ಬಿಸಿಲ ದಗೆಗೆ ಕೆರೆಗಳು ಬರಿದು: ಮೀನುಗಾರರಿಗೂ ತಟ್ಟಿದ ಬರದ ಬಿಸಿ!

ನಗರದಲ್ಲಿ ದಿನ ಕಳೆಯುತ್ತಿದ್ದಂತೆಯೇ ತಾಪಮಾನ ಹೆಚ್ಚುತ್ತೇ ಇದ್ದು, ಬಿಸಿಲ ದಗೆಗೆ ಜಲಮೂಲಗಳು ಬರಿದಾಗುತ್ತಿವೆ. ನೀರಿನ ಮಟ್ಟ ತೀವ್ರವಾಗಿ ಕುಸಿದಿರುವುದರಿಂದ ಕೆರೆಗಳನ್ನೇ ಅವಲಂಬಿಸಿ ಜೀವನ ನಡೆಸುತ್ತಿರುವ ಮೀನುಗಾರರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.
ವಿಭೂತಿಪುರ ಕೆರೆ
ವಿಭೂತಿಪುರ ಕೆರೆ
Updated on

ಬೆಂಗಳೂರು: ನಗರದಲ್ಲಿ ದಿನ ಕಳೆಯುತ್ತಿದ್ದಂತೆಯೇ ತಾಪಮಾನ ಹೆಚ್ಚುತ್ತೇ ಇದ್ದು, ಬಿಸಿಲ ದಗೆಗೆ ಜಲಮೂಲಗಳು ಬರಿದಾಗುತ್ತಿವೆ. ನೀರಿನ ಮಟ್ಟ ತೀವ್ರವಾಗಿ ಕುಸಿದಿರುವುದರಿಂದ ಕೆರೆಗಳನ್ನೇ ಅವಲಂಬಿಸಿ ಜೀವನ ನಡೆಸುತ್ತಿರುವ ಮೀನುಗಾರರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.

ಬೆಂಗಳೂರು ಮೀನು ಉತ್ಪಾದಕ ಮತ್ತು ಮಾರಾಟ ಸಹಕಾರ ಸಂಘದ ಸಲಹೆಗಾರ ಸುಬ್ಬಯ್ಯ ಮಾತನಾಡಿ, ಹಲಸೂರು ಕೆರೆಯಲ್ಲಿ ಕಳೆದ 25 ದಿನಗಳಿಂದ ಮೀನುಗಾರಿಕೆ ಸ್ಥಗಿತಗೊಂಡಿದೆ. ಜಕ್ಕೂರು ಕೆರೆಯಲ್ಲಿ ಕಳೆದ ಮೂರು ವಾರಗಳಿಂದ ನೀರು ಕಡಿಮೆಯಾಗಿ ಮೀನುಗಾರಿಕೆ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.

ಕೆರೆಯಲ್ಲಿ ಕಟ್ಲಾ, ರೋಹು, ಮೃಗಾಲ್ ಮತ್ತು ತಿಲಾಪಿಯಾ ಮೀನುಗಳು ಸಿಗುತ್ತಿದ್ದವು. ಇವುಗಳ ಬೆಲೆ ಕಿಲೋಗೆ 7 ರಿಂದ 80 ರೂ ಇದೆ ಎಂದು ಸುಬ್ಬಯ್ಯ ಅವರು ಹೇಳಿದ್ದಾರೆ.

2,500 ಕ್ಕೂ ಹೆಚ್ಚು ಮೀನುಗಾರರು ಮತ್ತು ಅವರ ಕುಟುಂಬಗಳು 137 ಕೆರೆಗಳನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದು, ಈಗಾಗೇ ಶೇ. 35 ರಷ್ಟು ಕೆರೆಗಳು ಬತ್ತಿಹೋಗಿವೆ. ಒಟ್ಟು 35 ಮೀನುಗಾರ ಕುಟುಂಬಗಳು ಹಲಸೂರು ಕೆರೆಯನ್ನು ಅವಲಂಬಿಸಿವೆ. ಆದರೆ, ಕಳೆದೊಂದು ತಿಂಗಳಿನಿಂದ ಕೆರೆಯಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಾಗಿ ದೋಣಿಗಳಿಗೆ ಯೋಗ್ಯವಾಗದ ಕಾರಣ ಮೀನುಗಾರಿಕೆ ನಡೆಯುತ್ತಿಲ್ಲ. ಹೀಗಾಗಿ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರ ಹೇಳಿದ್ದಾರೆ.

ವಿಭೂತಿಪುರ ಕೆರೆ
ಬೆಂಗಳೂರು ನೀರು ಬಿಕ್ಕಟ್ಟು ನಡುವಲ್ಲೇ ಗಮನ ಸೆಳೆಯುತ್ತಿದೆ ಯಡಿಯೂರಿನ ಜಲಸಂರಕ್ಷಣಾ ಕ್ರಮ!

ಕೆರೆಗಳ ಮುಖ್ಯ ಎಂಜಿನಿಯರ್ ವಿಜಯ್ ಕುಮಾರ್ ಮಾತನಾಡಿ, ಬೆಂಗಳೂರಿನ ಜಲಮೂಲಗಳನ್ನು ನಾಗರಿಕ ಸಂಸ್ಥೆಗಳು ನೋಡಿಕೊಳ್ಳುತ್ತಿವೆ, ಆದರೆ ಕೆರೆಗಳಲ್ಲಿನ ಮೀನುಗಾರಿಕೆ.ು ಮೀನುಗಾರಿಕೆ ಇಲಾಖೆಯ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

ಲವು ಕೆರೆಗಳು ಬತ್ತಿ ಹೋಗುವುದರಿಂದ ಮೀನುಗಾರರ ಜೀವನದ ಮೇಲೂ ಪರಿಣಾಮ ಬೀರುತ್ತಿದೆ. ಕೆರೆಗಳು ಮಳೆಯಿಂದ ಅಥವಾ ಸಂಸ್ಕರಿಸಿದ ನೀರಿನಿಂದ ತುಂಬಿಸಬೇಕಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ನಗರ ಮೀನುಗಾರಿಕಾ ಉಪನಿರ್ದೇಶಕ ಚಿಕ್ಕಣ್ಣ, ಅವರು ಮಾತನಾಡಿ, ಮೀನುಗಾರರಿಗೆ ನಗರ ಜಲಮೂಲಗಳಿಂದ ಮೀನುಗಾರಿಕೆ ನಡೆಸಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಬೆಂಗಳೂರಿನ ಹಲವು ಕೆರೆಗಳು ಬತ್ತಿ ಹೋಗಿವೆ. ಹೀಗಾಗಿ ಕೆಲವು ಕೆರೆಗಳನ್ನು ಸಂಸ್ಕರಿಸಿದ ನೀರಿನಿಂದ ತುಂಬಿಸಲಾಗುತ್ತಿದೆ. ಮೀನುಗಾರರಿಗೆ ಐದು ವರ್ಷಗಳ ಗುತ್ತಿಗೆ ನೀಡಿರುವುದರಿಂದ ಮಳೆ ಬಂದರೆ ಪರಿಸ್ಥಿತಿ ಸುಧಾರಿಸುವ ಭರವಸೆ ಇದೆ ಎಂದು ಹೇಳಿದ್ದಾರೆ.

ದತ್ತಾಂಶದ ಪ್ರಕಾರ ಒಟ್ಟು 16.072 ಲಕ್ಷ ರೂ.ಗೆ 70 ಕೆರೆಗಳನ್ನು ಗುತ್ತಿಗೆಗೆ ನೀಡಲಾಗಿದ್ದು, ಇ-ಟೆಂಡರ್ ಅಡಿಯಲ್ಲಿ ಮೀನುಗಾರರಿಗೆ 67 ಕೆರೆಗಳನ್ನು ಗುತ್ತಿಗೆಗೆ ನೀಡಲಾಗಿದೆ. ಇದರಿಂದ ಇಲಾಖೆಗೆ 113.74 ಲಕ್ಷ ರೂ. ಆದಾಯ ಬರುತ್ತಿದೆ. ಅದೇ ರೀತಿ ಎರಡು ಜಲಾಶಯಗಳಾದ ತಿಪ್ಪಗೊಂಡನಹಳ್ಳಿ ಮತ್ತು ಹೆಸರಘಟ್ಟವನ್ನು 5.40 ಲಕ್ಷ ರೂ.ಗೆ ಗುತ್ತಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com