ಎನ್ ಐಎ
ಎನ್ ಐಎ

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಆರೋಪಿ ಸುಳಿವಿಗೆ ರೂ. 10 ಲಕ್ಷ ಬಹುಮಾನ, ಅಮಾಯಕರಿಗೆ ತೊಂದರೆ

ಮಾರ್ಚ್ 1 ರಂದು ನಡೆದಿದ್ದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಹುಡುಕಾಟ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ, ಶಂಕಿತನನ್ನು ಬಂಧಿಸಿ ನ್ಯಾಯ ಕೊಡಿಸಲು ನೆರವಾಗುವವರಿಗೆ ರೂ. 10 ಲಕ್ಷ ಬಹುಮಾನ ಘೋಷಿಸಿದೆ.
Published on

ಬೆಂಗಳೂರು: ಮಾರ್ಚ್ 1 ರಂದು ನಡೆದಿದ್ದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಹುಡುಕಾಟ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ, ಶಂಕಿತನನ್ನು ಬಂಧಿಸಿ ನ್ಯಾಯ ಕೊಡಿಸಲು ನೆರವಾಗುವವರಿಗೆ ರೂ. 10 ಲಕ್ಷ ಬಹುಮಾನ ಘೋಷಿಸಿದೆ.

ಸ್ಫೋಟದ ನಂತರ ಈ ಅಸ್ಪಷ್ಟ ವ್ಯಕ್ತಿಯ ಮಸುಕಾದ ವೀಡಿಯೊ ಮತ್ತು ಫೋಟೋಗಳು ಟಿವಿ ಚಾನೆಲ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದವು. ಆದರೆ, ಎನ್‌ಐಎ ಬಹುಮಾನ ಘೋಷಿಸಿದ ಒಂದು ದಿನದ ನಂತರ, ಶಂಕಿತನ ರೇಖಾಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಎನ್ ಐಎ
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಎನ್ಐಎಯಿಂದ ಶಂಕಿತನ ಮತ್ತೆರಡು ವಿಡಿಯೋ ಬಿಡುಗಡೆ

ಈ ರೇಖಾಚಿತ್ರಗಳನ್ನು ಎನ್‌ಐಎ ಅಥವಾ ಪೊಲೀಸರಿಂದ ಅಧಿಕೃತಗೊಳಿಸದ ಜನರು ರಚಿಸಿದ್ದಾರೆ. ಮುಖದ ವೈಶಿಷ್ಟ್ಯಗಳ ರೇಖಾಚಿತ್ರ ಬಿಡಿಸುವ ಪ್ರತಿಭೆಯೊಂದಿಗೆ ಸಾಮಾನ್ಯ ಜನರು ದುಷ್ಕರ್ಮಿಯನ್ನು ಪತ್ತೆ ಹಚ್ಚಲು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ರೇಖಾಚಿತ್ರಗಳು ವೈರಲ್ ಆಗಿವೆ. ಇದು ಅಮಾಯಕ ವ್ಯಕ್ತಿಗಳ ಟಾರ್ಗೆಟ್ ಗೆ ಕಾರಣವಾಗಬಹುದು. ರೇಖಾಚಿತ್ರಗಳನ್ನು ಹೋಲುವ ಸಾವಿರಾರು ಮುಗ್ದರು, ಸಂಭಾವ್ಯ ಕಿರುಕುಳ, ಆಕ್ರಮಣ, ಅಥವಾ ವಿಚಾರಣೆಗಾಗಿ ಸೆರೆವಾಸಕ್ಕೆ ಗುರಿಯಾಗುವಂತೆ ಮಾಡಿದೆ.

ಸಮಸ್ಯೆಗಳು: ಅಸ್ಪಷ್ಟ ಚಿತ್ರಗಳು ಮತ್ತು ವೀಡಿಯೋಗಳು ಹೆಚ್ಚಿನ ಊಹೆಮಾಡಲಾದ ರೇಖಾಚಿತ್ರಗಳಿಗೆ ಕಾರಣವಾಗಿವೆ. ಟೋಪಿ, ಕನ್ನಡಕ ಮತ್ತು ಗಡ್ಡವನ್ನು ಹೊಂದಿರುವ ಒಂದೇ ರೀತಿಯ ವೈಶಿಷ್ಟ್ಯಗಳನ್ನು ಹೊಂದಿರುವ ರೇಖಾಚಿತ್ರಗಳಿಂದ ಯಾವುದೇ ಜನರನ್ನು ಶಂಕಿತರೆಂದು ಭಾವಿಸಬಹುದು. ಸಾಮಾನ್ಯವಾಗಿ, ತನಿಖೆಗಳು ತನಿಖಾಧಿಕಾರಿಗಳಿಂದ ಅಧಿಕಾರ ಪಡೆದ ಸ್ಕೆಚ್ ಕಲಾವಿದರನ್ನು ಒಳಗೊಂಡಿರುತ್ತವೆ. ಈ ಅಧಿಕೃತ ಸ್ಕೆಚ್ ಕಲಾವಿದರು ಪ್ರತ್ಯಕ್ಷದರ್ಶಿಗಳು ನೀಡಿದ ವಿವರಣೆಗಳ ಆಧಾರದ ಮೇಲೆ ಮುಖದ ವೈಶಿಷ್ಟ್ಯಗಳನ್ನು ತೋರಿಸುತ್ತಾರೆ. ಆದರೆ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಗಳು ಯಾರೂ ಇರಲಿಲ್ಲ, ಏಕೆಂದರೆ ಸ್ಫೋಟ ಸಂಭವಿಸಿದ ನಂತರ ವಿವರಗಳು ಹೊರಬಂದವು.

ಎನ್ ಐಎ
ರಾಮೇಶ್ವರ ಕೆಫೆ ಸ್ಫೋಟ ಪ್ರಕರಣ: ಬಾಂಬರ್ʼನ ಮಾಸ್ಕ್ ರಹಿತ ರೇಖಾಚಿತ್ರ ಬಿಡಿಸಿದ ಕಲಾವಿದ!

ಬೆಂಗಳೂರಿನಿಂದ ಭಟ್ಕಳದವರೆಗೂ ಶೋಧ ನಡೆಸಿದ ನಂತರ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಶಂಕಿತ ವ್ಯಕ್ತಿ ಬೀದಿಗಳಲ್ಲಿ, ಬಸ್‌ಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಮತ್ತು ವಿವಿಧ ಸ್ಥಳಗಳಲ್ಲಿ ನಡೆದುಕೊಂಡು ಹೋಗುತ್ತಿರುವ ವೀಡಿಯೊಗಳು ಮತ್ತು ಫೋಟೋಗಳು ಹೊರಗೆ ಬಂದವು. ಆದಾಗ್ಯೂ, 10 ಲಕ್ಷ ರೂ. ಬಹುಮಾನ ಭಾರೀ ಕ್ಯಾರೆಟ್‌ನಂತೆ ತೂಗಾಡುತ್ತಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ರೇಖಾಚಿತ್ರಗಳನ್ನು ತ್ವರಿತಗತಿಯಲ್ಲಿ ಹಾಕಲಾಗುತ್ತಿದೆ. ದುಬಾರಿ ಮೊತ್ತದ ಬಹುಮಾನದ ಭರವಸೆ

ದುರಾಶೆಯನ್ನು ಹೆಚ್ಚಿಸುವ ಮೂಲಕ ಹಾನಿಯನ್ನುಂಟುಮಾಡಬಹುದು. ಅದಕ್ಕಾಗಿಯೇ ಹಿರಿಯ ಪೊಲೀಸ್ ಅಧಿಕಾರಿಗಳು ಈ ರೇಖಾಚಿತ್ರಗಳನ್ನು ತಬ್ಬಿಬ್ಬುಗೊಳಿಸುವಂತಹದ್ದು ಎಂದಿದ್ದಾರೆ.

10 ಲಕ್ಷ ರೂ.ರಾಷ್ಟ್ರೀಯ ತನಿಖಾ ದಳದ ಬಹುಮಾನದ ಹಣ ಒಂದು ರೀತಿಯಲ್ಲಿ ಲಾಟರಿಯಾಗಿ ಮಾರ್ಪಟ್ಟಿದೆ. ಕೇವಲ ಒಬ್ಬ ವ್ಯಕ್ತಿಯು ಆ "ಲಾಟರಿ" ಗೆಲ್ಲುವ ಸಾಧ್ಯತೆಯಿದ್ದರೂ ಬಹಳಷ್ಟು ಮುಗ್ಧರು ಅನುಭವಿಸಬಹುದು. ಹೋಲಿಕೆ ಆಧಾರದ ಮೇಲೆ ಶಂಕಿತ ಎಂಬ ಹಣೆಪಟ್ಟ ಕಟ್ಟಿಕೊಳ್ಳಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com