6 ತಿಂಗಳಲ್ಲಿ ಸ್ಲೀಪರ್‌ ಸೌಲಭ್ಯವಿರುವ ವಂದೇ ಭಾರತ್‌ ರೈಲು ಸಿದ್ಧ: ಕೇಂದ್ರ ರೈಲ್ವೇ ಸಚಿವ ಅಶ್ಚಿನಿ ವೈಷ್ಣವ್‌

6 ತಿಂಗಳಲ್ಲಿ ಸ್ಲೀಪರ್‌ ಸೌಲಭ್ಯವಿರುವ ರೈಲುಗಳು ಸಿದ್ಧಗೊಳ್ಳಲಿವೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ಚಿನಿ ವೈಷ್ಣವ್‌ ಅವರು ಶನಿವಾರ ಹೇಳಿದರು.
ಕೇಂದ್ರ ರೈಲ್ವೆ ಸಚಿವ ಅಶ್ಚಿನಿ ವೈಷ್ಣವ್‌
ಕೇಂದ್ರ ರೈಲ್ವೆ ಸಚಿವ ಅಶ್ಚಿನಿ ವೈಷ್ಣವ್‌

ಬೆಂಗಳೂರು: 6 ತಿಂಗಳಲ್ಲಿ ಸ್ಲೀಪರ್‌ ಸೌಲಭ್ಯವಿರುವ ರೈಲುಗಳು ಸಿದ್ಧಗೊಳ್ಳಲಿವೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ಚಿನಿ ವೈಷ್ಣವ್‌ ಅವರು ಶನಿವಾರ ಹೇಳಿದರು.

ನಗರದ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್‌ಗೆ (ಬೆಮೆಲ್‌) ಅವರು ಶನಿವಾರ ಭೇಟಿ ನೀಡಿ ನಿರ್ಮಾಣವಾಗುತ್ತಿರುವ ವಂದೇ ಭಾರತ್‌ ಸ್ಲೀಪರ್‌ ರೈಲಿನ ಬೋಗಿಯನ್ನು ಪರಿಶೀಲಿಸಿದರು.

ಬಳಿಕ ಮಾತನಾಡಿದ ಅವರು, ವಂದೇ ಭಾರತ್‌ (ಚೇರ್‌ಕಾರ್), ನಮೋ ಭಾರತ್‌ (ರ‍್ಯಾಪಿಡ್‌ ರೈಲ್‌ ಟ್ರಾನ್ಸಿಟ್‌ ಸಿಸ್ಟಂ) ಹಾಗೂ ಅಮೃತ್‌ ಭಾರತ್‌ (ಪುಶ್‌ಪುಲ್‌ ಟೆಕ್ನಾಲಜಿ) ರೈಲುಗಳ ಯಶಸ್ಸಿನ ಬಳಿಕ ವಂದೇ ಭಾರತ್‌ ಸ್ಲೀಪರ್‌ ರೈಲು ಸಿದ್ಧಗೊಳ್ಳುತ್ತಿದೆ. ಸಂಪೂರ್ಣ ಹೊಸ ವಿನ್ಯಾಸದಲ್ಲಿ ನಿರ್ಮಾಣಗೊಳ್ಳುತ್ತಿದೆ. ನಿರ್ಮಾಣ ಪೂರ್ಣಗೊಂಡ ಬಳಿಕ 4-6 ತಿಂಗಳ ಕಾಲ ವಿವಿಧ ರೀತಿಯ ಪರೀಕ್ಷೆಗಳನ್ನು ಮಾಡಲಾಗುವುದು. ಅಗತ್ಯ ಇರುವಲ್ಲಿ ವಿನ್ಯಾಸ ಬದಲಾವಣೆ ಮಾಡಲಾಗುವುದು ಎಂದು ಹೇಳಿದರು.

ಕೇಂದ್ರ ರೈಲ್ವೆ ಸಚಿವ ಅಶ್ಚಿನಿ ವೈಷ್ಣವ್‌
ದೇಶದ ಮೊದಲ 3ಡಿ ಮುದ್ರಿತ ‌ಅಂಚೆ ಕಚೇರಿ ಉದ್ಘಾಟಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌

ಬೆಮೆಲ್‌ 10 ರೈಲುಗಳನ್ನು (160 ಬೋಗಿ) ನಿರ್ಮಿಸಿ ಕೊಡಲಿದೆ. ಈಗಿನ ವಂದೇ ಭಾರತ್‌ಗಿಂತಲೂ ವಿಶೇಷ ಸೌಲಭ್ಯಗಳನ್ನು ಸ್ಲೀಪರ್‌ ರೈಲು ಹೊಂದಿರಲಿದೆ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಆಸನಗಳ ಎತ್ತರ ವಿನ್ಯಾಸ ಮಾಡಲಾಗಿದೆ. ಕೇಂದ್ರ ಹವಾನಿಯಂತ್ರಣ ವ್ಯವಸ್ಥೆ, ಶೇ.99ರಷ್ಟು ವೈರಸ್‌ ನಿಯಂತ್ರಣ ವ್ಯವಸ್ಥೆ ಇರಲಿದೆ. ರೈಲನ್ನು ತೀರಾ ಅಲುಗಾಟ ಹಾಗೂ ಕಂಪನ ರಹಿತವಾಗಿಸಲಾಗುತ್ತಿದೆ. ವಂದೇ ಭಾರತ್‌ ಸರಣಿಯ ಇತರೆ ರೈಲುಗಳ ಪ್ರಯಾಣಿಕರಿಂದ ಬಂದ ಎಲ್ಲ ಅಭಿಪ್ರಾಯ ಆಧರಿಸಿ ಈ ರೈಲಿನಲ್ಲಿ ಸಮಸ್ಯೆ ನಿವಾರಿಸಲಾಗುತ್ತಿದೆ ಎಂದು ತಿಳಿಸಿದರು.

ಅಗ್ನಿ ಅವಘಡ ನಿಯಂತ್ರಣ ಸೇರಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಳಬಾಗಿಲುಗಳಿಗೆ ಸೆನ್ಸಾರ್‌ ಅಳವಡಿಕೆ, ವಾಸನೆ ಮುಕ್ತ ಶೌಚಾಲಯ, ಚಾಲನಾ ವಿಭಾಗದಲ್ಲಿ ಶೌಚಾಲಯ, ಮೊದಲ ದರ್ಜೆ ಎಸಿ ಕಾರ್‌ನಲ್ಲಿ ಬಿಸಿ ನೀರಿನ ಶವರ್‌ , ಯುಎಸ್‌ಬಿ ಚಾರ್ಜಿಂಗ್‌, ದೃಶ್ಯ ಮಾಹಿತಿ ಸೌಲಭ್ಯ ಇರಲಿದೆ. ಜಾಗತಿಕ ಮಟ್ಟದಲ್ಲಿ ಹೋಲಿಸಿದರೆ ಈ ರೈಲು ಕಡಿಮೆ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ. ನಮ್ಮಲ್ಲೇ ಮೆಟ್ರೋ ರೈಲಿನ ಒಂದು ಬೋಗಿ ರೂ.9 - ರೂ.10 ಕೋಟಿ ವೆಚ್ಚವಾಗುತ್ತಿದೆ. ವಂದೇ ಭಾರತ್‌ ಸ್ಲೀಪರ್‌ ಬೋಗಿಗೆ ಅಂದಾಜು ರೂ.8 ಕೋಟಿ- ರೂ. 9 ಕೋಟಿ ತಗಲುತ್ತಿದೆ. ವಿನ್ಯಾಸ, ದೇಸಿಯ ಮಟ್ಟದಲ್ಲೇ ನಿರ್ಮಾಣ ಆಗುತ್ತಿರುವ ಕಾರಣ ಕಡಿಮೆ ವೆಚ್ಚದಾಯಕವಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com