ಅಕ್ರಮ ಕಟ್ಟಡ ನಿರ್ಮಾಣ ತಪ್ಪಿಸಲು ಬಿಬಿಎಂಪಿ - ಹೈಕೋರ್ಟ್ ಮೆಟ್ಟಿಲೇರಿದ ಟೆಕ್ಕಿ: ವ್ಯಾಪಕ ಶ್ಲಾಘನೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಕ್ರಮ ಕಟ್ಟಡ ನಿರ್ಮಾಣಗಳು ವ್ಯಾಪಕವಾಗಿ ನಡೆಯುತ್ತಿವೆ. ಇದೇ ವೇಳೆ ಸ್ಟಾರ್ಟಪ್ ಕಂಪನಿ ಸಂಸ್ಥಾಪಕರೊಬ್ಬರು ಅಕ್ರಮ ಕಟ್ಟಡ ನಿರ್ಮಾಣದ ಬಗ್ಗೆ ಗಮನ ಹರಿಸುವಂತೆ ಬಿಬಿಎಂಪಿಗೆ ದೂರು ನೀಡುವುದರ ಜೊತೆಗೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಕ್ರಮ ಕಟ್ಟಡ ನಿರ್ಮಾಣಗಳು ವ್ಯಾಪಕವಾಗಿ ನಡೆಯುತ್ತಿವೆ. ಇದೇ ವೇಳೆ ಸ್ಟಾರ್ಟಪ್ ಕಂಪನಿ ಸಂಸ್ಥಾಪಕರೊಬ್ಬರು ಅಕ್ರಮ ಕಟ್ಟಡ ನಿರ್ಮಾಣದ ಬಗ್ಗೆ ಗಮನ ಹರಿಸುವಂತೆ ಬಿಬಿಎಂಪಿಗೆ ದೂರು ನೀಡುವುದರ ಜೊತೆಗೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಬಿಇಎಂಎಲ್ ಲೇಔಟ್‌ನ ನಿವಾಸಿ ಮತ್ತು ಸಾಫ್ಟ್‌ವೇರ್ ವೃತ್ತಿಪರ ರವಿಕುಮಾರ್ ಜಿಎಸ್ ಅವರು ಪ್ರಸ್ತುತ ಭಾರೀ ಉಪಕರಣಗಳ ತಯಾರಿಕೆಯಲ್ಲಿ ವ್ಯವಹರಿಸುವ ತನ್ನ ಸ್ಟಾರ್ಟಪ್ ಅನ್ನು ಸ್ಥಾಪಿಸುವಲ್ಲಿ ನಿರತರಾಗಿದ್ದಾರೆ. ರವಿಕುಮಾರ್ ಅವರು ನೀಡಿದ ದೂರಿನ ಆಧಾರದ ಮೇಲೆ ಬಿಬಿಎಂಪಿ ಜಂಟಿ ಆಯುಕ್ತರು, ನಗರ ಯೋಜನಾ ಸಹಾಯಕ ನಿರ್ದೇಶಕರು (ಎಡಿಟಿಪಿ) ಮತ್ತು ಪೊಲೀಸರು ಆರು ಅಂತಸ್ತಿನ ಅಕ್ರಮ ಕಟ್ಟಡದ ನಿರ್ಮಾಣವನ್ನು ತಡೆಹಿಡಿದು ಹೈಕೋರ್ಟ್ ಆದೇಶದಂತೆ ಏಸೀಲ್ ಮಾಡಿದ್ದಾರೆ.

ಕಲ್ಲೂರಿ ಸುಬ್ಬಾ ರೆಡ್ಡಿ ಮತ್ತು ಅವರ ಸಹೋದರ ಜನಾರ್ದನ ರೆಡ್ಡಿ, BEML 6 ನೇ ಹಂತದಲ್ಲಿರುವ ಆಸ್ತಿ ಸಂಖ್ಯೆ-27, 1 ನೇ ಮೇನ್, 4 ನೇ ಕ್ರಾಸ್ ನಲ್ಲಿ ನೆಲ ಮಹಡಿ-ಪ್ಲಸ್-ಮೂರು ಮಹಡಿಗಳಲ್ಲಿ ಮನೆ ನಿರ್ಮಾಣಕ್ಕೆ ಅನುಮತಿ ಪಡೆದಿದ್ದರು. ಆದರೆ ಮಾಲೀಕರು ಆರು ಮಹಡಿಗಳನ್ನು ನಿರ್ಮಿಸುವ ಮೂಲಕ ಪೇಯಿಂಗ್ ಗೆಸ್ಟ್ ವಸತಿ ಗೃಹವಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಆಸ್ತಿ ಮಾಲೀಕರಿಗೆ ರವಿಕುಮಾರ್ ಪ್ರಶ್ನಿಸಿದ್ದಾರೆ, ಹೊರ ರಾಜ್ಯದವರಾದ ಕಲ್ಲೂರಿ ಸುಬ್ಬಾ ರೆಡ್ಡಿ ಮತ್ತು ಅವರ ಸಹೋದರ ಜನಾರ್ದನ ರೆಡ್ಡಿ, ರವಿಕುಮಾರ್ ಅವರನ್ನು ನಿರ್ಲ್ಯಕ್ಷಿಸಿದ್ದು, ಸುಮ್ಮನೆ ನಿನ್ನ ಕೆಲಸ ನೀನು ನೋಡಿಕೊಂಡಿರುವಂತೆ ದಮಕಿ ಹಾಕಿದ್ದಾರೆ.

ಹೈಕೋರ್ಟ್
ತನಗೇ ತನಿಖೆಗೆ ವಹಿಸುವಂತೆ ಒತ್ತಾಯಿಸಲು ಲೋಕಾಯುಕ್ತಕ್ಕೆ ಯಾವುದೇ ಅಧಿಕಾರವಿಲ್ಲ: ಕರ್ನಾಟಕ ಹೈಕೋರ್ಟ್

ಇದಾದ ನಂತರ ರವಿಕುಮಾರ್ ಬಿಬಿಎಂಪಿ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಎಡಿಟಿಪಿ ರಾಚಪ್ಪ ಮಾದರ್ ಅವರು ವಿವರಗಳನ್ನು ಒದಗಿಸಿ ನಿರ್ಮಾಣವನ್ನು ನಿಲ್ಲಿಸುವಂತೆ ಮಾಲೀಕರಿಗೆ ಶೋಕಾಸ್ ನೋಟಿಸ್ ನೀಡಿದರು. ಸೂಚನೆ ನೀಡಿದ್ದರೂ ನಿರ್ಮಾಣ ಕಾರ್ಯ ಮುಂದುವರಿದಿತ್ತು. ಎಂಟು ತಿಂಗಳಿಂದ ಈ ಸಮಸ್ಯೆ ನಡೆಯುತ್ತಿತ್ತು. ಆರಂಭದಲ್ಲಿ ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶ್ರೀನಿವಾಸ್ ಸ್ಥಳಕ್ಕೆ ಬಂದು, ನಿಯಮ ಉಲ್ಲಂಘಿಸಿದ ಕಟ್ಟಡದ ಅಳತೆ ಮಾಡುವ ಬದಲು ನಮ್ಮ ಆಸ್ತಿಯನ್ನು ತಪ್ಪಾಗಿ ತೋರಿಸಲು ಯತ್ನಿಸುತ್ತಿದ್ದಾರೆ.

ಹೀಗಾಗಿ ನಾವು ಮತ್ತೆ ಎಡಿಟಿಪಿ ಅವರನ್ನು ಸಂಪರ್ಕಿಸಿದೆವು. ಅವರ ನಿರ್ದೇಶನದ ಆಧಾರದ ಮೇಲೆ ನಿಜವಾದ ಅಳತೆಯನ್ನು ತೆಗೆದುಕೊಳ್ಳಲಾಗಿದೆ ಮತ್ತು ಪಿಜಿ ಕಟ್ಟಡವು ಮಂಜೂರಾದ ಯೋಜನೆಯಿಂದ ಶೇ. 400 ರಷ್ಟು ವ್ಯತ್ಯಾಸ ಹೊಂದಿರುವುದು ಕಂಡುಬಂದಿದೆ ಎಂದು ರವಿಕುಮಾರ್ ಹೇಳಿದರು.

ಅಕ್ರಮ ನಿರ್ಮಾಣ ಕೆಡವಲು ಎಡಿಟಿಪಿ ಆದೇಶ ನೀಡಿತ್ತು, ಆದರೆ ಮಾಲೀಕರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದರು. ಇದಾದ ನಂತರ ನಾವು ಹೈಕೋರ್ಟ್ ಮೆಟ್ಟಿಲೇರಿದೆವು. ವಿಚಾರಣೆ ನಡೆಸಿದ ನ್ಯಾಯಾಲಯ ನೋಟಿಸ್ ನೀಡ್ತು. ಆದರೆ ಮಾಲೀಕರು ನೊಟೀಸ್ ತೆಗೆದುಕೊಳ್ಳಲು ನಿರಾಕರಿಸಿದರು. ನಂತರ ಮಂಗಳವಾರದಂದು ಕಟ್ಟಡ ನಿರ್ಮಾಣ ನಿಲ್ಲಿಸಿ ಸೀಲ್ ಮಾಡುವಂತೆ ಹೈಕೋರ್ಟ್ ಬಿಬಿಎಂಪಿಗೆ ಸೂಚಿಸಿದೆ ಎಂದು ರವಿಕುಮಾರ್ ಹೇಳಿದರು.

ಹೈಕೋರ್ಟ್
BBMP ಸಹಾಯಕ ಸಿವಿಲ್‌ ಎಂಜಿನಿಯರ್‌ ಹುದ್ದೆಗಳ ನೇಮಕಾತಿ ವಿಳಂಬ: KPSC ಗೆ 'ಹೈ' ನೋಟಿಸ್‌

ರವಿಕುಮಾರ್ ಅವರ ಪ್ರಯತ್ನವನ್ನು ಮಹದೇವಪುರ ವಲಯದ ಜಂಟಿ ಆಯುಕ್ತೆ ಕೆ.ದಾಕ್ಷಾಯಿಣಿ ಶ್ಲಾಘಿಸಿದ್ದಾರೆ. ಪ್ರತಿ ಮಹಡಿಯಲ್ಲಿ ಎಂಟು ಕೊಠಡಿಗಳಿದ್ದು, ಪಾರ್ಕಿಂಗ್ ಪ್ರದೇಶವನ್ನು ಸಹ ಮೂರು ಕೊಠಡಿಗಳಾಗಿ ಪರಿವರ್ತಿಸಲಾಗಿದೆ. ಬಿಲ್ಡರ್‌ಗಳು ಅಕ್ರಮ ಪಿಜಿಗಳನ್ನು ನಡೆಸುತ್ತಿದ್ದು ಇದು ನಾಗರಿಕ ಮೂಲಸೌಕರ್ಯಗಳ ಕುಸಿತಕ್ಕೆ ಕಾರಣವಾಗುತ್ತಿದೆ. ಈ ಕಟ್ಟಡದಲ್ಲಿ 48 ಕೊಠಡಿಗಳಿವೆ. ನೀರಿನ ಕೊರತೆ ಮತ್ತು ಒಳಚರಂಡಿ ಸಮಸ್ಯೆ ಉಂಟಾದಾಗ, ಜನರು ನಾಗರಿಕ ಸಂಸ್ಥೆಗಳನ್ನು ದೂಷಿಸುತ್ತಾರೆ ಎಂದು ಎಂದು ಅವರು ಹೇಳಿದರು, ಅಂತಹ ಹೆಚ್ಚಿನ ಅಕ್ರಮ ಕಟ್ಟಡಗಳನ್ನು ಸೀಲ್ ಮಾಡಲಾಗುತ್ತದೆ ಎಂದು ದಾಕ್ಷಾಯಿಣಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com