Water crisis: 16 ಸಾವಿರ ಪೈಕಿ 7 ಸಾವಿರ ಬೋರ್ ವೆಲ್ ಗಳು ಸ್ಥಗಿತ, ಹೊಸ ಸಂಪರ್ಕಕ್ಕೆ ಅನುಮತಿ ಕಡ್ಡಾಯ: ಡಿಸಿಎಂ ಡಿಕೆ ಶಿವಕುಮಾರ್

ಬಿಜೆಪಿಯವರು ಹೇಳುವಷ್ಟು ಬೆಂಗಳೂರಲ್ಲಿ ನೀರಿಗೆ ಹಾಹಾಕಾರ ಇಲ್ಲ.. ನಗರದ 16 ಸಾವಿರ ಪೈಕಿ 7 ಸಾವಿರ ಬೋರ್ ವೆಲ್ ಗಳು ಮಾತ್ರ ಸ್ಥಗಿತವಾಗಿದೆ. ಕೊಳೆಗೇರಿಗಳಿಗೆ ಉಚಿತವಾಗಿ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಡಿಸಿಎಂ ಡಿಕೆ ಶಿವಕುಮಾರ್
ಡಿಸಿಎಂ ಡಿಕೆ ಶಿವಕುಮಾರ್ANI

ಬೆಂಗಳೂರು: ಬಿಜೆಪಿಯವರು ಹೇಳುವಷ್ಟು ಬೆಂಗಳೂರಲ್ಲಿ ನೀರಿಗೆ ಹಾಹಾಕಾರ ಇಲ್ಲ.. ನಗರದ 16 ಸಾವಿರ ಪೈಕಿ 7 ಸಾವಿರ ಬೋರ್ ವೆಲ್ ಗಳು ಮಾತ್ರ ಸ್ಥಗಿತವಾಗಿದೆ. ಕೊಳೆಗೇರಿಗಳಿಗೆ ಉಚಿತವಾಗಿ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ನಕ್ಷೆ ಮಂಜೂರಾತಿ ವ್ಯವಸ್ಥೆಗಾಗಿ ‘ನಂಬಿಕೆ ನಕ್ಷೆ' ಯೋಜನೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಬಿಜೆಪಿಯವರು ಹೇಳುವಷ್ಟು ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಇಲ್ಲ. ರಾಜಧಾನಿಯಲ್ಲಿ ನೀರಿನ ಮಾಫಿಯಾ ನಿಲ್ಲಿಸಿದ್ದೇವೆ.

ಡಿಸಿಎಂ ಡಿಕೆ ಶಿವಕುಮಾರ್
'ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ, ಬಿಜೆಪಿ ಜನರ ದಿಕ್ಕು ತಪ್ಪಿಸುತ್ತಿದೆ': ಡಿಸಿಎಂ ಡಿ.ಕೆ.ಶಿವಕುಮಾರ್‌

ಹೊಸ ಬೋರ್ ವೆಲ್ ಸಂಪರ್ಕಕ್ಕೆ ಅನುಮತಿ ಕಡ್ಡಾಯ

ನಗರದ 16,000 ಬೋರ್‌ವೆಲ್‌ಗಳ ಪೈಕಿ 7,000 ಬೋರ್‌ವೆಲ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ನಾವು ಜನರಿಗೆ ನೀರು ಒದಗಿಸಲು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಪ್ರಯತ್ನಿಸುತ್ತಿದ್ದೇವೆ, BWSSB, BBMP, ಮತ್ತು ನೋಡಲ್ ಅಧಿಕಾರಿಗಳು ಈ ಎಲ್ಲವನ್ನು ನೋಡಿಕೊಳ್ಳುತ್ತಿದ್ದಾರೆ. ಒಂದು ಬೋರ್ಡ್ ಇರುತ್ತದೆ. ಕಾನೂನು ಬಾಹಿರವಾಗಿ ನೀರು ಒದಗಿಸುವ ಟ್ಯಾಂಕರ್‌ಗಳು ಮತ್ತು ಹೆಚ್ಚು ಹಣ ವಸೂಲಿ ಮಾಡುತ್ತಿರುವ ಅಕ್ರಮ ಪೂರೈಕೆದಾರರು ಯಾವುದು ಎಂದು ನೋಡಲು, ತಪ್ಪಾಗಿದ್ದರೆ ಅದು ಕ್ರಮ ಕೈಗೊಳ್ಳುತ್ತದೆ. ನಾವು ಕೊಳೆಗೇರಿಗಳಿಗೆ ಉಚಿತ ನೀರು ನೀಡುತ್ತಿದ್ದೇವೆ ಎಂದರು.

ಅಂತೆಯೇ ಹೊಸ ಬೋರ್ ವೆಲ್ ಗಳನ್ನು ತೋಡಲು ಸಂಬಂಧ ಪಟ್ಟ ಇಲಾಖೆಯ ಅನುಮತಿ ಕಡ್ಡಾಯವಾಗಿದ್ದು, ಅನುಮತಿ ಇಲ್ಲದೇ ಬೋರ್ ವೆಲ್ ತೋಡಿದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ. ಈ ಸಂಬಂಧ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಬಿಜೆಪಿಯಿಂದ ನೀರಿನಲ್ಲೂ ರಾಜಕೀಯ

ಬಿಜೆಪಿಯವರು ಅದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಮತ್ತು ಅದರ ಬಗ್ಗೆ ನಮಗೆ ಕಾಳಜಿ ಇಲ್ಲ... ನಾವು ತಮಿಳುನಾಡಿಗೆ ನೀರು ಬಿಡುತ್ತಿಲ್ಲ ಮತ್ತು ನಾವು ಬಿಡುಗಡೆ ಮಾಡಿಲ್ಲ, ಇದು ಬಿಜೆಪಿ ಆಡುತ್ತಿರುವ ರಾಜಕೀಯ ಎಂದರು.

ತಮಿಳುನಾಡಿಗೆ ನೀರು ಬಿಟ್ಟಿಲ್ಲ

ತಮಿಳುನಾಡಿಗೆ ನೀರು ಬಿಡುವ ಮಾತೇ ಇಲ್ಲ. ತೊರೆಕಾಡನಹಳ್ಳಿಯಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿತ್ತು. ಆ ನೀರನ್ನು ಅನಿವಾರ್ಯವಾಗಿ ಅಲ್ಲಿಗೆ ತುಂಬಿಸಬೇಕಿತ್ತು. ಅದಕ್ಕೆ ಪ್ರತ್ಯೇಕ ಲೇನ್‌ ಇದೆ, ಹೋಗಿ ನೋಡಿದರೆ ಎಲ್ಲ ಗೊತ್ತಾಗುತ್ತದೆ. ನೀರು ಬಿಡೋದು, ಎಷ್ಟು ಬಿಡಲಾಗುತ್ತದೆ, ಪ್ರತಿಯೊಂದಕ್ಕೂ ಲೆಕ್ಕ ಇದೆ ಎಂದರು.

ಡಿಸಿಎಂ ಡಿಕೆ ಶಿವಕುಮಾರ್
ಅಂತರ್ಜಲ ಕುಸಿತದಿಂದ ರೈತರು ಕಂಗಾಲು; ಲಕ್ಷಗಟ್ಟಲೆ ಖರ್ಚು ಮಾಡಿದರೂ ಬೋರ್‌ವೆಲ್‌ಗಳಿಂದ ಬರದ ನೀರು

ಬೆಂಗಳೂರು ವಾಟರ್ ಟ್ಯಾಂಕರ್ ಮಾಫಿಯಾ ನಿಲ್ಲಿಸಿದ್ದೇವೆ

ಬೆಂಗಳೂರಿನಲ್ಲಿ ಕುಡಿಯುವ ನೀರಿನ ದಂಧೆ ನಿಲ್ಲಿಸಿದ್ದೇವೆ. ಬೇರೆಯವರು ಇದರಲ್ಲಿ ರಾಜಕೀಯ ಮಾಡ್ತಿದ್ದಾರೆ, ಮಾಡಿಕೊಳ್ಳಲಿ. ಸ್ಲಂಗಳಿಗೆ ಬಾಡಿಗೆ ದರದಲ್ಲಿ ನೀರನ್ನು ಪೂರೈಸುತ್ತಿದ್ದೇವೆ. ಬೆಂಗಳೂರು ನಗರದಲ್ಲಿ ನೀರಿನ ಮಾಫಿಯಾ ನಿಲ್ಲಿಸಿದ್ದೇವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com