Vande Bharat ರೈಲಿಗೆ ಕಲ್ಲೆಸೆತ: ಬೆಂಗಳೂರಲ್ಲಿ 50 ಮಂದಿ ಬಂಧನ, 5 ವರ್ಷ ಜೈಲು ಸಾಧ್ಯತೆ!

ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ 50 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
Vande Bharat ರೈಲಿಗೆ ಕಲ್ಲೆಸೆತ
Vande Bharat ರೈಲಿಗೆ ಕಲ್ಲೆಸೆತ
Updated on

ಬೆಂಗಳೂರು: ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ 50 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ನೈಋತ್ಯ ರೈಲ್ವೆ (South Western Railway Zone) ಮೂಲಕ ಹಾದುಹೋಗುವ ವಂದೇ ಭಾರತ್ ರೈಲುಗಳ (Vande Bharat Train) ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ (Stone Pelting) ಮಾಡಿದ್ದು, ಇದೀಗ ಈ ಪ್ರಕರಣ ಸಂಬಂಧ ಪೊಲೀಸರು 50 ಮಂದಿಯನ್ನು ಬಂಧಿಸಿದ್ದಾರೆ.

Vande Bharat ರೈಲಿಗೆ ಕಲ್ಲೆಸೆತ
ಬೆಂಗಳೂರು: ಒಂದೇ ದಿನ ಮೂರು ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟ!

ಬೆಂಗಳೂರಿನಿಂದ ಬೇರೆ ಬೇರೆ ಭಾಗಕ್ಕೆ ಹೋಗುವ ಮೂರು ವಂದೇ ಭಾರತ್ ರೈಲುಗಳ ಮೇಲೆ 50 ಬಾರಿ ಕಲ್ಲು ತೂರಾಟ ಮಾಡಲಾಗಿದೆ. ಹೀಗಾಗಿ ತನಿಖೆ ನಡೆಸಿರುವ ರೈಲ್ವೆ ಪೊಲೀಸರು ಬೆಂಗಳೂರಿನಲ್ಲಿ ಒಟ್ಟು 50 ಜನರನ್ನು ಬಂಧಿಸಿದ್ದಾರೆ. ಕಿಡಿಗೇಡಿಗಳು ನಿತ್ಯ ಒಂದಲ್ಲ‌ ಒಂದು ವಂದೇ ಭಾರತ್ ರೈಲಿಗೆ ಕಲ್ಲು ಎಸೆಯುವುದನ್ನೇ ರೂಢಿ ಮಾಡಿಕೊಂಡಿದ್ದರು. ಇದು ರೈಲ್ವೆ ಇಲಾಖೆಗೆ ಭಾರೀ ನಷ್ಟವನ್ನುಂಟು ಮಾಡಿತ್ತು. ದುಷ್ಕರ್ಮಿಗಳು ಚಲಿಸುವ ರೈಲಿಗಳಿಗೆ ಕಲ್ಲು ಎಸೆದು ಹಾನಿ ಮಾಡುತ್ತಿದ್ದರು.

ಒಂದೇ ದಿನ 2 ಟ್ರೈನ್‌ ಮೇಲೆ 3 ಕಡೆ ದಾಳಿ

ಬೆಂಗಳೂರಿನ ನೈಋತ್ಯ ರೈಲ್ವೆ ವಲಯದ (South Western Railway Zone) ಮೂಲಕ ಹಾದುಹೋಗುವ 2 ವಂದೇ ಭಾರತ್ ರೈಲುಗಳ (Vande Bharat Train) ಮೇಲೆ ಇತ್ತೀಚೆಗೆ ಮೂರು ಕಡೆ ಪ್ರತ್ಯೇಕವಾಗಿ ಕಲ್ಲು ತೂರಾಟದ ಪ್ರಕರಣಗಳು ನಡೆದಿತ್ತು. ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಮಾ.03 ರಂದು ದುಷ್ಕರ್ಮಿಗಳು ಕಲ್ಲು ತೂರಿದ್ದು, ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಗಳನ್ನು ರೈಲ್ವೆ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿತ್ತು.

ವರ್ಷದಲ್ಲಿ 10 ಪ್ರಕರಣ

ಈ ವರ್ಷವೊಂದರಲ್ಲೇ ವಂದೇ ಭಾರತ್​ ರೈಲಿನ ಮೇಲೆ 10 ಬಾರಿ ಕಲ್ಲು ತೂರಾಟ ನಡೆಸಿದ ಪ್ರಕರಣಗಳು ಬೆಳಕಿಗೆ ಬಂದಿತ್ತು. ಕಳೆದ ವರ್ಷ 40 ಕಲ್ಲು ತೂರಾಟ ಪ್ರಕರಣಗಳು ನಡೆದಿದ್ದವು. ಅದೃಷ್ಟವಶಾತ್‌ ಈ ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ. ಆದರೆ, ರೈಲುಗಳ ಕಿಟಕಿ ಗಾಜುಗಳಿಗೆ ಹಾನಿಯಾಗಿತ್ತು.

5 ವರ್ಷಗಳವರೆಗೆ ಜೈಲು ಶಿಕ್ಷೆ

ಸೆಕ್ಷನ್ 147 (ರೈಲ್ವೆ ಹಳಿಯಲ್ಲಿ ಅತಿಕ್ರಮಣ) ಮತ್ತು ಸೆಕ್ಷನ್ 153 (ಉದ್ದೇಶ ಪೂರ್ವಕ ಕ್ರಿಯೆ ಅಥವಾ ಲೋಪದಿಂದ ರೈಲ್ವೆಯಲ್ಲಿ ಪ್ರಯಾಣಿಸುವ ವ್ಯಕ್ತಿಗಳ ಸುರಕ್ಷತೆಗೆ ಅಪಾಯವನ್ನುಂಟು ಮಾಡುವುದು) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ರೈಲುಗಳ ಮೇಲೆ ಕಲ್ಲು ತೂರಾಟ ನಡೆಸುವುದು ಕ್ರಿಮಿನಲ್ ಅಪರಾಧವಾಗಿದೆ. ರೈಲ್ವೇ ಕಾಯ್ದೆ ಸೆಕ್ಷನ್ 153ರ ಅಡಿಯಲ್ಲಿ 5 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com