ಅಬಕಾರಿ ಇಲಾಖೆ ಹದ್ದಿನ ಕಣ್ಣು, ಆದರೂ ಮದ್ಯದ ಭರಾಟೆ ಹೆಚ್ಚಳ: ಗರಿಷ್ಠ ಮಾರಾಟದ ಮೇಲೆ ಮಿತಿ ಹೇರಲು ಸರ್ಕಾರ ಮುಂದು!

ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆಯಾಗಿದೆ. ಈ ನಡುವಲ್ಲೇ ಅಬಕಾರಿ ಇಲಾಖೆ ಮತ್ತು ಮೈಸೂರು ಸೇಲ್ಸ್ ಇಂಟರ್‌ನ್ಯಾಶನಲ್ ಲಿಮಿಟೆಡ್ (ಎಂಎಸ್‌ಐಎಲ್)ನ ದೈನಂದಿನ ಮದ್ಯ ಮಾರಾಟ ಮತ್ತು ದಾಸ್ತಾನುಗಳ ಮೇಲೆ ಚುನಾವಣಾ ಆಯೋಗ ಕಣ್ಣಿಟ್ಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆಯಾಗಿದೆ. ಈ ನಡುವಲ್ಲೇ ಅಬಕಾರಿ ಇಲಾಖೆ ಮತ್ತು ಮೈಸೂರು ಸೇಲ್ಸ್ ಇಂಟರ್‌ನ್ಯಾಶನಲ್ ಲಿಮಿಟೆಡ್ (ಎಂಎಸ್‌ಐಎಲ್)ನ ದೈನಂದಿನ ಮದ್ಯ ಮಾರಾಟ ಮತ್ತು ದಾಸ್ತಾನುಗಳ ಮೇಲೆ ಚುನಾವಣಾ ಆಯೋಗ ಕಣ್ಣಿಟ್ಟಿದೆ.

ಈ ಹಿನ್ನೆಲೆಯಲ್ಲಿ ಚುನಾವಣೆ ಮುಗಿಯುವವರೆಗೆ ಪ್ರತಿ ವ್ಯಕ್ತಿಯ ಗರಿಷ್ಠ ಮಾರಾಟಕ್ಕೆ ಮಿತಿ ಹಾಕಲು ಅಬಕಾರಿ ಇಲಾಖೆ ಕೂಡ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಕಚೇರಿಯ ಅಂಕಿಅಂಶಗಳ ಪ್ರಕಾರ, ಚುನಾವಣಾ ನೀತಿ ಸಂಹಿತೆ ಜಾರಿ ಬಳಿಕ ಕೇವಲ 10 ದಿನಗಳಲ್ಲಿ ಮದ್ಯ ವಶಪಡಿಸಿಕೊಳ್ಳುವಿಕೆಯು ಶೇ.31.79ರಷ್ಟು ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ.

ಮಾರ್ಚ್ 10, 2019 ರಿಂದ ಮಾರ್ಚ್ 24, 2019 ರವರೆಗೆ ಅಧಿಕಾರಿಗಳು 19.88 ಕೋಟಿ ಮೌಲ್ಯದ 4.90 ಲಕ್ಷ ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

ಸಂಗ್ರಹ ಚಿತ್ರ
ಲೋಕಸಭೆ ಚುನಾವಣೆ: ಕರ್ನಾಟಕದಲ್ಲಿ 20.85 ಕೋಟಿ ರೂಪಾಯಿ ಹಣ, 27 ಕೋಟಿ ರೂ. ಮೌಲ್ಯದ ಮದ್ಯ ವಶ!

ಮಾರ್ಚ್ 16-26ರವರೆಗೆ 26.20 ಕೋಟಿ ಮೌಲ್ಯದ 8.40 ಲಕ್ಷ ಲೀಟರ್ ವಶಪಡಿಸಿಕೊಳ್ಳಲಾಗಿದೆ. ಮಾರ್ಚ್ 29, 2024 ರವರೆಗೆ 27,27,59,762 ಮೌಲ್ಯದ 8,63,337.38 ಲೀಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ 2023ರ ಆಗಸ್ಟ್ 1ರಿಂದ 2024ರ ಮಾರ್ಚ್ 14ರವರೆಗೆ 40.74 ಕೋಟಿ ಮೌಲ್ಯದ 7,79,062 ಲೀಟರ್‌ಗಳನ್ನು ಇಲಾಖೆ ವಶಪಡಿಸಿಕೊಂಡಿತ್ತು ಎಂದು ವರದಿಗಳು ತಿಳಿಸಿವೆ.

ಬೆಂಗಳೂರಿನ ಎಂಎಸ್‌ಐಎಲ್ ಕೇಂದ್ರ ಕಚೇರಿಯು ಪ್ರತಿದಿನವೂ ಮಾರಾಟದ ಅಂಕಿಅಂಶಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುತ್ತಿದೆ. ಯಾವುದೇ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗುವುದಿಲ್ಲ. ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಗೆ ಗರಿಷ್ಠ 4.5 ಲೀಟರ್ ಮಾರಾಟ ಮಾಡಬಹುದಾಗಿದೆ. ಇದೀಗ ಚುನಾವಣಾ ಆಯೋಗ ಕಣ್ಗಾವಲು ಇಟ್ಟಿರುವ ಹಾಗೂ ಮದ್ಯ ವಶಕ್ಕೆ ಪಡೆಯುತ್ತಿರುವ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಪೂರ್ಣಗೊಳ್ಳುವವರೆಗೆ ಪ್ರತಿ ವ್ಯಕ್ತಿಗೆ ಮದ್ಯ ಮಾರಾಟವನ್ನು ಮತ್ತಷ್ಟು ಕಡಿಮೆ ಮಾಡಲು ಚಿಂತನೆ ನಡೆಸುತ್ತಿದ್ದೇವೆ. ಈ ಬಗ್ಗೆ ಚರ್ಚೆಗಳು ಮುಂದುವರೆದಿದೆ ಎಂದು ಎಂಎಸ್‌ಐಎಲ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇಲಾಖೆಯ ಮತ್ತೊಬ್ಬ ಅಧಿಕಾರಿ ಮಾತನಾಡಿ, ಮುಂದಿನ ದಿನಗಳಲ್ಲಿ ಬಾರ್‌ಗಳು ಮತ್ತು ಇತರ ಮಾರಾಟ ಮಳಿಗೆಗಳಿಂದ ದೈನಂದಿನ ಮದ್ಯ ಮಾರಾಟದ ಅಂಕಿಅಂಶಗಳನ್ನು ಸಂಗ್ರಹಿಸಲಾಗುವುದು ಎಂದು ಹೇಳಿದ್ದಾರೆ.

ಸಂಗ್ರಹ ಚಿತ್ರ
ಮದ್ಯ ಹಗರಣದ ಆರೋಪಿ ಬಸ್ತಾರ್‌ನ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ!

ಸರಾಸರಿ ದೈನಂದಿನ ಮಾರಾಟದ ವರದಿ ನಮ್ಮ ಬಳಿಯಿದೆ. ಮಾರಾಟದ ಅಂಕಿಅಂಶಗಳ ಏರಿಕೆಯ ಅಂದಾಜನ್ನು ಕೂಡ ಸಿದ್ಧಪಡಿಸಿದ್ದೇವೆ. ಮದ್ಯ ಮಾರಾಟದಲ್ಲಿ ಏರಿಕೆಯಾಗುವ ನಿರೀಕ್ಷೆಯಿದೆ, ಆದರೆ ಯಾವುದೇ ಅಹಿತಕರ ಘಟನೆಗಳು ಎದುರಾಗುವುದನ್ನು ನಾವು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.

ಶುಕ್ರವಾರ ಬಿಡುಗಡೆಯಾದ ಬಿಇಒ ಕಚೇರಿ ವರದಿಯ ಪ್ರಕಾರ, ಇಲಾಖೆಯು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಎಪಿಎಂಸಿ ಯಾರ್ಡ್‌ನ ಕೆಎಸ್‌ಬಿಸಿಎಲ್ ಡಿಪೋದಲ್ಲಿ 29,50,486 ರೂ.ಮೌಲ್ಯದ 7,344 ಲೀಟರ್ ಐಎಂಎಲ್ ಅನ್ನು ವಶಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಹಾಸನ ಜಿಲ್ಲೆಯಿಂದ ಸರಬರಾಜಾಗುತ್ತಿದ್ದ ರಟ್ಟಿನ ಪೆಟ್ಟಿಗೆಗಳು ಮತ್ತು ಆ ಪೆಟ್ಟಿಗೆಗಳ ಅಂಟಿಸಿದ್ದ ಅಬಕಾರಿ ಇಲಾಖೆ ಲೇಬಲ್‌ಗಳ ಕುರಿತು ಅಧಿಕಾರಿಗಳು ಎಫ್ಐಆರ್ ಕೂಡ ದಾಖಲಿಸಿದ್ದಾರೆಂದು ತಿಳಿದುಬಂದಿದೆ.

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಕೆಎಸ್‌ಬಿಸಿಎಲ್ ಡಿಪೋ 2ರಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಇಲಾಖೆ ಅಧಿಕಾರಿಗಳು 29,92,910 ರೂಪಾಯಿ ಮೌಲ್ಯದ 8,970 ಲೀಟರ್ ಬಿಯರ್ ವಶಪಡಿಸಿಕೊಂಡು ಎಫ್‌ಐಆರ್ ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com