ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಉಚಿತ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ: ಜನರಿಂದ ನೀರಸ ಪ್ರತಿಕ್ರಿಯೆ!

ವಿಕ್ಟೋರಿಯಾ ಆಸ್ಪತ್ರೆ ನೀಡುತ್ತಿರುವ ಉಚಿತ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಜನರಿಂದ ನೀರ ಪ್ರತಿಕ್ರಿಯೆ ಕಂಡು ಬರುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆ ನೀಡುತ್ತಿರುವ ಉಚಿತ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಜನರಿಂದ ನೀರ ಪ್ರತಿಕ್ರಿಯೆ ಕಂಡು ಬರುತ್ತಿದೆ.

ಈ ಶಸ್ತ್ರಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ರೂ.15ರಿಂದ 20 ಲಕ್ಷದವರೆಗೆ ಹಣ ತೆಗೆದುಕೊಳ್ಳುತ್ತಿದೆ. ಆದರೆ, ವಿಕ್ಟೋರಿಯಾ ಆಸ್ಪತ್ರೆಯು ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ಹಾಗೂ ಇತರರಿಗೆ ರೂ.15,000 ಶುಲ್ಕದಲ್ಲಿ ಶಸ್ತ್ರಚಿಕಿತ್ಸೆ ನಡೆಸುತ್ತಿದೆ.

ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆಯನ್ನು 2018ರಲ್ಲಿ ಆರಂಭಿಸಲಾಗಿದ್ದು, ಈವರೆಗೂ ಕೇವಲ 250 ಶಸ್ತ್ರಚಿಕಿತ್ಸೆಯನ್ನು ಮಾತ್ರ ಮಾಡಿದೆ.

ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದೀಪಕ್ ಎಸ್ ಅವರು ಮಾತನಾಡಿ, ಆಸ್ಪತ್ರೆಯು ಸುಮಾರು 245 ಶಸ್ತ್ರಚಿಕಿತ್ಸೆಗಳನ್ನು ನಡೆಸಿದೆ, ಇದರಲ್ಲಿ 64.4 (140 ಕೆಜಿ) ಅತ್ಯಧಿಕ BMI ಹೊಂದಿರುವವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಶಸ್ತ್ರಚಿಕಿತ್ಸಾ ವಿಭಾಗದ ಪ್ರೊಫೆಸರ್ ಮತ್ತು ಮಿನಿಮಲ್ ಇನ್ವೇಸಿವ್ ಸರ್ಜರಿ (ಎಂಐಎಸ್) ಮುಖ್ಯಸ್ಥ ಡಾ.ಪ್ರೇಮ್ ಕುಮಾರ್ ಎ ಮಾತನಾಡಿ, ಹೆಚ್ಚಾಗಿ ತಿನ್ನುವವರಿಗೆ ಬೊಜ್ಜು ಬರುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಬೊಜ್ಜು ಸಮಸ್ಯೆಗಳು ಹೆಚ್ಚು ತಿನ್ನುವುದರ ಜೊತೆಗೆ ಹಾರ್ಮೋನ್ ಅಸಮತೋಲನವು ಕೂಡ ಕಾರಣವಾಗುತ್ತದೆ. ಅರಿವಿನ ಕೊರತೆಯಿಂದಾಗಿ ಸಾಕಷ್ಟು ಜನರು ಸ್ಥೂಲಕಾಯತೆಗೆ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗುವ ಬದಲು, ವ್ಯಾಯಾಮ ಮತ್ತು ಆಹಾರ ಪದ್ಧತಿಗಳ ಬದಲಾವಣೆಯನ್ನು ಆಯ್ಕೆ ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ.

ಸಂಗ್ರಹ ಚಿತ್ರ
ವೇತನ ನೀಡುವಂತೆ ಆಗ್ರಹಿಸಿ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ

ಸಾಕಷ್ಟು ಜನರು ಸ್ಥೂಲಕಾಯತೆಗೆ ಚಿಕಿತ್ಸೆಯನ್ನೇ ಪಡೆಯುವುದಿಲ್ಲ. ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಾಗ ಕಾಳಜಿ ತೋರುತ್ತಾರೆ. ಉದಾಹರಣೆಗೆ, ಅತಿಯಾದ ದೇಹದ ಕೊಬ್ಬಿನಿಂದ ಉಸಿರಾಟದ ಸಮಸ್ಯೆ ಎದುರಾದಾಗ ಶ್ವಾಸಕೋಶಶಾಸ್ತ್ರ ವಿಭಾಗಕ್ಕೆ ಹೋದ ರೋಗಿಗಳನ್ನು ಇಲ್ಲಿಗೆ ಶಿಫಾರಸು ಮಾಡಲಾಗುತ್ತದೆ. ಮೂಳೆಚಿಕಿತ್ಸೆ ಮತ್ತು ಹೃದಯ ವಿಭಾಗಗಳಿಂದ ಇಲ್ಲಿಗೆ ರೋಗಿಗಳು ಬರುತ್ತಾರೆ.

ದೈಹಿಕ ಚಟುವಟಿಕೆಯ ಕೊರತೆಯೇ ತೂಕ ಹೆಚ್ಚಾಗಲು ಕಾರಣವೆಂದು ಸಾಕಷ್ಟು ಜನರು ಹೇಳುತ್ತಾರೆ. ಇದಕ್ಕಾಗಿ ಆಹಾರ ಕ್ರಮ ಬದಲಾವಣೆ, ವ್ಯಾಯಾಮ ಮಾಡುತ್ತೇನೆಂದು ಹೇಳುತ್ತಾರೆ. 35 ವರ್ಷಕ್ಕಿಂತ ಮೇಲಿನ ವ್ಯಕ್ತಿಗಳು ಸಾಮಾನ್ಯವಾಗಿ ಆಹಾರ ಮತ್ತು ವ್ಯಾಯಾಮದ ಮೂಲಕ ಫಿಟ್‌ನೆಸ್ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ತಿಳಿಯಬೇಕು. ಸ್ಥೂಲಕಾಯತೆಯನ್ನು ಪರಿಹರಿಸಲು ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮ ಸಾಕಾಗುವುದಿಲ್ಲ ಎಂದು ಡಾ ಕುಮಾರ್ ಹೇಳಿದ್ದಾರೆ.

ಸ್ಥೂಲಕಾಯತೆಯನ್ನು ತಡೆಗಟ್ಟಲು ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ನಿರ್ಣಾಯಕವಾಗಿದ್ದು, ಇದರ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಡಾ ಸುಜಾತಾ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com