ಶಿವಮೊಗ್ಗ: ಬಿರು ಬೇಸಿಗೆಯಿಂದ ಕಂಗಾಲು; ಮೃಗಾಲಯದ ಪ್ರಾಣಿಗಳನ್ನು ತಣ್ಣಗಿರಿಸಲು ಅಧಿಕಾರಿಗಳಿಂದ ಹೊಸ ಪ್ರಯೋಗ!

ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಬಿಸಿಲು ಮತ್ತು ನಿರ್ಜಲೀಕರಣದಿಂದ ಪ್ರಾಣಿಗಳನ್ನು ರಕ್ಷಿಸಲು ಶಿವಮೊಗ್ಗದ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹ ಸಫಾರಿ ಅಧಿಕಾರಿಗಳು ಹಲವಾರು ಕ್ರಮಗಳನ್ನು ಪ್ರಾರಂಭಿಸಿದ್ದಾರೆ.
ಶಿವಮೊಗ್ಗದ ತ್ಯಾವರೆಕೊಪ್ಪ ಸಫಾರಿಯಲ್ಲಿ 
ಕೊಳದಲ್ಲಿ ನೀರು ಕುಡಿಯುತ್ತಿರುವ ಸಿಂಹಿಣಿ
ಶಿವಮೊಗ್ಗದ ತ್ಯಾವರೆಕೊಪ್ಪ ಸಫಾರಿಯಲ್ಲಿ ಕೊಳದಲ್ಲಿ ನೀರು ಕುಡಿಯುತ್ತಿರುವ ಸಿಂಹಿಣಿ
Updated on

ಶಿವಮೊಗ್ಗ: ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಬಿಸಿಲು ಮತ್ತು ನಿರ್ಜಲೀಕರಣದಿಂದ ಪ್ರಾಣಿಗಳನ್ನು ರಕ್ಷಿಸಲು ಶಿವಮೊಗ್ಗದ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹ ಸಫಾರಿ ಅಧಿಕಾರಿಗಳು ಹಲವಾರು ಕ್ರಮಗಳನ್ನು ಪ್ರಾರಂಭಿಸಿದ್ದಾರೆ. ಪ್ರಾಣಿಗಳನ್ನು ತಂಪಾಗಿಡಲು ಅಧಿಕಾರಿಗಳು ಕೃತಕ ಕೊಳಗಳ ರಚನೆ ಮತ್ತು ಆವರಣದೊಳಗೆ ಸ್ಪ್ರಿಂಕ್ಲರ್‌ಗಳನ್ನು ಅಳವಡಿಸುವುದು ಮತ್ತು ಪ್ರಾಣಿಗಳಿಗೆ ನೀಡುವ ಆಹಾರದಲ್ಲಿ ಸ್ವಲ್ಪ ಮಾರ್ಪಾಡು ಮಾಡಲು ಅಧಿಕಾರಿಗಳು ಕ್ರಮಗಳನ್ನು ಕೈಗೊಂಡಿದ್ದಾರೆ.

ಸಫಾರಿಯ ಕಾರ್ಯನಿರ್ವಾಹಕ ನಿರ್ದೇಶಕರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆಗೆ ಮಾತನಾಡಿ, 'ಹುಲಿಗಳು ಯಾವಾಗಲೂ ನೀರನ್ನು ಇಷ್ಟಪಡುತ್ತವೆ ಮತ್ತು ಆದ್ದರಿಂದ ಅವುಗಳನ್ನು ತಂಪಾಗಿಡಲು ನೀರಿನ ಕೊಳಗಳನ್ನು ರಚಿಸಲಾಗಿದೆ. ಅವುಗಳಲ್ಲಿ ನೀರು ಇರುವಂತೆ ನೋಡಿಕೊಳ್ಳಲಾಗುತ್ತದೆ. ಅವುಗಳು ಹೆಚ್ಚಿನ ಶಾಖ ಅನುಭವಿಸಿದಾಗ ಆ ಕೊಳದ ಬಳಿ ಹೋಗಿ ಮಲಗುತ್ತವೆ ಎಂದರು.

ಎಲ್ಲ ಪ್ರಾಣಿಗಳಿಗೆ ಪೋರ್ಟಬಲ್ ನೀರನ್ನು ನೀಡಲಾಗಿದ್ದು, ಸಫಾರಿಯಲ್ಲಿ ಯಾವುದೇ ಪ್ರಾಣಿಗಳಿಗೆ ನೀರಿನ ಕೊರತೆ ಇಲ್ಲ. ಮಹಾನಗರ ಪಾಲಿಕೆಯಿಂದ ಕುಡಿಯುವ ನೀರು ಪೂರೈಕೆ ಮಾಡಲಾಗಿದ್ದು, ಇಲ್ಲಿ 2 ಲಕ್ಷ ಲೀಟರ್ ನೀರಿನ ಸಂಪ್ ಜತೆಗೆ 2.5 ಲಕ್ಷ ಲೀಟರ್ ಓವರ್ ಹೆಡ್ ಟ್ಯಾಂಕ್ ಇದೆ. ಈ ಮೂಲಕ 4.5 ಲಕ್ಷ ಲೀಟರ್ ನೀರಿನ ಸಂಗ್ರಹವನ್ನು ಹೊಂದಿದ್ದೇವೆ. ಸಾಂಬಾರ್ ಜಿಂಕೆಗಳು ಒದ್ದೆಯಾದ ಕೆಸರು ಮತ್ತು ನೀರನ್ನು ಇಷ್ಟಪಡುತ್ತವೆ, ಆದ್ದರಿಂದ ಕೊಳಗಳು ಯಾವಾಗಲೂ ನೀರಿನಿಂದ ತುಂಬಿರುತ್ತವೆ ಎಂದು ಅವರು ಮಾಹಿತಿ ನೀಡಿದರು.

ಶಿವಮೊಗ್ಗದ ತ್ಯಾವರೆಕೊಪ್ಪ ಸಫಾರಿಯಲ್ಲಿ 
ಕೊಳದಲ್ಲಿ ನೀರು ಕುಡಿಯುತ್ತಿರುವ ಸಿಂಹಿಣಿ
ಬಿಸಿಲ ಧಗೆಗೆ ಪ್ರಾಣಿಗಳು ಕಂಗಾಲು: ಮೈಸೂರು ಮೃಗಾಲಯದಲ್ಲಿ 'ಏರ್ ಕೂಲರ್'ಗಳ ಅಳವಡಿಕೆ

'ಕಾಡೆಮ್ಮೆ, ನೀರುಕುದುರೆಗಳು ಮತ್ತು ಇತರ ಸಸ್ಯಹಾರಿ ಪ್ರಾಣಿಗಳಿಗೆ ಕಲ್ಲಂಗಡಿಗಳು, ಸೀಬೆಹಣ್ಣುಗಳು, ಹೆಚ್ಚಿನ ನೀರಿನ ಅಂಶವಿರುವ ತಾಜಾ ತರಕಾರಿಗಳನ್ನು ನೀಡಲಾಗುತ್ತಿದೆ. ಹೊಸ ಮೃಗಾಲಯದ ಆವರಣಗಳಲ್ಲಿ ವಾಟರ್ ಸ್ಪ್ರಿಂಕ್ಲರ್‌ಗಳು ಮತ್ತು ಜೆಟ್‌ಗಳು ಮಳೆ ಬಂದೂಕುಗಳಂತೆ ಕಾರ್ಯನಿರ್ವಹಿಸುತ್ತವೆ. ನೀರಿನ ಸ್ಪ್ರಿಂಕ್ಲರ್‌ಗಳು ಮತ್ತು ಜೆಟ್ ನೆಲದ ತಾಪಮಾನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಪ್ರಾಣಿಗಳು ಸಹ ಈ ಪ್ರಕ್ರಿಯೆಯನ್ನು ಆನಂದಿಸುತ್ತವೆ' ಎಂದು ಅವರು ಹೇಳಿದರು.

'ಚಿರತೆಗಳು ಮತ್ತು ಇತರ ಮಾಂಸಾಹಾರಿ ಪ್ರಾಣಿಗಳಿಗೆ, ಐಸ್ ಚಪ್ಪಡಿಗಳನ್ನು ಮಾಡಲು ಮಾಂಸದ ತುಂಡುಗಳನ್ನು ನೀರಿನೊಂದಿಗೆ ಫ್ರೀಜ್ ಮಾಡಲಾಗುತ್ತದೆ. ಪ್ರಾಣಿಗಳು ಮಾಂಸವನ್ನು ತಿನ್ನಲು ಪ್ರಯತ್ನಿಸಿದಾಗ, ಅದು ನೀರನ್ನು ಮಂಜುಗಡ್ಡೆಯ ರೂಪದಲ್ಲಿ ಕುಡಿಯುತ್ತದೆ. ಅದು ಅವುಗಳನ್ನು ಹೈಡ್ರೀಕರಿಸುತ್ತದೆ ಎಂದು ಅಧಿಕಾರಿ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com