ಬೆಂಗಳೂರು ಜಲ ಬಿಕ್ಕಟ್ಟಿಗೆ ಸಂಸ್ಕರಿಸಿದ ಕೊಳಚೆ ನೀರು ಬಳಸುವುದೊಂದೇ ಪರಿಹಾರ: ಜಲತಜ್ಞ ಸುಬ್ರಹ್ಮಣ್ಯ ಕುಸ್ನೂರು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ನೀರಿನ ಬಿಕ್ಕಟ್ಟು ಸಮಸ್ಯೆ ದೂರಾಗಿಸಲು ಸಂಸ್ಕರಿಸಿದ ಕೊಳಚೆ ನೀರು ಬಳಸುವುದೊಂದೇ ಪರಿಹಾರವಾಗಿದೆ ಎಂದು ಜಲತಜ್ಞ ಸುಬ್ರಹ್ಮಣ್ಯ ಕುಸ್ನೂರು ಅವರು ಹೇಳಿದ್ದಾರೆ.
ಜಲತಜ್ಞ ಸುಬ್ರಹ್ಮಣ್ಯ ಕುಸ್ನೂರು
ಜಲತಜ್ಞ ಸುಬ್ರಹ್ಮಣ್ಯ ಕುಸ್ನೂರು
Updated on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ನೀರಿನ ಬಿಕ್ಕಟ್ಟು ಸಮಸ್ಯೆ ದೂರಾಗಿಸಲು ಸಂಸ್ಕರಿಸಿದ ಕೊಳಚೆ ನೀರು ಬಳಸುವುದೊಂದೇ ಪರಿಹಾರವಾಗಿದೆ ಎಂದು ಜಲತಜ್ಞ ಸುಬ್ರಹ್ಮಣ್ಯ ಕುಸ್ನೂರು ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಪದೇ ಪದೇ ನೀರಿನ ಸಮಸ್ಯೆ ಎದುರಾಗುತ್ತಿದ್ದು, ರಾಜ್ಯ ಭೀಕರ ಬರಗಾಲದಿಂದ ಬಳಲುತ್ತಿದ್ದರೂ ರಾಜಕೀಯ ಪಕ್ಷಗಳು ಸಮಸ್ಯೆ ಪರಿಹರಿಸಲು ತಮ್ಮ ಪ್ರಣಾಳಿಕೆಯಲ್ಲಿ ಒಂದೂ ಭರವಸೆಯನ್ನೂ ನೀಡಿಲ್ಲ ಎಂದು ಪರಿಸರವಾದಿ ಬೆನೆಡಿಕ್ಟ್ ಪರಮಾನಂದ ಅವರು ಹೇಳಿದ್ದಾರೆ.

ಅಪಾಯ ಎಂಬುದು ಜನರತ್ತ ದಿಟ್ಟಿಸಿ ನೋಡುತ್ತಿದ್ದು, ಪರಿಸ್ಥಿತಿ ಬಗ್ಗೆ ರಾಜಕೀಯ ಪಕ್ಷಗಳು ಹಾಗೂ ಆಡಳಿತಾರೂಢ ಸರ್ಕಾರ ಎಚ್ಚೆತ್ತುಕೊಳ್ಳಬೇಕಾದ ಸಮಯ ಬಂದಿದೆ ಎಂದು ತಿಳಿಸಿದ್ದಾರೆ.

ಕೇವಲ ಬೆಂಗಳೂರು ಅಷ್ಟೇ ಅಲ್ಲ, ವಿಶ್ವದಲ್ಲಿಯೇ ಕುಡಿಯುವ ನೀರು ಸೀಮಿತವಾಗಿರುವುದರಿಂದ, ಸಮಸ್ಯೆ ಪರಿಹರಿಸಲು ಸಂಸ್ಕರಿಸಿದ ಒಳಚರಂಡಿ ನೀರು ಮಾತ್ರ ಪರಿಹಾರವಾಗಿದೆ ಎಂದು ಮತ್ತೊಬ್ಬ ಜಲತಜ್ಞ ಸುಬ್ರಹ್ಮಣ್ಯ ಅವರು ಹೇಳಿದ್ದಾರೆ.

ಶೇ.95 ರಷ್ಟು ಕೊಳಚೆ ನೀರನ್ನು ಸಾಮಾನ್ಯ ನೀರಿಗೆ ಪರಿವರ್ತಿಸುವ ಮಾರ್ಗಗಳನ್ನು ನಾವು ಅಭಿವೃದ್ಧಿಪಡಿಸಿದ್ದೇವೆ, ಇದನ್ನು ತೋಟಗಾರಿಕೆ, ಕಾರುಗಳನ್ನು ತೊಳೆಯಲು ಮತ್ತು ಮುಖ್ಯವಾಗಿ ಜಲಚರಗಳು ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಬಳಕೆ ಮಾಡಬಹುದಾಗಿದೆ. ಸಿಂಗಾಪುರದಂತಹ ರಾಷ್ಟ್ರದಲ್ಲಿಯೂ ನೀರನ್ನು ಮರುಬಳಕೆ ಮಾಡಲು ಇಂತಹ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿಯೂ ಈ ತಂತ್ರಜ್ಞಾನ ಅಳವಡಿಸಿಕೊಳ್ಳಲು ಕೆಲ ವರ್ಷ ಕಾಲ ಬೇಕಾಗಬಹುದು ಎಂದು ಹೇಳಿದ್ದಾರೆ.

ಜಲತಜ್ಞ ಸುಬ್ರಹ್ಮಣ್ಯ ಕುಸ್ನೂರು
ಬತ್ತುತ್ತಿರುವ ಕೊಳವೆ ಬಾವಿಗಳು, ಸಿಗದ ನೀರು: ಟ್ಯಾಂಕರ್ ನೀರು ಪೂರೈಕೆಗೂ ಬಂತು ಕುತ್ತು!

“ರಾಸಾಯನಿಕಗಳನ್ನು ಒಳಗೊಂಡಿರದ ವೈಜ್ಞಾನಿಕ ಸಂಸ್ಕರಣೆಯ ಮೂಲಕ ಕೊಳಚೆ ನೀರನ್ನು ಮರುಬಳಕೆ ಮಾಡಬಹುದಾದ ನೀರಾಗಿ ಪರಿವರ್ತಿಸುವ ಮಾರ್ಗಗಳನ್ನು ನಾವು ಕಂಡು ಹಿಡಿದಿದ್ದೇವೆ. ಅಂತಹ ಘಟಕಗಳನ್ನು ಮನೆಗಳಲ್ಲಿ ಸೂಕ್ಷ್ಮ ಮಟ್ಟದಲ್ಲಿ ಅಥವಾ ನಗರಗಳು ಅಥವಾ ಪಟ್ಟಣಗಳಲ್ಲಿ ಮ್ಯಾಕ್ರೋ ಮಟ್ಟದಲ್ಲಿ ಸ್ಥಾಪಿಸಬಹುದು. ಘಟಕಗಳ ಸ್ಥಾಪನೆ ಮಾಡಲು ಸಾಧ್ಯವಾಗದವರಿಗೆ ಖಾಸಗಿ ಸಂಸ್ಥೆಗಳು ನೆರವಿಗಿರುತ್ತವೆ. ಇದು ಉತ್ತಮ ಪ್ರಯತ್ನಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com