ಬೆಂಗಳೂರು: ಸಹೋದರನನ್ನೇ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಿದ ವ್ಯಕ್ತಿ ಸೇರಿ 8 ಜನರ ಬಂಧನ!

ವ್ಯವಹಾರದಲ್ಲಿ ತನ್ನ ಸಹೋದರನ ಯಶಸ್ಸಿನಿಂದ ಕುಪಿತಗೊಂಡ ವ್ಯಕ್ತಿಯೊಬ್ಬ ಇತರ ಸಹೋದರರೊಂದಿಗೆ ಸೇರಿಕೊಂಡು ಡ್ರಗ್ಸ್ ಕಳ್ಳಸಾಗಣೆಯಲ್ಲಿ ತನ್ನ ಸಹೋದರ ಭಾಗಿಯಾಗಿದ್ದಾನೆ ಎಂದು ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವ್ಯವಹಾರದಲ್ಲಿ ತನ್ನ ಸಹೋದರನ ಯಶಸ್ಸಿನಿಂದ ಕುಪಿತಗೊಂಡ ವ್ಯಕ್ತಿಯೊಬ್ಬ ಇತರ ಸಹೋದರರೊಂದಿಗೆ ಸೇರಿಕೊಂಡು ಡ್ರಗ್ಸ್ ಕಳ್ಳಸಾಗಣೆಯಲ್ಲಿ ತನ್ನ ಸಹೋದರ ಭಾಗಿಯಾಗಿದ್ದಾನೆ ಎಂದು ಪೊಲೀಸ್ ಮಾಹಿತಿದಾರರ ಮೂಲಕ ಸಿಸಿಬಿ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಫೆಬ್ರವರಿ 2 ರಂದು, ಸುಳ್ಳು ಮಾಹಿತಿಯ ಆಧಾರದ ಮೇಲೆ ಸಿಸಿಬಿ ಪೊಲೀಸರು ಸಂತ್ರಸ್ತ ಚೋಗರಾಮ್ ಅವರ ಕಾರನ್ನು ಪರಿಶೀಲಿಸಿದಾಗ400 ಗ್ರಾಂ ಗಾಂಜಾ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣವನ್ನು ಆರ್‌ಆರ್ ನಗರ ಪೊಲೀಸರಿಗೆ ವರ್ಗಾಯಿಸಿದ ನಂತರ, ಎನ್‌ಡಿಪಿಎಸ್ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ, ಚೋಗರಾಮ್‌ನನ್ನು ಬಂಧಿಸಲಾಯಿತು. ವಿಚಾರಣೆಯ ಸಮಯದಲ್ಲಿ ಏನೂ ಖಚಿತವಾಗದಿದ್ದಾಗ, ಪೊಲೀಸರು ಮತ್ತೆ ತನಿಖೆಯನ್ನು ಪ್ರಾರಂಭಿಸಿದರು ಮತ್ತು ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಅರುಣ್ ಮತ್ತು ರವಿ ಎಂಬುವವರು ಚೋಗರಾಮ್ ಕಾರಿನೊಳಗೆ ಡ್ರಗ್ಸ್ ಇಟ್ಟಿರುವುದು ಕಂಡುಬಂದಿದೆ.

ವಿಚಾರಣೆಯ ವೇಳೆ ಚೋಗರಾಮ್ ಅವರ ಸಹೋದರ ಪುನರಾಮ್ ಅವರ ಸೂಚನೆಯಂತೆ ತಾನು ಕಾರಿನಲ್ಲಿ ಡ್ರಗ್ಸ್ ಇಟ್ಟಿರುವುದಾಗಿ ಅರುಣ್ ಹೇಳಿದ್ದಾನೆ. ಪೊಲೀಸರು ಪುನರಾಮ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೆಆರ್ ಪುರಂ ಮೂಲದ ಪೊಲೀಸ್ ಮಾಹಿತಿದಾರರ ಮೂಲಕ ಸಿಸಿಬಿ ಪೊಲೀಸರಿಗೆ ಡ್ರಗ್ಸ್ ಮಾಹಿತಿ ನೀಡುವಂತೆ ಸೂಚಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಸಾಂದರ್ಭಿಕ ಚಿತ್ರ
ಡ್ರಗ್ಸ್ ದಂಧೆ: ನೇತ್ರ ತಜ್ಞ ಸೇರಿ ನಾಲ್ವರ ಬಂಧನ; 2.35 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ

ತನಿಖೆಯ ಸಮಯದಲ್ಲಿ, ಡ್ರಗ್ಸ್ ಅನ್ನು ಚೋಗರಾಮ್ ಅವರ ಹಿರಿಯ ಸಹೋದರ ಡೊಂಗರಾಮ್ ಹೊರತುಪಡಿಸಿ ಬೇರೆ ಯಾರೂ ವ್ಯವಸ್ಥೆ ಮಾಡಿಲ್ಲ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಸಂಚು ರೂಪಿಸಿ ಪುನರಾಮ್ ಗೆ ರಾಜಸ್ಥಾನಕ್ಕೆ ಪಲಾಯನ ಮಾಡಲು ಟಿಕೆಟ್ ವ್ಯವಸ್ಥೆಯನ್ನೂ ಮಾಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು TNIE ಗೆ ತಿಳಿಸಿದ್ದಾರೆ.

ಸರ್ಕಾರದ ನಿಷೇಧದ ಹೊರತಾಗಿಯೂ ಡೊಂಗರಾಮ್ ಪ್ಲಾಸ್ಟಿಕ್ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಚೋಗರಾಮ್ ಈ ಹಿಂದೆ ಮಾಧ್ಯಮಗಳಿಗೆ ಮತ್ತು ಪೊಲೀಸರಿಗೆ ಮಾಹಿತಿ ಸೋರಿಕೆ ಮಾಡಿದ್ದರು ಎಂದು ರಾಜಸ್ಥಾನದಿಂದ ಬಂಧಿಸಲ್ಪಟ್ಟ ಡೊಂಗರಾಮ್ ನಮಗೆ ತಿಳಿಸಿದ್ದಾರೆ. ಇದರಿಂದಾಗಿ ಡೊಂಗರಾಮ್, ಅವರ ಕಿರಿಯ ಸಹೋದರ ಜಗದೀಶ್ ಮತ್ತು ಸ್ನೇಹಿತ ಮಂಜುನಾಥ್ ಬಾಬು, ಪುನರಾಮ್ ಜೊತೆಗೂಡಿ ಸಂಚು ರೂಪಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಡೊಂಗರಾಮ್ ರಾಜಸ್ಥಾನದಿಂದ ಬಸ್‌ ನಲ್ಲಿ ಆ 400 ಗ್ರಾಂ ಗಾಂಜಾವನ್ನು ಸಾಗಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸೋಹೈಲ್, ಆಸಿಫ್, ಅರುಣ್, ರವಿ ಮತ್ತು ಮಂಜುನಾಥ್ ಬಾಬು ಸೇರಿದಂತೆ ರಾಜಸ್ಥಾನ ನಿವಾಸಿಗಳಾದ ಡೊಂಗರಾಮ್, ಪುನರಾಮ್ ಮತ್ತು ಜಗದೀಶ್ ಸೇರಿದಂತೆ ಎಂಟು ಜನರನ್ನು ಆರ್‌ಆರ್ ನಗರ ಪೊಲೀಸರು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com