ಗದಗದಲ್ಲಿ ಅನಿಯಮಿತ ನೀರು ಪೂರೈಕೆ; ಬೇಸಿಗೆಯಲ್ಲಿ ವಲಸೆ ಹೋಗುತ್ತಿದ್ದಾರೆ ಕಂದಾಯ ಗ್ರಾಮಗಳ ನಿವಾಸಿಗಳು

ಕಳೆದ ಏಳು ದಶಕಗಳಿಂದ ಗದಗದ ಕೆಲವು ಗ್ರಾಮಗಳು ಬರದಿಂದ ತತ್ತರಿಸಿರುವ ಹಿನ್ನೆಲೆಯಲ್ಲಿ ಕೆಲವು ಗ್ರಾಮಗಳ ಜನರು ಬೇಸಿಗೆಯಲ್ಲಿ ವಲಸೆ ಹೋಗುತ್ತಾರೆ. ಸದ್ಯ ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ, ರೋಣ, ಗಜೇಂದ್ರಗಡ ಮತ್ತು ಗದಗ ತಾಲ್ಲೂಕುಗಳು ಕಂದಾಯ ಗ್ರಾಮಗಳೆಂದು ಕರೆಯಲ್ಪಡುವ ಅನೇಕ ತಾಂಡಾಗಳನ್ನು ಹೊಂದಿದ್ದು, ಇಲ್ಲಿನ ಜನರು ಬೇಸಿಗೆಯಲ್ಲಿ ಗೋವಾ, ಬೆಂಗಳೂರು, ಮಂಗಳೂರು, ಶೋಲಾಪುರ ಮತ್ತು ಇತರ ದೊಡ್ಡ ನಗರಗಳಿಗೆ ವಲಸೆ ಹೋಗುತ್ತಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಗದಗ: ಕಳೆದ ಏಳು ದಶಕಗಳಿಂದ ಗದಗದ ಕೆಲವು ಗ್ರಾಮಗಳು ಬರದಿಂದ ತತ್ತರಿಸಿರುವ ಹಿನ್ನೆಲೆಯಲ್ಲಿ ಕೆಲವು ಗ್ರಾಮಗಳ ಜನರು ಬೇಸಿಗೆಯಲ್ಲಿ ವಲಸೆ ಹೋಗುತ್ತಾರೆ. ಸದ್ಯ ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ, ರೋಣ, ಗಜೇಂದ್ರಗಡ ಮತ್ತು ಗದಗ ತಾಲ್ಲೂಕುಗಳು ಕಂದಾಯ ಗ್ರಾಮಗಳೆಂದು ಕರೆಯಲ್ಪಡುವ ಅನೇಕ ತಾಂಡಾಗಳನ್ನು ಹೊಂದಿದ್ದು, ಇಲ್ಲಿನ ಜನರು ಬೇಸಿಗೆಯಲ್ಲಿ ಗೋವಾ, ಬೆಂಗಳೂರು, ಮಂಗಳೂರು, ಶೋಲಾಪುರ ಮತ್ತು ಇತರ ದೊಡ್ಡ ನಗರಗಳಿಗೆ ವಲಸೆ ಹೋಗುತ್ತಾರೆ.

ಇದಕ್ಕೆ ಪ್ರಮುಖ ಕಾರಣವೆಂದರೆ ಕುಡಿಯುವ ನೀರು ಪೂರೈಕೆಯಲ್ಲಿ ಉಂಟಾಗುತ್ತಿರುವ ತೊಂದರೆಯಾಗಿದೆ. ಜೀವನ ಪರ್ಯಂತ ನೀರು ತರಲೇಬೇಕು ಎನ್ನುವ ಕಾರಣಕ್ಕೆ ಗದಗ ಜಿಲ್ಲೆಗೆ ತಮ್ಮ ಪುತ್ರಿಯರು ಅಥವಾ ತಂಗಿಯರನ್ನು ಮದುವೆ ಮಾಡಿ ಕೊಡಬಾರದು ಎಂಬ ಹಳೇ ಹಣೆಪಟ್ಟಿ ಇದೆ. ಗದಗ ಪಟ್ಟಣದ ಕೆಲವು ಭಾಗಗಳು ಸೇರಿದಂತೆ ಜಿಲ್ಲೆಯಲ್ಲಿ ಇಂದಿಗೂ ಈ ಹಣೆಪಟ್ಟಿ ಜೀವಂತವಾಗಿದೆ.

ಗದಗ ಜಿಲ್ಲೆಯು ಎರಡು ನದಿಗಳನ್ನು ಹೊಂದಿದ್ದು, ಅವು ನೀರಿನ ಪೂರೈಕೆಯ ಮುಖ್ಯ ಮೂಲಗಳಾಗಿವೆ. ದಕ್ಷಿಣ ಭಾಗದಲ್ಲಿ ತುಂಗಭದ್ರಾ ಮತ್ತು ಉತ್ತರ ಭಾಗದಲ್ಲಿರುವ ಮಲಪ್ರಭಾ ನದಿಗಳು ಮೂಲ ಆಧಾರವಾಗಿವೆ. ಪ್ರತಿ ಬೇಸಿಗೆಯಲ್ಲಿ ನದಿಗಳಲ್ಲಿ ನೀರಿನ ಮಟ್ಟ ಕಡಿಮೆ ಇರುತ್ತದೆ ಮತ್ತು ಅಂತರ್ಜಲ ಮಟ್ಟವೂ ಕಡಿಮೆಯಾಗುತ್ತದೆ. ಹಾಗಾಗಿ ದಿನಗೂಲಿ ಮತ್ತು ಕೆಲವು ಗ್ರಾಮಸ್ಥರು ಫೆಬ್ರುವರಿಯಲ್ಲಿ ಬೇರೆ ನಗರಗಳಿಗೆ ತೆರಳುತ್ತಾರೆ ಮತ್ತು ಜೂನ್ ನಂತರ ಹಿಂತಿರುಗುತ್ತಾರೆ. ಈ ಬಾರಿ ಕೃಷಿ ಕೆಲಸಗಳ ಕೊರತೆಯೂ ವಲಸೆಗೆ ಒಂದು ಕಾರಣವಾಗಿದೆ.

ಪ್ರಾತಿನಿಧಿಕ ಚಿತ್ರ
ಬೆಂಗಳೂರು ನೀರಿನ ಬಿಕ್ಕಟ್ಟು: ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕೆರೆಗಳಿಗೆ ಸಂಸ್ಕರಿಸಿದ ನೀರು: BWSSB ಮಹತ್ವದ ನಿರ್ಧಾರ

ಗದಗ ಪಟ್ಟಣದಲ್ಲಿ 24X7 ನೀರಿನ ಸೌಲಭ್ಯವಿದ್ದು, ಪಟ್ಟಣದ ಇನ್ನೂ ಕೆಲವು ಪ್ರದೇಶಗಳಿಗೆ 24X7 ನೀರಿನ ಸೌಲಭ್ಯದ ಸಂಪರ್ಕ ಸಿಕ್ಕಿಲ್ಲ. ಈ ಬಾರಿ ಇಲ್ಲಿನ ನಿವಾಸಿಗಳಿಗೆ 20 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಗದಗ ಬೆಟಗೇರಿ ನಗರಸಭೆ ಮಾರ್ಚ್ ಮೊದಲ ವಾರದಲ್ಲಿ ಕೆಲವು ಪ್ರದೇಶಗಳಿಗೆ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಿದೆ. ಆದರೆ, ಇದು ಅವಶ್ಯಕತೆಗೆ ಸಾಕಾಗುತ್ತಿಲ್ಲ ಮತ್ತು ನಿವಾಸಿಗಳು ಖಾಸಗಿ ನೀರಿನ ಟ್ಯಾಂಕರ್‌ಗಳಿಗೆ ಹಣವನ್ನು ಖರ್ಚು ಮಾಡಬೇಕಾಗಿದೆ.

ಶಿರಹಟ್ಟಿ ಸಮೀಪದ ಅಡ್ರಹಳ್ಳಿ ನಿವಾಸಿ ಸುರೇಶ ಲಮಾಣಿ ಮಾತನಾಡಿ, ‘ಬೇಸಿಗೆಯಲ್ಲಿ ನಿತ್ಯ ನೀರು ಪೂರೈಕೆಯಾಗದ ಕಾರಣ ಗೋವಾಕ್ಕೆ ವಲಸೆ ಹೋಗುತ್ತೇವೆ. ಬೇಸಿಗೆಯಲ್ಲಿ ಅನಿಯಮಿತ ನೀರು ಪೂರೈಕೆಯಿಂದಾಗಿ ಮತ್ತು ಕೃಷಿ ಕೆಲಸಗಳಿಲ್ಲದ ಕಾರಣ ಶಿರಹಟ್ಟಿ, ಲಕ್ಷ್ಮೇಶ್ವರ ಮತ್ತು ಗದಗದ ಇತರ ಭಾಗಗಳ ಕಂದಾಯ ಗ್ರಾಮಗಳ ಅನೇಕ ಗ್ರಾಮಸ್ಥರು ಸಾಮಾನ್ಯವಾಗಿ ವಲಸೆ ಹೋಗುತ್ತಾರೆ. ತುಂಗಭದ್ರಾ ನದಿಯಲ್ಲಿ ನೀರು ಕಡಿಮೆಯಾಗುವುದರಿಂದ ಮೈಲುಗಟ್ಟಲೆ ನಡೆದು ನೀರು ಪಡೆಯಬೇಕಾಗಿದೆ. ಪ್ರತಿವರ್ಷವೂ ಇದೇ ಪರಿಸ್ಥಿತಿ ಇರುತ್ತದೆ' ಎಂದರು.

ಪ್ರಾತಿನಿಧಿಕ ಚಿತ್ರ
ಕರ್ನಾಟಕದಲ್ಲಿ ನೀರಿನ ಬಿಕ್ಕಟ್ಟು; ತಳಮಟ್ಟಕ್ಕೆ ಕುಸಿದ ನೀರಿನ ಮಟ್ಟ; ತಮಿಳುನಾಡಿನೊಂದಿಗೆ ಮತ್ತೆ ಸಂಘರ್ಷ ಸಾಧ್ಯತೆ

ಆರ್‌ಡಿಪಿಆರ್ ಮತ್ತು ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾರ್ಚ್ 6ರಂದು ಬರ ನಿರ್ವಹಣಾ ಸಭೆ ನಡೆಸಿದ್ದು, ಮಳೆಗಾಲದವರೆಗೆ ಇನ್ನೂ ಎರಡು ತಿಂಗಳು ನೀರು ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com