ಬೆಂಗಳೂರು: ಮಾನಸಿಕ ಆರೋಗ್ಯ ಕೇಂದ್ರಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ

ಬೆಂಗಳೂರಿನ ಬಿಇಎಲ್ ಲೇಔಟ್ ಬಳಿ ಹೊಸದಾಗಿ ಆರಂಭಿಸಲಾಗಿರುವ ಸುಕೂನ್ ಮಾನಸಿಕ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಬುಧವಾರ ಚಾಲನೆ ನೀಡಿದರು.
ಮಾನಸಿಕ ಆರೋಗ್ಯ ಕೇಂದ್ರಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ
ಮಾನಸಿಕ ಆರೋಗ್ಯ ಕೇಂದ್ರಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ

ಬೆಂಗಳೂರು: ಬೆಂಗಳೂರಿನ ಬಿಇಎಲ್ ಲೇಔಟ್ ಬಳಿ ಹೊಸದಾಗಿ ಆರಂಭಿಸಲಾಗಿರುವ ಸುಕೂನ್ ಮಾನಸಿಕ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಬುಧವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವರು, ಇಂದಿನ ಯುವಕರು ಒತ್ತಡದ ನಡುವೆ ಕೆಲಸ ನಿರ್ವಹಿಸುತ್ತಾ ಮಾನಸಿಕವಾಗಿ ತಮ್ಮ ಸ್ಥಿಮತವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಜೊತೆಗೆ ಖಿನ್ನತೆಗೆ ಒಳಗಾಗಿ ಸಾವನ್ನಪ್ಪುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಅವರಿಗೆ ಉತ್ತಮ ಮಾನಸಿಕ ಚಿಕಿತ್ಸೆ ಅಗತ್ಯವಾಗಿದೆ. ಯುವಕರ ಪಡೆ ಸುಕೂನ್ ಚಿಕಿತ್ಸಾ ಕೇಂದ್ರವನ್ನು ಆರಂಭಿಸಿರುವುದು ಶ್ಲಾಘನೀಯ. ಇಂತಹ ಮಾನಸಿಕ ಚಿಕಿತ್ಸಾ ಕೇಂದ್ರಗಳು ಎಲ್ಲ ಜಿಲ್ಲಾ ಕೇಂದ್ರ ಗಳಲ್ಲಿ ಪ್ರಾರಂಭವಾಗಬೇಕು, ರಾಜ್ಯ ಸರ್ಕಾರ ನಿಮ್ಹಾನ್ಸ್ ಸಹಯೋಗದಲ್ಲಿ ಎಲ್ಲ ಜಿಲ್ಲಾ ಆಸ್ಪತ್ರೆಯ ಕೇಂದ್ರಗಳಲ್ಲಿ ಮಾನಸಿಕ ಕೇಂದ್ರಗಳನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ನಿಮ್ಹಾನ್ಸ್ ನೇತೃತ್ವದಲ್ಲಿ ಮೆಂಟಲ್ ಹೆಲ್ತ್ ಹಬ್ ಆಗಿ ಪರಿವರ್ತನೆಗೊಳ್ಳಲಿದೆ ಎಂದು ಹೇಳಿದರು.

ಮಾನಸಿಕ ಆರೋಗ್ಯ ಕೇಂದ್ರಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ
BSY ವಿರುದ್ಧ ಪೋಕ್ಸೋ ಪ್ರಕರಣ: ವಿನಾಕಾರಣ ತೇಜೋವಧೆ ಮಾಡುವುದು ಸರಿಯಲ್ಲ‌; ಸಚಿವ ದಿನೇಶ್ ಗುಂಡೂರಾವ್

ಸುಕೂನ್ ಹೆಲ್ತ್, ನವದೆಹಲಿ, ಗುರುಗ್ರಾಮ ಮತ್ತು ಮಧ್ಯಪ್ರದೇಶದಲ್ಲಿಯೂ ಕೇಂದ್ರಗಳನ್ನು ಹೊಂದಿದ್ದು, ಇದೀಗ ಬೆಂಗಳೂರಿನಲ್ಲಿಯೂ ತನ್ನ ಕೇಂದ್ರವನ್ನು ಆರಂಭಿಸಿದೆ. ಈ ಕೇಂದ್ರವು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಮತ್ತು ಡಿ-ಅಡಿಕ್ಷನ್ ಸೇವೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಬೆಂಗಳೂರಿನ ಸುಕೂನ್ ಹೆಲ್ತ್‌ನ ಕೇಂದ್ರದ ಮುಖ್ಯಸ್ಥ ಡಾ ಸತೀಶ್ ರಾಮಯ್ಯ ಮಾತನಾಡಿ, “ನಾವು ಸಮಗ್ರ ಆರೈಕೆ ವಿಧಾನಕ್ಕೆ ಆದ್ಯತೆ ನೀಡುತ್ತೇವೆ, ಅದು ಕೇವಲ ಚೇತರಿಕೆಗೆ ಮಾತ್ರವಲ್ಲದೆ ನಮ್ಮ ರೋಗಿಗಳ ಸಮಗ್ರ ಯೋಗಕ್ಷೇಮವನ್ನು ಕೇಂದ್ರೀಕರಿಸುತ್ತದೆ. ನಾವು ವ್ಯಕ್ತಿಯ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದೇವೆಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com