ಬೆಂಗಳೂರು ಜಲಕ್ಷಾಮ: ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಗಡುವು ಏಪ್ರಿಲ್ 7ರವರೆಗೆ ವಿಸ್ತರಣೆ

ಅನಗತ್ಯವಾಗಿ ನೀರು ಪೋಲಾಗುವುದನ್ನ ತಡೆಯಲು ವಾಣಿಜ್ಯ ಕಟ್ಟಡಗಳು, ಕೈಗಾರಿಕಾ ಪ್ರದೇಶಗಳು, ರೆಸ್ಟೋರೆಂಟ್‌ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿನ ನಲ್ಲಿಗಳಿಗೆ ಏರಿಯೇಟರ್‌ ಹಾಗೂ ಫ್ಲೋ ಕಂಟ್ರೋಲರ್‌ ಅಳವಡಿಸಿಕೊಳ್ಳುವಂತೆ ನೀಡಿದ್ದ ಗಡುವನ್ನು ಏಪ್ರಿಲ್ 7 ರ ವರೆಗೆ ವಿಸ್ತರಿಸಲಾಗಿದೆ.
ನಲ್ಲಿ ನೀರು
ನಲ್ಲಿ ನೀರು

ಬೆಂಗಳೂರು: ಅನಗತ್ಯವಾಗಿ ನೀರು ಪೋಲಾಗುವುದನ್ನ ತಡೆಯಲು ವಾಣಿಜ್ಯ ಕಟ್ಟಡಗಳು, ಕೈಗಾರಿಕಾ ಪ್ರದೇಶಗಳು, ರೆಸ್ಟೋರೆಂಟ್‌ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿನ ನಲ್ಲಿಗಳಿಗೆ ಏರಿಯೇಟರ್‌ ಹಾಗೂ ಫ್ಲೋ ಕಂಟ್ರೋಲರ್‌ ಅಳವಡಿಸಿಕೊಳ್ಳುವಂತೆ ನೀಡಿದ್ದ ಗಡುವನ್ನು ಏಪ್ರಿಲ್ 7 ರ ವರೆಗೆ ವಿಸ್ತರಿಸಲಾಗಿದೆ.

ಜಲಮಂಡಳಿ ಅಧ್ಯಕ್ಷ ರಾದ ಡಾ. ರಾಮ್ ಮನೋಹರ್ ಪ್ರಸಾತ್ ಮಾತನಾಡಿ, ಏರಿಯೇಟರ್ ಅಳವಡಿಕೆಗೆ ಮಾರ್ಚ್ 31ರ ವರೆಗೆ ಗಡುವು ನೀಡಲಾಗಿತ್ತು. ಈಗಾಗಲೇ ಬಹಳಷ್ಟು ಕಡೆ ಏರಿಯೇಟರ್ ಅಳವಡಿಸಲಾಗಿದೆ. ಇನ್ನು ಹಲವು ಕಡೆ ಇದರ ಅಳವಡಿಕೆಗೆ ಹೆಚ್ಚಿನ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ನೀರಿನ ಉಳಿತಾಯ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವ ಬಹಳ ಮುಖ್ಯ. ಅವರ ಪಾಲುದಾರಿಕೆಯಿಂದ ಮಾತ್ರ ಈ ಯೋಜನೆ ಯಶಸ್ವಿಯಾಗುತ್ತದೆ. ಸಾರ್ವಜನಿಕರಿಗೆ ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ಸಮಯಾವಕಾಶ ವಿಸ್ತರಿಸಲಾಗಿದೆ. ಈ ಗಡುವಿನ ಅವಧಿಯಲ್ಲಿ ಏರಿಯೇಟರ್ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದರು,

ನೀರು ವ್ಯರ್ಥವಾಗುವುದನ್ನು ಕಡಿಮೆ ಮಾಡಲು ಬಿಡಬ್ಲ್ಯುಎಸ್‌ಎಸ್‌ಬಿ ನಡೆಸುತ್ತಿರುವ ಪ್ರಯತ್ನವನ್ನು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಕಾರ್ಯಕರ್ತ ಆಂಜನೇಯ ರೆಡ್ಡಿ ಅವರು ಶ್ಲಾಘಿಸಿದ್ದಾರೆ.

ನಲ್ಲಿ ನೀರು
ಬೆಂಗಳೂರು: ಅಂತರ್ಜಲ ವೃದ್ಧಿಗೆ ಸಮುದಾಯ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಕೆಗೆ ಜಲಮಂಡಳಿ ಚಿಂತನೆ!

ಈ ಚಿಂತನೆ ಉತ್ತಮವಾಗಿದೆ, ಆದರೆ, ಇದನ್ನು ಐದು ವರ್ಷಗಳ ಹಿಂದೆಯೇ ಕಾರ್ಯಗತಗೊಳಿಸಬೇಕಿತ್ತು. ಏರೇಟರ್‌ಗಳು ಅಥವಾ ನೀರಿನ ಹರಿವಿನ ನಿಯಂತ್ರಕಗಳ ಅಳವಡಿಗೆ ಉತ್ತಮ ಕ್ರಮ. ಇದರ ಜೊತೆಗೆ ಒಳಚರಂಡಿ ನೀರನ್ನು ಸಂಸ್ಕರಿಸಲು ಮತ್ತು ನಗರದ ಎಲ್ಲಾ ಜಲಮೂಲಗಳನ್ನು ತುಂಬಿಸಲು ಉತ್ತಮವಾದ ಸಂಸ್ಕರಣಾ ಘಟಕವನ್ನು ಸ್ಥಾಪಿಸಬೇಕಾಗಿದೆ. ಬಿಡಬ್ಲ್ಯೂಎಸ್‌ಎಸ್‌ಬಿ ಅರೆ ಸಂಸ್ಕರಿಸಿದ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರದ ಟ್ಯಾಂಕ್‌ಗಳಿಗೆ ಕಳುಹಿಸುತ್ತಿದೆ ಎಂದು ಹೇಳಿದ್ದಾರೆ.

ಯುವಿಸಿಇ ಬೆಂಗಳೂರು ವಿಶ್ವವಿದ್ಯಾಲಯದ ವಾಟರ್ ಇನ್‌ಸ್ಟಿಟ್ಯೂಟ್ ನಿರ್ದೇಶಕ ಪ್ರೊ.ಎಂ ಇನಾಯತುಲ್ಲಾ ಮಾತನಾಡಿ, ಏರೇಟರ್‌ಗಳು ಕೇವಲ ಸ್ಟಾಪ್ ಗ್ಯಾಪ್ ವ್ಯವಸ್ಥೆಯಾಗಿದೆ. ಸದ್ಯಕ್ಕೆ, ಈ ಕ್ರಮ ಉತ್ತಮವಾಗಿ ಕೆಲಸ ಮಾಡಬಹುದು. ಆದರೆ, ದೀರ್ಘಾವಧಿಯಲ್ಲಿ ಜಲಮೂಲಗಳನ್ನು ನಿರ್ವಹಿಸಬೇಕಾಗಿದೆ. ಕೆರೆಗೆಳ ನೀರು ನಿರ್ವಹಣೆಯಿಲ್ಲದಂತಾಗಿದೆ. ಅವುಗಳು ಕಲುಷಿತವಾಗುತ್ತಿವೆ. ಅಂತರ್ಜಲ ಹೆಚ್ಚಿಸಲು ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ತುಂಬಿಸಬೇಕು. ಜಲಮೂಲಗಳು ಸರಾಗವಾಗಿ ಹರಿಯುವಂತೆ ಮಾಡಬೇಕು. ಇದು ಸಾಧ್ಯವಾಗದ ಕಾರಣವೇ ನಗರದಲ್ಲಿ ಪ್ರವಾಹ ಪರಿಸ್ಥಿತಿಗಳು ಎದುರಾಗುತ್ತವೆ. ನಾಗರಿಕ ಸಂಸ್ಥೆಗಳು ನಿಯಮಿತವಾಗಿ ಹೂಳು ತೆಗೆಯುವ ಕೆಲಸ ಮಾಡಬೇಕು. ಇದನ್ನು ಮಾಡಿದರೆ ಕಾವೇರಿ ಮೇಲಿನ ಅವಲಂಬನೆಯೂ ಕಡಿಮೆಯಾಗಲಿದೆ’ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com