫೆ ರೀ ಓಪನ್
ರಾಮೇಶ್ವರಂ ಕೆಫೆ ರೀ ಓಪನ್TNIE
Updated on

ಬೆಂಗಳೂರು: ಸ್ಫೋಟದ ಮೂಲಕ ಬೆಂಗಳೂರಿನಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದ್ದ ರಾಮೇಶ್ವರಂ ಕೆಫೆ ಕೇವಲ ಒಂದು ವಾರದಲ್ಲೇ ಮತ್ತೆ ಪುನಾರಂಭ ಮಾಡಿದ್ದು, ಈ ಬಾರಿ ಸಕಲ ಭದ್ರತಾ ಸಿದ್ದತೆಗಳೊಂದಿಗೆ ಕೆಫೆ ರೀ ಓಪನ್ ಆಗಿದೆ.

ಹೌದು.. ರಾಜಧಾನಿ ಬೆಂಗಳೂರಿನ (Bengaluru) ರಾಮೇಶ್ವರಂ ಕೆಫೆ ರೀಓಪನ್ (Rameshwaram Cafe Reopens) ಆಗಿದ್ದು, ಸ್ಫೋಟ ಸಂಭವಿಸಿದ ಬಳಿಕ ಬಂದ್‌‌ ಆಗಿದ್ದ ರಾಮೇಶ್ವರಂ ಕೆಫೆಯಲ್ಲಿ ಪುನಾರಂಭವಾಗಿದ್ದು, ಹೋಮ-ಹವನ ಪೂಜಾ ಕಾರ್ಯಗಳು ನೆರವೇರಿದ್ದವು. ಇಂದಿನಿಂದ ಕೆಫೆ ರೀಓಪನ್‌ ಸರ್ವೀಸ್ ಶುರು ಮಾಡಲಾಗಿದ್ದು, ಪೊಲೀಸ್ (Bengaluru Police) ಬಿಗಿ ಭದ್ರತೆಯಲ್ಲಿ ರಾಮೇಶ್ವರಂ ಕೆಫೆ ಶುರುವಾಗಿದೆ.

ರಾಮೇಶ್ವರಂ ಕೆಫೆ ರೀ ಓಪನ್
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಎನ್ಐಎಯಿಂದ ಶಂಕಿತನ ಮತ್ತೆರಡು ವಿಡಿಯೋ ಬಿಡುಗಡೆ

ಭದ್ರತೆ ಹೆಚ್ಚಳ

ಸ್ಫೋಟದ ಬಳಿಕ ಕೆಫೆಯಲ್ಲಿನ ಭದ್ರತೆ ಹೆಚ್ಚಳ ಮಾಡಲಾಗಿದ್ದು, ಪೊಲೀಸ್ (Bengaluru Police) ಬಿಗಿ ಭದ್ರತೆಯಲ್ಲಿ ರಾಮೇಶ್ವರಂ ಕೆಫೆ ಶುರುವಾಗಿದೆ. ನಿವೃತ್ತ ಆರ್ಮಿ ಆಫೀಸರ್‌‌ಗಳಿಂದ ಕೆಫೆಗೆ ಭದ್ರತೆ ನೀಡಲಾಗಿದೆ. 2 ಮೆಟಲ್ ಡಿಟೆಕ್ಟರ್ (Metal Detector) ಅಳವಡಿಸಲಾಗಿದ್ದು, ಕೆಫೆಗೆ ಬರುವ ಪ್ರತಿ ಗ್ರಾಹಕರ ತಪಾಸಣೆಗೊಳಪಡಿಸಲಾಗುತ್ತಿದೆ. ಜನರ ಮೇಲೆ ನಿಗಾ ಇಡಲು 2 ವಾಚ್‌ ಡಾಗ್ಸ್, ಎಲ್ಲಾ ಬ್ರಾಂಚ್‌‌ಗಳಲ್ಲಿ ಹೆಚ್ಚಿನ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಕೆಫೆಯ ಪ್ರವೇಶದ್ವಾರದಲ್ಲಿ 2 ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಜಲಾಗಿದ್ದು, ಭದ್ರತೆಗೆ ಇಬ್ಬರು ಸಿಬ್ಬಂದಿಗಳನ್ನೂ ಕೂಡ ನಿಯೋಜಿಸಲಾಗಿದೆ. ಕೆಫೆಗೆ ಬರುವ ಪ್ರತಿ ಗ್ರಾಹಕರ ತಪಾಸಣೆ ಮಾಡಲಾಗುತ್ತಿದ್ದು, ಜನರ ಮೇಲೆ ನಿಗಾ ಇಡಲು 2 ವಾಚ್‌ ಡಾಗ್ಸ್ ನಿಯೋಜಿಸಲಾಗಿದೆ. ಸ್ಫೋಟ ಸಂಭವಿಸಿದ ವೈಟ್ ಫೀಲ್ಡ್ ಬ್ರಾಂಚ್ ಮಾತ್ರವಲ್ಲದೇ ನಗರದಲ್ಲಿರುವ ರಾಮೇಶ್ವರ ಕೆಫೆಯ ಎಲ್ಲಾ ಬ್ರಾಂಚ್‌‌ಗಳಲ್ಲಿ ಹೆಚ್ಚಿನ ಸಿಸಿ ಕ್ಯಾಮೆರಾಗಳನ್ನು ಅಲವಡಿಸಲಾಗಿದೆ. ನಿವೃತ್ತ ಆರ್ಮಿ ಆಫೀಸರ್‌‌ಗಳಿಂದ ಕೆಫೆಗೆ ಭದ್ರತೆಗೆ ನಿಯೋಜಿಸಲಾಗಿದ್ದು, ಕೆಫೆಯ ಒಟ್ಟು 1500 ಸಿಬ್ಬಂದಿಗಳಿಗೆ ರಕ್ಷಣಾ ತರಬೇತಿ ನೀಡಲಾಗುತ್ತಿದೆ.

ಇದು ನಿಜವಾದ ಭಾರತೀಯರ ಶಕ್ತಿ: ಮಾಲೀಕರ ಸುದ್ದಿಗೋಷ್ಠಿ

ಈ ವೇಳೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಮೇಶ್ವರಂ ಕೆಫೆ ಮಾಲೀಕರಾದ ದಿವ್ಯಾ ರಾಘವೇಂದ್ರ ರಾವ್ ದಂಪತಿ ಅವರು, ನನ್ನ ಪತ್ನಿ ದಿವ್ಯಾ ರಾಘವೇಂದ್ರ ಅವರೇ ಹೋಟೆಲ್​​ ಮಾಲೀಕತ್ವದಲ್ಲಿ ನಡೆಯುತ್ತಿದೆ. ಎಲ್ಲರಿಗೂ ಧನ್ಯವಾದ, ಭಾರತೀಯರ ಆತ್ಮಸ್ಥೈರ್ಯವನ್ನು ಈ ಘಟನೆ ಕುಗ್ಗಿಸಿಲ್ಲ, ನಿಮ್ಮೆಲ್ಲರ ಸಹಕಾರಕ್ಕೆ ಇದು ನಿಜವಾದ ಭಾರತೀಯರ ಶಕ್ತಿ. ಇಂದು ರಾಮೇಶ್ವರಂ ಕೆಫೆ ಪುನರ್ ಆರಂಬವಾಕ್ತಿರುವುದು ಇದಕ್ಕೆ ಸಾಕ್ಷಿ, ಸ್ಥಳೀಯರು ನಮಗೆ ಮುಂದೆ ಬಂದು ಸಮಾಧಾನ ಹೇಳಿದ್ದಾರೆ. ಪೊಲೀಸರಿಗೆ, ಸ್ಥಳೀಯರಿಗೆ, ಮಾಧ್ಯಮದವರಿಗೆ ಧನ್ಯವಾದ ಎಂದು ಹೇಳಿದರು.

2012 ರಿಂದ ನಮ್ಮ ಜರ್ನಿ ತಳ್ಳುವ ಗಾಡಿಯಿಂದ ಆರಂಭವಾಗಿದ್ದು, ಬೆಳಗ್ಗೆ 6 ರಿಂದ ಗ್ರಾಹಕರ ಸೇವೆಗೆ ತೆರೆದುಕೊಳ್ಳುತ್ತೆ. ನಮ್ಮ ಭಾರತೀಯರು ಯಾರು ಇಂತಹ ಕೃತ್ಯ ಎಸಗುವುದಿಲ್ಲ. ನಿಮ್ಮೆಲ್ಲರ ಆಶೀರ್ವಾದದಿಂದ ನಾವು ಇಲ್ಲಿ ಬಂದಿದ್ದೇವೆ, ನಮ್ಮ ಕುಟುಂಬದವರಂತೆ ನಮ್ಮ ಜತೆಗಿದ್ದೀರಾ? ನಮ್ಮ ಆತ್ಮ ಸಂತೃಪ್ತಿಗಾಗಿ ಕೆಲಸ ಮಾಡ್ತಿದ್ದೇವೆ. ಭಾರತೀಯ ಸಂಸ್ಕೃತಿಯನ್ನು ಅಹಾರದ ಮೂಲಕ ಇಡೀ ಪ್ರಪಂಚಕ್ಕೆ ತೋರಿಸುವುದು. ನಾವು ನಂಬರ್ ಗೇಮ್ ಗೆ ಒಗ್ಗಿಕೊಂಡಿಲ್ಲ, ನೇರವಾಗಿ ಈ ಕೃತ್ಯ ಎಸಗಿದವರಿಗೆ. ನಮಗೆ ಇದರಿಂದ ಹಾನಿಯಾಗಿದ್ದು ನಮಗೆ ಹೋಟೇಲ್ ಉದ್ಯಮಕ್ಕೆ ಸಾಕಷ್ಟು ಕ್ರಮ ವಹಿಸಲಿದೆ. ಹೆಚ್ಚಿನ ಸಿಸಿ ಕ್ಯಾಮೆರಾ, ಮೆಟಲ್ ಡಿಟೇಕ್ಟರ್ ಇರಲಿದೆ. ನಿವೃತ್ತ ಆರ್ಮಿ ಅಧಿಕಾರಿಗಳು ನಾವು ಭದ್ರತೆ ಸಿಬ್ಬಂದಿಯಾಗಿ ನೇಮಿಸಿಕೊಂಡಿದ್ದೇವೆ. 1500 ಸಿಬ್ಬಂದಿಯೂ ಸೆಕ್ಯುರಿಟಿ ಗಾರ್ಡ್ ಗಳಾಗಿ ತಯಾರು ಮಾಡಿದ್ದೇವೆ ಎಂದರು.

ರಾಮೇಶ್ವರಂ ಕೆಫೆ ರೀ ಓಪನ್
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ; NIAಗೆ ಮಹತ್ವದ ಸುಳಿವು, ಮೂವರು ಶಂಕಿತರು ವಶಕ್ಕೆ!

ಸ್ಫೋಟದ ಬಳಿಕ ಗಾಯಾಳುಗಳನ್ನು ಮೊದಲಿಗೆ ಆಸ್ಪತ್ರೆಗೆ ದಾಖಲಿಸಿದ್ದರು ನಮ್ಮ ಸಿಬ್ಬಂದಿ. ಕಿವಿಯ ಬಳಿ ಕಟ್ ಆದ ನಮ್ಮ ಸಿಬ್ಬಂದಿ ಗಾಯಾ ವಾಸಿಯಾದ ಬಳಿಕ ಮತ್ತೆ ಕೆಲಸಕ್ಕೆ ಬರ್ತಿನಿ ಎಂದಿದ್ದಾರೆ. ಎನ್ಐಎ ಇನ್ವೆಸ್ಟಿಗೇಷನ್ ಮಾಡ್ತಿದೆ, ಯಾರೇ ಕೃತ್ಯ ಮಾಡಿದ್ರು ನಮ್ಮ ಮುಂದೆ ಅವರನ್ನು ನಿಲ್ಲಿಸಲಿದ್ದಾರೆ ವಿಶ್ವಾಸ ಇದೆ. ಇದು ಹೋಟೆಲ್ ವೈರತ್ವದ ಘಟನೆಯಲ್ಲ, ಇದು ಬೇರೆ ಉದ್ದೇಶವಾಗಿದೆ ಎಂದಿದ್ದಾರೆ.

ಭಾರತ ಮಾತ್ರವಲ್ಲ.. ವಿದೇಶದಲ್ಲೂ ರಾಮೇಶ್ವರಂ ಕೆಫೆ ಬ್ರಾಂಚ್ ಗಳು

ನಾವು ಇಡೀ ಭಾರತದಲ್ಲಿ ಎಲ್ಲಾ ಬ್ರಾಂಚ್ ಗಳನ್ನ ಮಾಡಲು ಸಿದ್ದತೆ ನಡೆಸಿದೆ. ಸಿಂಗಾಪುರ್, ದುಬೈ ಹಾಗೂ ಯುಎಸ್ ಎ ನಲ್ಲಿ ನಮ್ಮ ಬ್ರಾಂಚ್ ಮಾಡಲಿದ್ದೇವೆ. ನಮ್ಮ ಹೋಟೆಲ್ ನಲ್ಲಿ ಯಾಕೆ ಬಾಂಬ್ ಇಟ್ಟ ಅನ್ನೋದೆ ಶಾಕ್! ಬಹುಶಃ ಹೋಟೆಲ್ ನಲ್ಲಿ ಜನ ಹೆಚ್ಚು ಇರ್ತಾರೆ ಅನ್ನೋ ಕಾರಣಕ್ಕೆ ಬ್ಲಾಸ್ಟ್ ಮಾಡಿದ್ನಾ ಗೊತ್ತಿಲ್ಲ. ತನಿಖೆ ನಡೆಯುತ್ತಿದೆ. ಈ ಘಟನೆಯಿಂದ ನಾವು ಭಯಗೊಂಡಿಲ್ಲ. ಪ್ರತಿಯೊಂದು ಸ್ಟೇಟ್ ಹಾಗೂ ಪ್ರತಿಯೊಂದು ಕಂಟ್ರಿಯಲ್ಲಿ ಬ್ರಾಂಚ್ ಪ್ರಾರಂಭವಾಗಲಿದೆ. ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರು ನಮಗೆ ಸಹಕಾರ ಕೊಟ್ಟಿದ್ದಾರೆ ಎಂದು ಕೆಫೆ ಮಾಲೀಕ ರಾಘವೇಂದ್ರ ರಾವ್ ಧನ್ಯವಾದ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com