ಬತ್ತುತ್ತಿರುವ ಕೊಳವೆ ಬಾವಿಗಳು, ಸಿಗದ ನೀರು: ಟ್ಯಾಂಕರ್ ನೀರು ಪೂರೈಕೆಗೂ ಬಂತು ಕುತ್ತು!

ಈಗ ಅನೇಕ ಖಾಸಗಿ ನೀರಿನ ಟ್ಯಾಂಕರ್‌ಗಳು ಪೂರೈಕೆಯನ್ನು ಸೀಮಿತಗೊಳಿಸುತ್ತಿವೆ. ಬೋರ್‌ವೆಲ್‌ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಕಾರಣ ಟ್ಯಾಂಕರ್ ಗಳಿಗೆ ನೀರು ಸಿಗುತ್ತಿಲ್ಲ.
ಟ್ಯಾಂಕರ್ ನಲ್ಲಿ ನೀರು ಪೂರೈಕೆ
ಟ್ಯಾಂಕರ್ ನಲ್ಲಿ ನೀರು ಪೂರೈಕೆ

ಬೆಂಗಳೂರು: ನಗರದ ಹೊರವಲಯದ ಮಹದೇವಪುರ, ಕೆಆರ್ ಪುರಂ, ಬೊಮ್ಮನಹಳ್ಳಿ ಮತ್ತು ಆರ್‌ಆರ್‌ನಗರದ ಬತ್ತಿದ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಸಮಸ್ಯೆಯಾಗುತ್ತಿದೆ, ಏಕೆಂದರೆ ಈಗ ಅನೇಕ ಖಾಸಗಿ ನೀರಿನ ಟ್ಯಾಂಕರ್‌ಗಳು ಪೂರೈಕೆಯನ್ನು ಸೀಮಿತಗೊಳಿಸುತ್ತಿವೆ. ಬೋರ್‌ವೆಲ್‌ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಕಾರಣ ಟ್ಯಾಂಕರ್ ಗಳಿಗೆ ನೀರು ಸಿಗುತ್ತಿಲ್ಲ.

ಅಣ್ಣಸಂದ್ರ ಪಾಳ್ಯದಲ್ಲಿರುವ ತಮ್ಮ ನಿವೇಶನದಲ್ಲಿ ಬೋರ್‌ವೆಲ್‌ ಕೊರೆದು ಕೆಆರ್‌ ಪುರಂ ವಿಧಾನಸಭಾ ಕ್ಷೇತ್ರದ ಶಿವಾನಂದನಗರ, ಎಲ್‌ಬಿಎಸ್‌ ನಗರ, ಗಫಾರ್‌ ಲೇಔಟ್‌, ಅನ್ನಸಂದ್ರ ಪಾಳ್ಯ, ವಿಭೂತಿಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ಪೂರೈಸುತ್ತಿದ್ದ ರವಿಕುಮಾರ್‌, ಕಳೆದ ತಿಂಗಳು ಸಾಧ್ಯವಾಗದೆ ವ್ಯಾಪಾರ ನಿಲ್ಲಿಸಿದ್ದರು. ಅವರ ಬೋರ್‌ವೆಲ್ ಬಹುತೇಕ ಬತ್ತಿಹೋದ ನಂತರ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗಲಿಲ್ಲ.

ನಾನು ಕೆಲವು ಅಪಾರ್ಟ್‌ಮೆಂಟ್‌ಗಳಿಗೆ 13,000 ಲೀಟರ್ ಸಾಮರ್ಥ್ಯದ ಟ್ಯಾಂಕರ್ ನಲ್ಲಿ ನೀರು ಪೂರೈಸುತ್ತಿದ್ದೆ. ಆದರೆ ಇದು ಈಗ ನಿಂತು ಹೋಗಿದೆ. ಬೋರ್‌ವೆಲ್‌ಗೆ ನೀರಿನ ಮೂಲವಿಲ್ಲ, ಅಂತರ್ಜಲ ಮರುಪೂರಣಕ್ಕೆ ಉತ್ತಮ ಮಳೆಗಾಗಿ ನಾವು ಕಾಯಬೇಕಾಗಿದೆ ಎಂದು ರವಿಕುಮಾರ್ ಹೇಳಿದರು.

5000 ಲೀಟರ್ ಸಾಮರ್ಥ್ಯದ ಟ್ಯಾಂಕರ್‌ನಲ್ಲಿ ಮನೆಗಳಿಗೆ ನೀರು ಪೂರೈಸುವ ವಿಭೂತಿಪುರದ ಗಣೇಶ್ ಅವರ ಬೋರ್ ವೆಲ್ ನಲ್ಲೂ ಕೂಡ ನೀರು ಕಡಿಮೆಯಾಗಿದೆ. ದಿನಕ್ಕೆ 30 ಲೋಡ್‌ ಮಾಡಲಾಗುತ್ತಿತ್ತು ಈಗ ಎಂಟಕ್ಕೆ ಇಳಿದಿದೆ. ನಾವು 500 ಅಡಿಗಳಷ್ಟು ಬೋರ್ ವೆಲ್ ಕೊರೆದು ಸುಮಾರು ಒಂದು ದಶಕದಿಂದ ನೀರು ಸರಬರಾಜು ಮಾಡುತ್ತಿದ್ದೇವೆ. ಮೊದಲ ಬಾರಿಗೆ ಬೋರ್‌ವೆಲ್ ನಲ್ಲಿ ನೀರು ಕಡಿಮೆಯಾಗಿದೆ. ನಮ್ಮ ರೆಗ್ಯುಲರ್ ಗ್ರಾಹಕರು ಕಾಯುತ್ತಿರುವ ಕಾರಣ ಕಾಯ್ದಿರಿಸಲು ಎರಡು ದಿನ ಮುಂಚಿತವಾಗಿ ಕರೆ ಮಾಡಲು ನಾನು ಕೇಳಿದ್ದೇನೆ ಎಂದು ಗಣೇಶ್ ಹೇಳಿದರು.

ಟ್ಯಾಂಕರ್ ನಲ್ಲಿ ನೀರು ಪೂರೈಕೆ
ಬೆಂಗಳೂರಿಗೆ 500 ಎಂಎಲ್ ಡಿ ನೀರಿನ ಕೊರತೆ: ಸಿಎಂ ಸಿದ್ದರಾಮಯ್ಯ

ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಿದ ಜಲ ಸಂರಕ್ಷಣಾ ತಜ್ಞ ಮತ್ತು ಜಲತಜ್ಞ ವಿಶ್ವನಾಥ್ ಶ್ರೀಕಂಠಯ್ಯ, ಸರ್ಕಾರವು ಒಂದು ಕಡೆ ಟ್ಯಾಂಕರ್ ಮಾಲೀಕರನ್ನು ತಮ್ಮಲ್ಲಿ ನೋಂದಾಯಿಸಲು ಕೇಳುತ್ತಿದೆ ಮತ್ತು ಇನ್ನೊಂದೆಡೆ ಅನೇಕ ಟ್ಯಾಂಕರ್ ಮಾಲೀಕರು ವ್ಯಾಪಾರದಿಂದ ನಿರ್ಗಮಿಸುತ್ತಿದ್ದಾರೆ. ಟ್ಯಾಂಕರ್ ಪೂರೈಕೆದಾರರಿಗೆ ತಮ್ಮ ರೆಗ್ಯುಲರ್ ಗ್ರಾಹಕರು ಯಾರೆಂದು ತಿಳಿದಿರುತ್ತದೆ. ಹೀಗಾಗಿ ಯಾವುದೇ ಗೊಂದಲವನ್ನು ಸೃಷ್ಟಿಸುವುದಿಲ್ಲ. ಹಲವೆಡೆ ನೀರಿನ ಮೂಲವೇ ಇಲ್ಲದ ಕಾರಣ ಇರುವ ಮೂಲಗಳಿಂದಲೇ ಕೆಲ ಟ್ಯಾಂಕರ್‌ಗಳು ಗ್ರಾಹಕರಿಗೆ ಅನುಕೂಲ ಮಾಡಿಕೊಡುತ್ತಿವೆ.

ಸರಕಾರವು ಪಡಿತರವನ್ನು ಹೇಗೆ ಮಾಡುತ್ತದೆ? ಟ್ಯಾಂಕರ್ ಮಾಲೀಕರು ತಮ್ಮ ಗ್ರಾಹಕರನ್ನು ತಿಳಿದಿದ್ದಾರೆ, ಸರ್ಕಾರವು ಸಮಸ್ಯೆಯನ್ನು ಸೂಕ್ಷ್ಮವಾಗಿ ನಿಭಾಯಿಸಲು ವಿಫಲವಾದರೆ, ಸಾರ್ವಜನಿಕರಿಗೆ ತೊಂದರೆಯಾಗುತ್ತದೆ, ಹೆಚ್ಚಿನ ಟ್ಯಾಂಕರ್ ಮಾಲೀಕರು ನಿರ್ಗಮಿಸುತ್ತಾರೆ. ಅಂತಿಮವಾಗಿ ಆಡಳಿತವೂ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಈಗಿರುವ ಟ್ಯಾಂಕರ್‌ ಆಪರೇಟರ್‌ಗಳಿಗೆ ತೊಂದರೆಯಾಗುವ ಬದಲು ಬೆಂಗಳೂರಿನಿಂದ ಹೊರಭಾಗದ ಟ್ಯಾಂಕರ್‌ಗಳನ್ನು ಬಾಡಿಗೆಗೆ ತರಬೇಕು ಎಂದು ವಿಶ್ವನಾಥ್‌ ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com