ಡ್ರಗ್ಸ್ ದಂಧೆ: ನೇತ್ರ ತಜ್ಞ ಸೇರಿ ನಾಲ್ವರ ಬಂಧನ; 2.35 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಮತ್ತೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ಸಿಸಿಬಿ, ನೇತ್ರ ತಜ್ಞ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿ ರೂ.2.35 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಮತ್ತೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ಸಿಸಿಬಿ, ನೇತ್ರ ತಜ್ಞ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿ ರೂ.2.35 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದೆ.

ನೈಜೀರಿಯಾ ದೇಶದ ಕಾಲು ಚುಕ್ವಾ, ಚೈನಾಸಸೈಪ್ರಿಲಾನ್ ಒಕೊಯಿ, ಗಾನದ ಇಮ್ಮಾನುಲ್ ಕ್ವಾಸಿ ಹಾಗೂ ಆರ್'ಎಂಸಿಯಾರ್ಡ್ ಸಮೀಪದ ನಿವಾಸಿ ಡಾ.ನಿಖಿಲ್ ಬಂಧಿತ ಆರೋಪಿಗಳು.

ಆರೋಪಿಗಳಿಂದ 730 ಗ್ರಾಂ ಎಡಿಎಂಎ ಕ್ರಿಸ್ಟೆಲ್, 1273 ಎಕ್ಸೈಟೆಸಿ ಮಾತ್ರೆಗಳು, 42 ಗ್ರಾಂ ಹೈಡ್ರೋ ಗಾಂಜಾ ಹಾಗೂ ನಾಲ್ಕು ಮೊಬೈಲ್ ಗಳು ಸೇರಿದಂತೆ 2.35 ಕೋಟಿ ರೂ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಸಂಗ್ರಹ ಚಿತ್ರ
ವಿದೇಶಿ ಪ್ರಜೆ ಅಪಹರಿಸಿ ಸುಲಿಗೆ: ಪ್ರಕರಣ ಬೇಧಿಸಲು ಹೋದ ಪೊಲೀಸರ ಕೈಗೆ ಸಿಕ್ಕಿಬಿದ್ದ ಡ್ರಗ್ಸ್ ಪೆಡ್ಲರ್!

ಖಚಿತ ಮಾಹಿತಿ ಮೇರೆಗೆ ಸೋಲದೇವನಹಳ್ಳಿ ಹಾಗೂ ಆರ್'ಎಂಸಿ ಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಕೆಲ ತಿಂಗಳ ಹಿಂದೆ ಪ್ರವಾಸ ವೀಸಾದಡಿ ಭಾರತಕ್ಕೆ ಬಂದಿರುವ ನೈಜೀರಿಯಾದ ಚುಕ್ವಾ ಹಾಗೂ ಒಕೊಯಿ ಹಣದಾಸೆಗೆ ಡ್ರಗ್ ದಂಧೆಗಿಳಿದಿದ್ದು. ಅಂತರಾಷ್ಟ್ರೀಯ ಡ್ರಗ್ಸ ಮಾರಾಟ ಸಂಪರ್ಕ ಜಾಲದ ಮೂಲಕ ಡ್ರಗ್ಸ್ ಖರೀದಿಸಿ ಭಾರತದಲ್ಲಿ ಆರೋಪಿಗಳು ಮಾರಾಟ ಮಾಡುತ್ತಿದ್ದರು. ಈ ಪೆಡ್ಲರ್ ಗಳ ಪೈಕಿ ಒಕೊಯಿಯನ್ನು ಮುಂಬೈ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ನಂತರ ಬೆಂಗಳೂರಿಗೆ ಬಂದು ಸೋಲದೇವನಹಳ್ಳಿ ಬಳಿ ನೆಲೆಸಿದ್ದ ಈತ, ತನ್ನ ದೇಶದ ಚುಕ್ವಾ ಜೊತೆ ಸೇರಿಕೊಂಡು ಡ್ರಗ್ಸ್ ದಂಧೆಯನ್ನು ಮುಂದುವರೆಸಿದ್ದ. ಈ ಇಬ್ಬರ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ, ಬಂಧಿಸಿದ್ದಾರೆ.

ಆರೋಪಿಗಳಿಂದ 51 ಲ್ಷ ಮೌಲ್ಯದ 500 ಗ್ರಾಂ ಎಡಿಎಂಎ ಕ್ರಿಸ್ಟೆಲ್ ಹಾಗೂ 2 ಮೊಬೈಲ್ ಗಳನ್ನು ಜಪ್ತಿ ಮಾಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಸೋಲದೇವನಹಳ್ಳಿ ಬಳಿ ಮತ್ತೊಬ್ಬ ಘಾನ ದೇಶದ ಪೆಡ್ಲರ್ ಇಮ್ಯಾನ್ಯುಲ್ ಸಿಸಿಬಿ ಬಲೆಗೆ ಬಿದ್ದಿದ್ದಾನೆ. 2 ವರ್ಷಗಳ ಹಿಂದೆ ವ್ಯಾಪಾರಿ ವೀಸಾ ಪಡೆದು ಭಾರತಕ್ಕೆ ಬಂದಿದ್ದ ಈತ, ಸುಲಭವಾಗಿ ಹಣ ಗಳಿಸಲು ಡ್ರಗ್ಸ್ ದಂಧೆಗೆ ಇಳಿದಿದ್ದ. ಸ್ಥಳೀಯ ಹಾಗೂ ವಿದೇಶಿ ಪೆಡ್ಲರ್ ಗಳಿಂದ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿ ಮಾಡಿ, ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ. ಈತನ ಬಗ್ಗೆ ಮಾಹಿತಿ ಪಡೆದ ಸಿಸಿಬಿ, ದಾಳಿ ನಡೆಸಿ ಬಂಧನಕ್ಕೊಳಪಡಿಸಿದೆ. ಈತನಿಂದ 2356 ಎಂಡಿಎಂಎ ಕ್ರಿಸ್ಟೆಲ್, 1273 ಎಕ್ಸೈಟೆಸಿ ಮಾತ್ರೆಗಳು ಸೇರಿದಂತೆ 1.81 ಕೋಟಿ ಮೌಲ್ಯದ ಡ್ರಗ್ಸ್ ನ್ನು ಜಪ್ತಿ ಮಾಡಿದೆ.

ಸಂಗ್ರಹ ಚಿತ್ರ
ಗೋಕರ್ಣ: ಡ್ರಗ್ಸ್ ನಶೆಯಲ್ಲಿ ಪೊಲೀಸರ ಮೇಲೆ ಹಲ್ಲೆ; ಬೆಂಗಳೂರಿನ ಇಬ್ಬರು ಮಹಿಳಾ ಟೆಕ್ಕಿಗಳ ಬಂಧನ

ಹುಕ್ಕಾ ಬಾರ್‌ಗಳ ಮೇಲೆ ಸಿಸಿಬಿ ದಾಳಿ, 7 ಮಂಜಿ ಬಂಧನ

ಅಕ್ರಮವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದ ಏಳು ಮಂದಿಯನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಮಹಾಲಕ್ಷ್ಮಿ ಲೇಔಟ್, ಎಚ್ಎಎಲ್ ಮತ್ತು ಕೆಆರ್ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆಸಲಾಗಿದೆ.

ಹುಕ್ಕಾ ಫ್ಲೇವರ್‌ಗಳು, ಹುಕ್ಕಾ ಪಾಟ್ಸ್ ಮತ್ತು ಪೈಪ್‌ಗಳು, ಲೋಟಗಳು ಸೇರಿದಂತೆ 12.5 ಲಕ್ಷ ಮೌಲ್ಯದ ಹುಕ್ಕಾ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸಂಗ್ರಹ ಚಿತ್ರ
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಆರೋಪಿ ಹೊಟ್ಟೆಯಲ್ಲಿ 9 ಕೋಟಿ ಮೌಲ್ಯದ ಕೊಕೇನ್‌, 920 ಗ್ರಾಂ ಡ್ರಗ್ಸ್ ವಶ!

ಹುಕ್ಕಾ ಬಾರ್ ಮಾಲೀಕರ ಸಂಘದ ಅರ್ಜಿ ವಿಚಾರಣೆ ಮುಂದೂಡಿಕೆ

ಹುಕ್ಕಾ ಬಾರ್ ಮಾಲೀಕರ ಸಂಘವು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಮಾರ್ಚ್ 5 ಕ್ಕೆ ಮುಂದೂಡಿದೆ.

ಹುಕ್ಕಾ ಬಾರ್ ಸಂಪೂರ್ಣ ನಿಷೇಧ ಅಂಶವನ್ನೊಳಗೊಂಡ ಸಿಗರೇಟುಗಳ ಮತ್ತು ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಮಯ) ವಿಧೇಯಕ-2024 ವನ್ನು ಫೆಬ್ರವರಿ 7, 2024 ರಂದು ವಿಧಾನ ಪರಿಷತ್ ಅಂಗೀಕರಿಸಿತ್ತು, ಇದನ್ನು ಪ್ರಶ್ನಿಸಿ ಹುಕ್ಕಾ ಬಾರ್ ಮಾಲೀಕರ ಸಂಘ ನ್ಯಾಯಾಲಯದ ಮೊರೆ ಹೋಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com