ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಎನ್ಐಎಯಿಂದ ಶಂಕಿತನ ಮತ್ತೆರಡು ವಿಡಿಯೋ ಬಿಡುಗಡೆ

ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಘಟನೆ ನಡೆದು 7 ದಿನಗಳಾದರೂ ಸ್ಫೋಟ ನಡೆಸಿದ್ದ ಆಗಂತುಕ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಿರುವ ಎನ್ಐಎ ಅಧಿಕಾರಿಗಳು ಇದೀಗ ಶಂಕಿತನ ಮತ್ತೆರಡು ವಿಡಿಯೋಗಳನ್ನು ಬಿಡುಗಡೆ ಮಾಡಿದೆ.
ರಾಮೇಶ್ವರಂ ಕೆಫೆ
ರಾಮೇಶ್ವರಂ ಕೆಫೆ

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಘಟನೆ ನಡೆದು 7 ದಿನಗಳಾದರೂ ಸ್ಫೋಟ ನಡೆಸಿದ್ದ ಆಗಂತುಕ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಿರುವ ಎನ್ಐಎ ಅಧಿಕಾರಿಗಳು ಇದೀಗ ಶಂಕಿತನ ಮತ್ತೆರಡು ವಿಡಿಯೋಗಳನ್ನು ಬಿಡುಗಡೆ ಮಾಡಿದೆ.

ಒಂದರಲ್ಲಿ ಶಂಕಿತ ಬಾಂಬರ್ ಬಿಎಂಟಿಸಿ ಬಸ್ ಹತ್ತಿ, ಹಿಂದಿನ ಸೀಟ್ನಲ್ಲಿ ಕುಳಿತುಕೊಳ್ಳುತ್ತಾನೆ. ಮತ್ತೊಂದು ವಿಡಿಯೋದಲ್ಲಿ ಬೇರೆ ಬಟ್ಟೆ ಧರಿಸಿದಂತೆ ಕಾಣುತ್ತಿದ್ದು, ಕ್ಯಾಪ್ ಹಾಗೂ ಮಾಸ್ಕ್ ತೆಗೆದು, ಆ ಕಡೆಯಿಂದ ಈ ಕಡೆ ಓಡಾಡುತ್ತಿರುವುದು ಕಂಡು ಬಂದಿದೆ.

ಈ ಕುರಿತು ಸಾರ್ವಜನಿಕ ಪ್ರಕಟಣೆ ಹೊರಡಿಸಿರುವ ಎನ್‌ಐಎ, ಮಾಹಿತಿ ನೀಡಿದವರ ಹೆಸರನ್ನು ಗೋಪ್ಯವಾಗಿ ಇಡಲಾಗುವುದು ಎಂದು ಹೇಳಿದೆ.

ಶಂಕಿತ ಬಾಂಬರ್​ನ ಸುಳಿವು ಸಿಕ್ಕ ಕೂಡಲೇ 080 29510900, 8904241100 ಹಾಗೂ ಇ–ಮೇಲ್‌ ವಿಳಾಸ info.blr.nia@gov.inಗೆ ಮಾಹಿತಿ ನೀಡಬಹುದು ‌ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ರಾಮೇಶ್ವರಂ ಕೆಫೆ
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಕಲಾವಿದ ಬಿಡಿಸಿರುವ ರೇಖಾ ಚಿತ್ರ ಅನಧಿಕೃತ; ಪೊಲೀಸರು

ಇನ್ನು ಪ್ರಕರಣ ಸಂಬಂಧ ಶಂಕಿತ ಉಗ್ರ ಬಳ್ಳಾರಿಯ ಮಿನಾಜ್ ಅಲಿಯಾಸ್ ಸುಲೇಮಾನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

ಇದೇ ವೇಳೆ ನ್ಯಾಯಾಲಯದ ಆದೇಶದ ಮೇರೆಗೆ ಬಳ್ಳಾರಿಯ ಸೈಯದ್ ಸಮೀರ್, ಮುಂಬೈ ನ ಅನಾಸ್ ಇಕ್ಬಾಲ್ ಶೇಖ್ ಹಾಗೂ ದೆಹಲಿಯ ಶಯಾನ್ ರಹಮಾನ್ ಅಲಿಯಾಸ್ ಹುಸೈನ್ ನನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ವಶಕ್ಕೆ ಪಡೆದಿರುವ ಶಂಕಿತ ಉಗ್ರರು ಇಸಿಸ್ ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದು, ದೇಶದಲ್ಲಿ ವಿದ್ವಂಸಕ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆಹಾಕಿದ್ದ ಎನ್ಐಎ ಅಧಿಕಾರಿಗಳು 2023ರ ಡಿಸೆಂಬರ್ 18ರಂದು ಮಿನಾಜ್ ಹಾಗೂ ಇತರರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಸದ್ಯ ವಶಕ್ಕೆ ಪಡೆದಿರುವ ಶಂಕಿತರನ್ನು ಬಳ್ಳಾರಿಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.

ಅಲ್ಲದೆ, ಕೆಫೆಯಲ್ಲಿ ಬಾಂಬ್ ಇಟ್ಟ ಬಳಿಕ ಬಾಂಬರ್ ವ್ಯಕ್ತಿಯೊಬ್ಬರನ್ನು ಬೆಳ್ಳಂದೂರು ಬಳಿ ಭೇಟಿ ಮಾಡಿದ್ದು, ಈ ವ್ಯಕ್ತಿಯನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ರಾಮೇಶ್ವರಂ ಕೆಫೆ
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ; NIAಗೆ ಮಹತ್ವದ ಸುಳಿವು, ಮೂವರು ಶಂಕಿತರು ವಶಕ್ಕೆ!

ಡಿಜಿಟಲ್ ಸಾಕ್ಷ್ಯದ ಆಧಾರದ ಮೇಲೆ, ವ್ಯಕ್ತಿಯನ್ನು ಪತ್ತೆಹಚ್ಚುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಬಾಂಬರ್‌ನೊಂದಿಗೆ ಆತನ ಸಂಪರ್ಕವನ್ನು ತಿಳಿಯಲು ವ್ಯಕ್ತಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ವ್ಯಕ್ತಿಯು ಬಾಂಬರ್‌ನ ಸಹವರ್ತಿಯೇ ಅಥವಾ ತನಿಖೆ ವೇಳೆ ದಾರಿ ತಪ್ಪಿಸಲು ನಡೆಸಲಾಗಿರುವ ಪ್ರಯತ್ನವೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ದಾರಿ ಕೇಳಲು ಕೂಡ ವ್ಯಕ್ತಿಯೊಂದಿಗೆ ಮಾತಕತೆ ನಡೆಸಿರುವ ಸಾಧ್ಯತೆಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com