ಬಿಟ್ ಕಾಯಿನ್ ಪ್ರಕರಣ: ಆರೋಪಿ ಶ್ರೀಧರ್ ಪೂಜಾರ್ ಕುರಿತ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ, ನೋಟಿಸ್ ಜಾರಿ

ಬಿಟ್ ಕಾಯಿನ್ ಪ್ರಕರಣ ಸಂಬಂಧಿಸಿದಂತೆ ಸದ್ಯ ತಲೆಮರೆಸಿಕೊಂಡಿರುವ ಆರೋಪಿ ಡಿವೈಎಸ್ಪಿ ಶ್ರೀಧರ್ ಕೆ ಪೂಜಾರ್ ಗೆ ಪೊಲೀಸ್ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ಅವರ ಕುರಿತು ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದೆ.
Bitcoin
Bitcoin

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣ ಸಂಬಂಧಿಸಿದಂತೆ ಸದ್ಯ ತಲೆಮರೆಸಿಕೊಂಡಿರುವ ಆರೋಪಿ ಡಿವೈಎಸ್ಪಿ ಶ್ರೀಧರ್ ಕೆ ಪೂಜಾರ್ ಗೆ ಪೊಲೀಸ್ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ಅವರ ಕುರಿತು ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದೆ.

ಹೌದು.. ಬಿಟ್ ಕಾಯಿನ್ ಕೇಸ್​ಗೆ ಸಂಬಂಧಿಸಿದಂತೆ ಆರೋಪಿ ಡಿವೈಎಸ್​ಪಿ ಶ್ರೀಧರ್ ಹುಡುಕಿಕೊಟ್ಟವರಿಗೆ ಬಹುಮಾನ ಘೋಷಿಸಲಾಗಿದೆ. ಈ ಕುರಿತಾಗಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಬಿಟ್ ಕಾಯಿನ್ ಕೇಸ್​ನ DySP ಶ್ರೀಧರ್ ಪೂಜಾರ್ 5ನೇ ಆರೋಪಿಯಾಗಿದ್ದಾರೆ. ಸಿಐಡಿ ಫೈನಾನ್ಶಿಯಲ್ ಇಂಟೆಲಿಜೆನ್ಸ್ ಡಿವೈಎಸ್​ಪಿ ಸಂಪರ್ಕಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Bitcoin
ಬಿಟ್ ಕಾಯಿನ್ ಹಗರಣ: ಪೊಲೀಸ್ ಸಿಬ್ಬಂದಿಗಳ ಮೇಲೆ ಕಾರು ಹತ್ತಿಸಲು ಯತ್ನ, ಡಿವೈಎಸ್'ಪಿ ಶ್ರೀಧರ್ ಪರಾರಿ!

ಬಿಟ್ ಕಾಯಿನ್ ಕೇಸ್​ನ DySP ಶ್ರೀಧರ್ ಪೂಜಾರ್ 5ನೇ ಆರೋಪಿಯಾಗಿದ್ದು, ಇವರ ಬಗ್ಗೆ ಮಾಹಿತಿ ನೀಡಿದರೆ ಅಥವಾ ಹಿಡಿದುಕೊಟ್ಟವರಿಗೆ ಬಹುಮಾನ ಮತ್ತು ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು. DySP ಶ್ರೀಧರ್ ಪೂಜಾರ್​​ ಬಗ್ಗೆ ಮಾಹಿತಿಯಿದ್ದರೆ ಸಿಐಡಿ ಫೈನಾನ್ಶಿಯಲ್ ಇಂಟೆಲಿಜೆನ್ಸ್ ಡಿವೈಎಸ್​ಪಿ ಸಂಪರ್ಕಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬಹುಮಾನ ಘೋಷಣೆ

ಸಿಐಡಿ SIT ಬಂಧಿಸಲು ತೆರಳಿದ್ದ ವೇಳೆ ಎಸ್ಐಟಿ ಟೀಂ ಕಾರಿಗೆ ಮತ್ತೊಂದು ವಾಹನ ಡಿಕ್ಕಿಹೊಡೆಸಿ ಶ್ರೀಧರ್ ಪರಾರಿಯಾಗಿದ್ದ. ಫೆಬ್ರವರಿ 27 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಂಬೇಡ್ಕರ್ ವೀಧಿಯ ಕಾಫಿ ಬೋರ್ಡ್ ಜಂಕ್ಷನ್ ಬಳಿ ಈ ಘಟನೆ ನಡೆದಿತ್ತು. ಕಾರಿಗೆ ಡಿಕ್ಕಿ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಎಸ್​ಐಟಿ ಕೇಸ್ ದಾಖಲಿಸಿದೆ. ಇತ್ತೀಚೆಗಷ್ಟೇ ವಿಧಾನಸೌಧ ಪೊಲೀಸರು ಹಿರಿಯ ಅಧಿಕಾರಿಯ ವಿರುದ್ಧ ಐಪಿಸಿ 307 (ಕೊಲೆ ಯತ್ನ), 332ರ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು. ಇದೀಗ ಶ್ರೀಧರ್ ಪೂಜಾರ್ ಪತ್ತೆಗಾಗಿ ಬಹುಮಾನ ಘೋಷಿಸಿದೆ.

Bitcoin
ಬಿಟ್ ಕಾಯಿನ್ ಹಗರಣ: IPS ಅಧಿಕಾರಿ ಸಂದೀಪ್ ಪಾಟೀಲ್‌ಗೆ ನೋಟಿಸ್!

ಜಾಮೀನಿಗೆ ಅರ್ಜಿ ಹಾಕಿದ್ದ ಶ್ರೀಧರ್ ಪೂಜಾರ್

ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶ್ರೀಧರ್ ಪೂಜಾರ್ ಇತ್ತೀಚೆಗೆ ಜಾಮೀನು ಅರ್ಜಿ ಹಾಕಿದ್ದರು. ಆದರೆ, ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಜಾಮೀನು ವಜಾ ಮಾಡಿದ ಹಿನ್ನಲೆ ಪ್ರಮುಖ ಆರೋಪಿಯ ಬಂಧನಕ್ಕೆ ಎಸ್.ಐ.ಟಿ ತಂಡ ಹೋಗಿದ್ದರು. ಈ ಸಂದರ್ಭದಲ್ಲಿ ಪೊಲೀಸರ ವಾಹನಕ್ಕೆ ಗುದ್ದಿ ಎಸ್ಕೇಪ್ ಆಗಿದ್ದಾರೆ. ಈಗಾಗಲೇ ಈ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com