'ಆತ ಹಿಂದಿನಿಂದ ಬಂದು ನನ್ನನ್ನು ತಬ್ಬಿಕೊಂಡ': ಮಹಿಳೆ ಹಂಚಿಕೊಂಡ ಕೆಟ್ಟ ಅನುಭವ...

ಮಹಿಳೆಯ ಸುರಕ್ಷತೆ ಬಗ್ಗೆ ಟ್ವಿಟ್ಟರ್ ನಲ್ಲಿ ಪೋಸ್ಟ್ ಹಂಚಿಕೆ, ಕಾನೂನು ಬಗ್ಗೆ ಕಳವಳ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಳೆದ ಸೋಮವಾರ ರಾತ್ರಿ ತನ್ನ ನಿವಾಸ ಬಳಿ ಅಪರಿಚಿತ ಪುರುಷನೊಬ್ಬ ಬಂದು ತನ್ನನ್ನು ಏಕಾಏಕಿ ತಬ್ಬಿ ಲೈಂಗಿಕ ದೌರ್ಜನ್ಯ ನಡೆಸಲು ಪ್ರಯತ್ನಿಸಿದನು ಎಂದು ಮಹಿಳೆಯೊಬ್ಬರು ಟ್ವಿಟ್ಟರ್ ನಲ್ಲಿ ಸರಣಿ ಪೋಸ್ಟ್‌ಗಳ ಮೂಲಕ ಆರೋಪಿಸಿದ್ದಾರೆ. ಈ ಕುರಿತು ವಿಡಿಯೊವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಮಹಿಳೆ ಅದರಲ್ಲಿ ಪುರುಷ ನಡೆದುಕೊಂಡ ರೀತಿ ಮತ್ತು ನಂತರ ಆ ಪುರುಷ ತನ್ನ ಮುಖವನ್ನು ಮರೆಮಾಚಲು ನೋಡುತ್ತಿದ್ದಾನೆ.

ಮಹಿಳೆಯ ಪೋಸ್ಟ್ ನಲ್ಲಿ ಏನಿದೆ?: “ಕಳೆದ ರಾತ್ರಿ ಬೆಂಗಳೂರಿನ ನನ್ನ ಮನೆಯ ಹತ್ತಿರ ನನ್ನ ಸ್ನೇಹಿತ ಬಂದು ಬಿಟ್ಟು ಹೋದನು. ನನ್ನ ಮನೆಯ ಗೇಟ್ ನ್ನು ತೆರೆಯುವಷ್ಟರಲ್ಲಿ ಈ ವ್ಯಕ್ತಿ ಬಂದು ಹಿಂದಿನಿಂದ ನನ್ನನ್ನು ಎಳೆದಾಡಿ ನನ್ನ ಸ್ನೇಹಿತನೊಬ್ಬ ನನ್ನನ್ನು ನನ್ನ ಮನೆಯ ಹತ್ತಿರ ಡ್ರಾಪ್ ಮಾಡಿ ನಾನು ಗೇಟ್ ತೆರೆಯಲು ಮುಂದಾದಾಗ, ಈ ವ್ಯಕ್ತಿ ಬಂದು ನನ್ನನ್ನು ಹಿಂದಿನಿಂದ ತಬ್ಬಿಹಿಡಿದು ನಂತರ ತಪ್ಪಿಸಿಕೊಂಡು ಓಡಿಹೋಗಲಾರಂಭಿಸಿದನು. ನಾನು ಕೂಡಲೇ ನನ್ನ ಸ್ನೇಹಿತನಿಗೆ ಕರೆ ಮಾಡಿ ಅವನನ್ನು ಹಿಡಿಯುವಂತೆ ಹೇಳಿದೆನು ಎಂದು ಮೊದಲ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಎರಡನೇ ಪೋಸ್ಟ್ ನಲ್ಲಿ ಮಹಿಳೆ, ಕೂಡಲೇ ನನ್ನ ಸ್ನೇಹಿತ ಪೊಲೀಸರಿಗೆ ಕರೆ ಮಾಡಿ ಅವರು ಬಂದು ವ್ಯಕ್ತಿಯನ್ನು ವಶಕ್ಕೆ ಪಡೆದರು. ಆತನ ಮೇಲೆ ದೂರು ದಾಖಲಿಸದ ಕಾರಣ ಪೊಲೀಸರು ಅವನನ್ನು ಬಿಟ್ಟುಬಿಟ್ಟರು ಎಂದು ಮಹಿಳೆ ಮತ್ತೊಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ದುರುದೃಷ್ಟವಶಾತ್ ನಮ್ಮ ಸಂವಿಧಾನದಲ್ಲಿನ ಕಾನೂನು ಇಂತಹ ದುರುಳರನ್ನು ರಕ್ಷಿಸುತ್ತದೆ. ನನ್ನನ್ನು ಬಚಾವ್ ಮಾಡುವಲ್ಲಿ ಆತನಿಗೆ ಗಾಯಗಳಾಗಿದ್ದರೆ ನನ್ನ ಮೇಲೆ ಆರೋಪ ಹೊರಿಸಲಾಗುತ್ತಿತ್ತು. ಎಂತಹ ನಾಚಿಕೆಗೇಡಿನ ಸಂಗತಿ ಎಂದು ಮಹಿಳೆ ಕಾನೂನು, ಪೊಲೀಸ್ ವ್ಯವಸ್ಥೆ ಮೇಲೆ ಅಸಹನೆ ವ್ಯಕ್ತಪಡಿಸಿದ್ದಾರೆ.

"ಮುಂದೆ ಎದುರಾಗಬಹುದಾದ ಸಮಸ್ಯೆಗಳಿಂದಾಗಿ ನಾನು ಆ ವ್ಯಕ್ತಿ ವಿರುದ್ಧ ಎಫ್‌ಐಆರ್ ದಾಖಲಿಸಲು ಸಾಧ್ಯವಾಗಲಿಲ್ಲ. ಪೊಲೀಸ್ ದೂರು, ನಂತರ ಕೋರ್ಟ್ ನಲ್ಲಿ ವಿಚಾರಣೆಗಳು ಅಂತ ನಾನು ಮಾನಸಿಕವಾಗಿ ಕಿರುಕುಳಕ್ಕೊಳಗಾಗುತ್ತೇನೆ. ಅದರ ಬದಲು ಬಿಟ್ಟುಬಿಡುವಂತೆ ಆ ಸಮಯದಲ್ಲಿ ನನ್ನ ಸಹಾಯಕ್ಕೆ ಬಂದ ನನ್ನ ನೆರೆಹೊರೆಯ ಜನರು ಹೇಳಿದರು ಎಂದು ಮಹಿಳೆ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಇಂದಿನ ಸಮಾಜದಲ್ಲಿ ಮಹಿಳೆಯರ ಸುರಕ್ಷತೆಯನ್ನು ಪ್ರಶ್ನಿಸಿರುವ ಸಂತ್ರಸ್ತೆ, ಆತನಿಗೆ ಏನೂ ಮಾಡದೆ ಬಿಟ್ಟುಬಿಟ್ಟಿರುವುದು ದುರದೃಷ್ಟಕರ. ಆ ಸಂದರ್ಭದಲ್ಲಿ ಆತ ಮದ್ಯಪಾನ ಮಾಡಿರಲಿಲ್ಲ, ಮತ್ತು ಆತ ಮಗು ಕೂಡ ಅಲ್ಲ. ಆತ ಏನು ಮಾಡುತ್ತಿದ್ದಾನೆ ಎಂದು ಅವನಿಗೆ ಗೊತ್ತಿತ್ತು ಎಂದು ಮಹಿಳೆ ಬರೆದುಕೊಂಡಿದ್ದಾರೆ. ಪೊಲೀಸರು ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com