

ಬೆಂಗಳೂರು: ಆಸ್ತಿಯಲ್ಲಿ ಪಾಲು ಕೇಳಿದ ಎಂಬ ಒಂದೇ ಕಾರಣಕ್ಕೆ ತಂದೆಯೋರ್ವ ತನ್ನ ಸ್ವಂತ ಮಗನ ಮೇಲೆ ಆ್ಯಸಿಡ್ ಎರಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಿವೃತ್ತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಸೋಮವಾರ ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ತನ್ನ ಪುತ್ರನೊಬ್ಬನ ಮೇಲೆ ಆಸಿಡ್ ತರಹದ ರಾಸಾಯನಿಕ ಎರಚಿದ್ದಾರೆ ಎಂದು ಆರೋಪಿಸಲಾಗಿದೆ. ಬೆಂಗಳೂರಿನ ಟಿ.ದಾಸರಹಳ್ಳಿಯಲ್ಲಿ ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ಮಗನ ಮೇಲೆ ತಂದೆ ಕೆಮಿಕಲ್ ಮಿಶ್ರಿತ ಆ್ಯಸಿಡ್ ದಾಳಿ ಮಾಡಿರುವಂತಹ ಘಟನೆ 25 ರಂದು ಘಟನೆ ನಡೆದದ್ದು ತಡವಾಗಿ ಬೆಳಕಿಗೆ ಬಂದಿದೆ.
ಮೂಲಗಳ ಪ್ರಕಾರ ಟಿ.ದಾಸರಹಳ್ಳಿಯಲ್ಲಿರುವ ನಿವೃತ್ತ ಪೊಲೀಸ್ ಅಧಿಕಾರಿ ಒಡೆತನದ ಆಸ್ತಿಯಲ್ಲಿ ಪುತ್ರ ಪಾಲು ಕೇಳಿದ್ದಾನೆ ಎಂದು ಅವರು ಆ್ಯಸಿಡ್ ಎರಚಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿ ಜತೆಗೆ ಹಿರಿಯ ಮಗ ಮತ್ತು ಮಗಳು ಕೂಡ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ ಎನ್ನಲಾಗಿದೆ.
ತಂದೆ ರಾಮಕೃಷ್ಣಯ್ಯ ಮತ್ತು ಮಗ ಕಿರಣ್ ನಡುವೆ ಆಸ್ತಿ ವಿಚಾರವಾಗಿ ಜಗಳ ನಡೆದಾಗ ಮನೆಯಲ್ಲಿಯೇ ಹಲ್ಲೆ ನಡೆದಿದ್ದು, ಮಗ ಕಿರಣ್ ಆಸ್ತಿಯಲ್ಲಿ ಪಾಲು ಕೇಳಿದ್ದಾರೆ ಎನ್ನಲಾಗಿದೆ. ಈ ವೇಳೆ ತೀವ್ರ ವಾಗ್ವಾದದ ನಡೆದಿದ್ದು, ಇದರಿಂದ ಆಕ್ರೋಶಗೊಂಡ ನಿವೃತ್ತ ಪಿಎಸ್‌ಐ ರಾಮಕೃಷ್ಣಯ್ಯ, ಹಿರಿಯ ಮಗ ಮತ್ತು ಮಗಳು ಕಿರಣ್‌ಗೆ ಆಸಿಡ್ ಎರಚಿದ್ದಾರೆ ಎಂದು ಆರೋಪಿಸಿದಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ದಾಸರಹಳ್ಳಿ ಪೊಲೀಸರು ತನಿಖೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಬಾಗಲಗುಂಟೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Advertisement