Bengaluru Metro ದಲ್ಲಿ ಮತ್ತೊಂದು Sexual harassment ಪ್ರಕರಣ: ಮಹಿಳೆ ಎದುರು ಅಶ್ಲೀಲ ವರ್ತನೆ, ದೂರು ದಾಖಲು, ಸಿಬ್ಬಂದಿ ಅಮಾನತು

ನಮ್ಮ ಮೆಟ್ರೋ (Namma Metro)ದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ಕೇಳಿಬಂದಿದ್ದು, ಈ ಬಾರಿ ಸ್ವತಃ ಸಿಬ್ಬಂದಿಯೊಬ್ಬ ಮಹಿಳೆಯ ಮುಂದೆ ಅಸಭ್ಯವಾದ ವರ್ತನೆ (Indecent behavior) ತೋರಿದ್ದಾನೆ ಎಂದು ಹೇಳಲಾಗಿದೆ.
ಮಹಿಳೆ ಎದುರೇ ಸಿಬ್ಬಂದಿ ಅಶ್ಲೀಲ ವರ್ತನೆ
ಮಹಿಳೆ ಎದುರೇ ಸಿಬ್ಬಂದಿ ಅಶ್ಲೀಲ ವರ್ತನೆ

ಬೆಂಗಳೂರು: ನಮ್ಮ ಮೆಟ್ರೋ (Namma Metro)ದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ಕೇಳಿಬಂದಿದ್ದು, ಈ ಬಾರಿ ಸ್ವತಃ ಸಿಬ್ಬಂದಿಯೊಬ್ಬ ಮಹಿಳೆಯ ಮುಂದೆ ಅಸಭ್ಯವಾದ ವರ್ತನೆ (Indecent behavior) ತೋರಿದ್ದಾನೆ ಎಂದು ಹೇಳಲಾಗಿದೆ.

ಹೌದು.. ಮಹಿಳೆ (Women) ಎದುರು ನಮ್ಮ ಮೆಟ್ರೋ (Namma Metro) ಸಿಬ್ಬಂದಿಯೋರ್ವ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಂಗಳೂರಿನ ಜಾಲಹಳ್ಳಿ ಮೆಟ್ರೋ ಫ್ಲಾಟ್​​ಫಾರ್ಮ್​​ನಲ್ಲಿ (Jalahalli Metro Station) ನಡೆದಿದೆ. ಕಳೆದ ಎರಡು ಮೂರು ದಿನಗಳ ಹಿಂದೆ ಘಟನೆ ನಡೆದಿದ್ದು, ಈ ಕುರಿತು ಮಹಿಳೆಯೊಬ್ಬರು ನಮ್ಮ ಮೆಟ್ರೋಗೆ ದೂರು ನೀಡಿದ್ದಾರೆ. ಆದರೆ ನಮ್ಮ ಮೆಟ್ರೋ ಸಿಬ್ಬಂದಿ (Namma Metro Staff) ಯಾವುದೇ ಕ್ರಮಕೈಗೊಳ್ಳದ ಹಿನ್ನೆಲ್ಲೆಯಲ್ಲಿ ಸದ್ಯ ಮಹಿಳೆ ಪೊಲೀಸರಿಗೆ ಟ್ಯಾಗ್​ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಮಹಿಳೆ ಎದುರೇ ಸಿಬ್ಬಂದಿ ಅಶ್ಲೀಲ ವರ್ತನೆ
ನಮ್ಮ ಮೆಟ್ರೋ ಅಧಿಕಾರಿಯಿಂದ ಮಹಿಳಾ ಸೆಕ್ಯೂರಿಟಿಗಳಿಗೆ ಲೈಂಗಿಕ ಕಿರುಕುಳ ಆರೋಪ; ಎಫ್ಐಆರ್ ದಾಖಲು

ಮೊಬೈಲ್ ಕೃತ್ಯ ಸೆರೆ

ನಮ್ಮ ಮೆಟ್ರೋ ಸಿಬ್ಬಂದಿ ಮಹಿಳೆ ಎದುರು ಫ್ಲಾಟ್​ ಫಾರ್ಮ್ ನಲ್ಲೇ ಅಸಭ್ಯವಾಗಿ ವರ್ತಿಸಿರುವ ದೃಶ್ಯಗಳು ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ. ಸಿಬ್ಬಂದಿಯೋರ್ವ ತನ್ನ ಖಾಸಗಿ ಅಂಗವನ್ನು ಮಹಿಳೆ ಎದುರು ಸ್ಪರ್ಶ ಮಾಡುತ್ತಾ ಅಸಭ್ಯವಾಗಿ ವರ್ತನೆ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕೃತ್ಯದ ಕುರಿತು ಮಹಿಳೆ ಆಕ್ಷೇಪಿಸಿದರೂ ಆತ ನಿಲ್ಲಿಸಿಲ್ಲ. ಬಳಿಕ ಆಕೆ ಇದನ್ನು ವಿಡಿಯೋ ಮಾಡಿಕೊಳ್ಳಲು ಆರಂಭಿಸಿದಾಗ ಆತ ಅಲ್ಲಿಂದ ಹೋಗಿದ್ದಾನೆ ಎಂದು ಗೊತ್ತಾಗಿದೆ.

ದೂರು ದಾಖಲು

ಜಾಲಹಳ್ಳಿ ಮೆಟ್ರೋ ಫ್ಲಾಟ್ ಫಾರ್ಮ್​ನಲ್ಲಿ ಸಿಬ್ಬಂದಿ ಅಸಭ್ಯ ವರ್ತನೆ ತೋರಿದ್ದಾನೆ. ಈ ಘಟನೆ ಕುರಿತು ಮೆಟ್ರೋ ಮೇಲಾಧಿಕಾರಿಗಳಿಗೆ ಮಹಿಳೆ ದೂರು ನೀಡಿದ್ದಾರೆ. ದೂರು ನೀಡಿದರೂ ಮೇಲಾಧಿಕಾರಿಗಳಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸದ್ಯ ಮೆಟ್ರೋ ಫ್ಲಾಟ್​ಫಾರ್ಮ್​ನಲ್ಲಿ ಸಿಬ್ಬಂದಿ ತೋರಿದ ಅಸಭ್ಯ ವರ್ತನೆ ಕುರಿತು ಮಹಿಳೆ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಕ್ರಮ ಕೈಗೊಳ್ಳಲು ಮನವಿ ಮಾಡಿಕೊಂಡಿದ್ದಾರೆ.

ಆತಂಕಿತರಾದ ಮಹಿಳೆ, ʼನನಗೆ ಇಲ್ಲಿ ಅಸುರಕ್ಷಿತʼ ಎನಿಸುತ್ತಿದೆ ಎಂದು ಎಕ್ಸ್‌ನಲ್ಲಿ ಸಂದೇಶ ಹಾಕಿದ್ದಾರಲ್ಲದೆ, ಕ್ರಮ ಕೈಗೊಳ್ಳುವಂತೆ ಮೆಟ್ರೋ ಅಧಿಕಾರಿಗಳು ಹಾಗೂ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಸಿಬ್ಬಂದಿ ಅಮಾನತು: BMRCL ಸ್ಪಷ್ಟನೆ

ಜಾಲಹಳ್ಳಿ ಘಟನೆಯ ದೂರಿಗೆ ಪ್ರತಿಕ್ರಿಯಿಸಿರುವ ಬಿಎಂಆರ್ ಸಿಎಲ್, ಘಟನೆ ಕುರಿತು ವಿವರವಾದ ತನಿಖೆಗಾಗಿ ಭದ್ರತಾ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಮಹಿಳಾ ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಗೆ ಸಂಸ್ಥೆ ಒತ್ತು ನೀಡುತ್ತದೆ. ಮಹಿಳಾ ಭದ್ರತೆ ವಿಚಾರದಲ್ಲಿ ಬಿಎಂಆರ್ ಸಿಎಲ್ ಶೂನ್ಯ ಸಹಿಷ್ಣುತೆಯ ನೀತಿಯನ್ನು ಹೊಂದಿದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com