ವೆಡ್ಡಿಂಗ್ ಪಾರ್ಟಿ: ಕಾವೇರಿ ನದಿಗೆ ಕಸ ಎಸೆದವರ ವಾಪಸ್ ಕರೆಸಿ ಸ್ವಚ್ಛಗೊಳಿಸಿದ ಸ್ಥಳೀಯರು!

ಮದುವೆ ಸಮಾರಂಭದ ಬಳಿಕ ಕಸವನ್ನು ಕಾವೇರಿ ನದಿ ನೀರಿಗೆ ಎಸೆದಿದ್ದ ಕುಟುಂಬವೊಂದನ್ನು ವಾಪಸ್ ಕರೆಸಿದ ಸ್ಥಳೀಯ ನಿವಾಸಿಗಳು ಹಾಗೂ ಪರಿಸರ ಪ್ರೇಮಿಗಳು ಜಲಮೂಲವನ್ನು ಸ್ವಚ್ಛಗೊಳಿಸುವಂತೆ ಮಾಡಿದ ಘಟನೆ ಕುಶಾಲನಗರದಲ್ಲಿ ನಡೆದಿದೆ.
ನದಿಗೆ ಹಾಕಿದ್ದ ಕಸ ತೆಗೆಯುತ್ತಿರುವ ಕುಟುಂಬಸ್ಥರು.
ನದಿಗೆ ಹಾಕಿದ್ದ ಕಸ ತೆಗೆಯುತ್ತಿರುವ ಕುಟುಂಬಸ್ಥರು.

ಮಡಿಕೇರಿ: ವೆಡ್ಡಿಂಗ್ ಪಾರ್ಟಿ ಬಳಿಕ ಕಸವನ್ನು ಕಾವೇರಿ ನದಿ ನೀರಿಗೆ ಎಸೆದಿದ್ದ ಕುಟುಂಬವೊಂದನ್ನು ವಾಪಸ್ ಕರೆಸಿದ ಸ್ಥಳೀಯ ನಿವಾಸಿಗಳು ಹಾಗೂ ಪರಿಸರ ಪ್ರೇಮಿಗಳು ಜಲಮೂಲವನ್ನು ಸ್ವಚ್ಛಗೊಳಿಸುವಂತೆ ಮಾಡಿದ ಘಟನೆ ಕುಶಾಲನಗರದಲ್ಲಿ ನಡೆದಿದೆ.

ಕುಶಾಲನಗರ-ಕೊಪ್ಪ ಸೇತುವೆ ಬಳಿ ನದಿಯಲ್ಲಿ ಕಾಗದದ ರಾಶಿ ತೇಲುತ್ತಿದ್ದವು. ಇದನ್ನು ಗಮನಿಸಿದ ಕುಶಾಲನಗರದ ನಿವಾಸಿ ಬಾಗೂ ಕಾವೇರಿ ಸ್ವಚ್ಛತಾ ಆಂದೋಲನದ ಸದಸ್ಯರಾದ ಚಂದ್ರಮೋಹನ್ ಮತ್ತು ವನಿತಾ ದಂಪತಿಗಳು, ತೇಲುತ್ತಿದ್ದ ಕಾಗದವೊಂದನ್ನು ತೆಗೆದು ನೋಡಿದ್ದರು. ಕಾಗದ ಮದುವೆಯ ಆಮಂತ್ರಣ ಪತ್ರಿಕೆಯಾಗಿತ್ತು. ಸುಮಾರು 500ಕ್ಕೂ ಹೆಚ್ಚು ಕಾರ್ಡ್ ಗಳು ನದಿ ನೀರಿನಲ್ಲಿ ತೇಲುತ್ತಿದ್ದವು. ನಂತರ ಕಾರ್ಡ್ ನಲ್ಲಿದ್ದ ಮೊಬೈಲ್ ಫೋನ್ ಸಂಖ್ಯೆಯನ್ನು ಸಂಪರ್ಕಿಸಿದ್ದಾರೆ.

ನದಿಗೆ ಹಾಕಿದ್ದ ಕಸ ತೆಗೆಯುತ್ತಿರುವ ಕುಟುಂಬಸ್ಥರು.
ಸ್ವಚ್ಛ ಭಾರತ ಸರ್ವೇಕ್ಷಣೆ: 125ನೇ ಸ್ಥಾನಕ್ಕೆ ಇಳಿದ ಬೆಂಗಳೂರು ನಗರ

ನದಿಗೆ ಕಾಗದ ಎಸೆದಿದ್ದ ಕುಟುಂಬ ಖಾಸಗಿ ಬಸ್ ನಲ್ಲಿ ಬೆಂಗಳೂರಿಗೆ ತೆರಳುತ್ತಿತ್ತು. ಈ ಕುಟುಂಬಸ್ಥರಿಗೆ ದೂರವಾಣಿ ಕರೆ ಮಾಡಿರುವ ದಂಪತಿಗಳು, ಮರಳಿ ನದಿ ಬಳಿಗೆ ಬಂದು ಸ್ವಚ್ಛಗೊಳಿಸದೇ ಹೋದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.

ಬಳಿಕ ಸುಮಾರು 25 ಮಂದಿ ಸದಸ್ಯರು ನದಿ ಬಳಿಗೆ ಬಂದಿದ್ದು, ಸ್ವಚ್ಛತಾ ಕಾರ್ಯ ನಡೆಸಿದ್ದಾರೆ. ವಿತರಣೆಯಾಗದ ಮದುವೆ ಕಾರ್ಡ್ ಗಳನ್ನು ಕಾವೇರಿ ನದಿಗೆ ಎಸೆಯುವಂತೆ ಪುರೋಹಿತರು ಸೂಚಿಸಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ. ಘಟನೆ ಸಂಬಂಧ ಕ್ಷಮೆಯಾಚನೆ ಮಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತೆ ಕಸ ಹಾಕುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಹಿಂತಿರುಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com