ಯೆಮನ್‌ ಯುವಕನ ದೇಹದಲ್ಲಿ 2 ವರ್ಷದಿಂದ ಸಿಲುಕಿಕೊಂಡಿದ್ದ ಗುಂಡು ಹೊರ ತೆಗೆದ ಬೆಂಗಳೂರು ವೈದ್ಯರು!

ಐಟಿ ಸಿಟಿ ಬೆಂಗಳೂರು ಹೆಲ್ತ್ ಹಬ್ ಆಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ನಮ್ಮ ರಾಜಧಾನಿ ವೈದ್ಯರು ಹೆಸರು ಮಾಡಿದ್ದಾರೆ. ಅದೆಷ್ಟೊ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿ ಸೈ ಎನ್ನಿಸಿಕೊಂಡಿದ್ದಾರೆ. ಈ ಸಾಲಿಗೆ ಮತ್ತೊಂದು ವಿಶಿಷ್ಟ ಸರ್ಜರಿಯೊಂದು ಸೇರ್ಪಡೆಯಾಗಿದೆ‌...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಐಟಿ ಸಿಟಿ ಬೆಂಗಳೂರು ಹೆಲ್ತ್ ಹಬ್ ಆಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ನಮ್ಮ ರಾಜಧಾನಿ ವೈದ್ಯರು ಹೆಸರು ಮಾಡಿದ್ದಾರೆ. ಅದೆಷ್ಟೊ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿ ಸೈ ಎನ್ನಿಸಿಕೊಂಡಿದ್ದಾರೆ. ಈ ಸಾಲಿಗೆ ಮತ್ತೊಂದು ವಿಶಿಷ್ಟ ಸರ್ಜರಿಯೊಂದು ಸೇರ್ಪಡೆಯಾಗಿದೆ‌. ಯೆಮೆನ್ ನಲ್ಲಿ 21 ವರ್ಷದ ಯುವಕನ ದೇಹದೊಳಗೆ ಸಿಲುಕ್ಕಿದ್ದ ಬುಲೆಟ್ (Bullet) ತೆಗೆದು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಹೊರ ತೆಗೆದ ಬುಲೆಟ್ 4x2x2 ಸೆಂಟಿ ಮೀಟರ್ ಉದ್ದ ಇತ್ತು.

ಯೆಮೆನ್ ನಲ್ಲಿ ಆಗಾಗ್ಗೆ ಯುದ್ಧ ನಡೆಯುತ್ತಿರುತ್ತದೆ. ಯುದ್ಧ, ಘರ್ಷಣೆ ಮಾಮೂಲಿ ಎಂಬಂತಿರುವ ಈ ಜಾಗದಲ್ಲಿ ವಾಸವಿದ್ದ ಯುವಕನೊಬ್ಬನ ಎದೆಯ ಗೋಡೆಗೆ ಬುಲೆಟ್ ಹೊಕ್ಕಿದೆ. ಸುಮಾರು 2 ವರ್ಷಗಳ ಕಾಲ ಬುಲೆಟ್ ನಿಂದ ಸಾಕಷ್ಟು ಯಾತನೆ ಅನುಭವಿಸಿದ್ದ ಈ ವಿದೇಶಿ ಯುವಕ ನಮ್ಮ ಬೆಂಗಳೂರು ವೈದ್ಯರ ಮೇಲೆ ವಿಶ್ವಾಸವಿಟ್ಟು ಬದುಕಿನಲ್ಲಿ ಗೆದ್ದಿದ್ದಾನೆ. 2 ವರ್ಷಗಳ ಹಿಂದಿನ ಬುಲೆಟ್ ಅನ್ನು ಸಿಟಿ ವೈದ್ಯರ ತಂಡ ಹೊರತೆಗೆದಿದೆ.

ವಾಸಿಂ (ಹೆಸರು ಬದಲಿಸಲಾಗಿದೆ) ಅವರ ದೇಹಕ್ಕೆ ಹಲವು ಗುಂಡುಗಳ ಹೊಕ್ಕಿದ್ದವು. ತೋಳು ಹಾಗೂ ಭುಜಕ್ಕೆ ಹೊಕ್ಕಿದ್ದ ಗುಂಡುಗಳನ್ನು ತೆಗೆಯಲಾಗಿದೆ. ಆದರೆ, ಬಲ ಶ್ವಾಸಕೋಶದಲ್ಲಿ ಸಿಲುಕಿದ್ದು ಗುಂಡನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಇದರ ಪರಿಣಾಮ ವಾಸಿಂ ಅವರು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು.

ಸಂಗ್ರಹ ಚಿತ್ರ
ನಟ ಸೈಫ್ ಅಲಿ ಖಾನ್ ಆಸ್ಪತ್ರೆಗೆ ದಾಖಲು; ಶಸ್ತ್ರಚಿಕಿತ್ಸೆ!

ಈ ನಡುವೆ ಬೆಂಗಳೂರಿನಲ್ಲಿ ಲಭ್ಯವಿರುವ ಶಸ್ತ್ರಚಿಕಿತ್ಸೆ ಬಗ್ಗೆ ಓದಿದ್ದ ವಾಸಿಂ ಅವರು ಬೆಂಗಳೂರಿಗೆ ಬಂದಿದ್ದರು. ಪರೀಕ್ಷೆ ನಡೆಸಿದ ವೈದ್ಯರಿಗೆ CT ಸ್ಕ್ಯಾನ್ ನಲ್ಲಿ ಎದೆ ಗೋಡೆಯಲ್ಲಿ ಲೋಹದ ರೀತಿಯ ವಸ್ತುವನ್ನು ಪತ್ತೆ ಮಾಡಿದ್ದಾರೆ.

ಆಸ್ಟರ್ ಆರ್‌ವಿ ಆಸ್ಪತ್ರೆಯ ಕಾರ್ಡಿಯೊಥೊರಾಸಿಕ್ ನಾಳೀಯ ಶಸ್ತ್ರಚಿಕಿತ್ಸಕ ಡಾ ದಿವಾಕರ್ ಭಟ್ ಅವರು ಯುವಕನಿಗೆ ಎರಡು ಗಂಟೆಗಳ ಕಾಲ ಸುದೀರ್ಘ ಶಸ್ತ್ರಚಿಕಿತ್ಸೆ ನಡೆಸಿ, ಗುಂಡನ್ನು ಹೊರೆತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com