ಕಾವೇರಿ ಮೇಲಿನ ಒತ್ತಡ ಇಳಿಸಲು ಕ್ರಮ: ಪ್ರತಿದಿನ ಕೋಟಿ ಲೀಟರ್‌ ಸಂಸ್ಕರಿತ ನೀರು ಉತ್ಪಾದನೆಗೆ BWSSB ಮುಂದು!

ಕಾವೇರಿ ನದಿ ನೀರು ಹಾಗೂ ಬೋರ್‌ವೆಲ್‌ಗಳ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡುವ ಸಲುವಾಗಿ ನಗರದಲ್ಲಿ ಸಂಸ್ಕರಿಸಿದ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡಲು ಬೆಂಗಲೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (BWSSB) ಯೋಜನೆ ರೂಪಿಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಕಾವೇರಿ ನದಿ ನೀರು ಹಾಗೂ ಬೋರ್‌ವೆಲ್‌ಗಳ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡುವ ಸಲುವಾಗಿ ನಗರದಲ್ಲಿ ಸಂಸ್ಕರಿಸಿದ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡಲು ಬೆಂಗಲೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (BWSSB) ಯೋಜನೆ ರೂಪಿಸುತ್ತಿದೆ.

ಯೋಜನೆಯಂತೆ ಮಂಡಳಿಯು ಈಗಾಗಲೇ ವಿಪ್ರೋಗೆ ಪ್ರತಿದಿನ 3 ಲಕ್ಷ ಲೀಟರ್ ಸಂಸ್ಕರಿಸಿದ ನೀರನ್ನು ಪೂರೈಕೆ ಮಾಡುತ್ತಿದ್ದು, ಶೂನ್ಯ-ಬ್ಯಾಕ್ಟೀರಿಯಾ ತಂತ್ರಜ್ಞಾನದೊಂದಿಗೆ ಒಂದು ಕೋಟಿ ಲೀಟರ್ ನೀರನ್ನು ಸಂಸ್ಕರಿಸುವ ಗುರಿಯನ್ನುಹೊಂದಿದೆ.

BWSSB ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮಾತನಾಡಿ,. ಕೊಳಚೆ ನೀರನ್ನು ಕಪ್ಪು ನೀರು (ಸ್ಯಾನಿಟರಿ ಲೈನ್‌ಗಳಿಂದ ಬರುವ ನೀರು) ಮತ್ತು ಬೂದು ನೀರು (ಸ್ನಾನಗೃಹಗಳು, ಅಡಿಗೆಮನೆಗಳು ಮತ್ತು ಗೃಹಬಳಕೆಯಿಂದ ಬಂದ ನೀರು) ಎಂದು ವರ್ಗೀಕರಿಸಲಾಗಿದೆ. ಬೆಂಗಳೂರಿನಲ್ಲಿ ಸಂಸ್ಕರಿಸಿದ ನೀರಿನ ಬೇಡಿಕೆಯು ದಿನಕ್ಕೆ 60,000 ಲೀಟರ್‌ಗಳಿಂದ ಆರು ಮಿಲಿಯನ್ ಲೀಟರ್‌ಗಳಿಗೆ (MLD) ಹೆಚ್ಚಾಗಿದೆ ಸಂಸ್ಕರಿಸಿದ ನೀರಿನ ಪೂರೈಕೆಯನ್ನು ಹೆಚ್ಚಳ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಸ್ನಾನ, ತೊಳೆಯುವುದು, ವಾಹನಗಳನ್ನು ಸ್ವಚ್ಛಗೊಳಿಸುವುದು, ತೋಟಗಾರಿಕೆ, ಎಸಿ ನಿರ್ವಹಣೆ ಮತ್ತು ಕುಡಿಯಲು ಯೋಗ್ಯವಲ್ಲದ ಇತರ ಕಾರ್ಯಗಳಂತಹ ದ್ವಿತೀಯ ಉದ್ದೇಶಗಳಿಗೆ ಈ ನೀರನ್ನು ಬಳಕೆ ಮಾಡಬಹುದಾಗಿದೆ. ಇದರಿಂದ ಕಾವೇರಿ ಮತ್ತು ಬೋರ್‌ವೆಲ್ ನೀರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು ಎಂದು ಜಲತಜ್ಞರು ಹೇಳಿದ್ದಾರೆ.

ಸಂಗ್ರಹ ಚಿತ್ರ
BWSSBಯಿಂದ ವಿಪ್ರೋಗೆ ಪ್ರತಿದಿನ 3 ಲಕ್ಷ ಲೀಟರ್ ಸಂಸ್ಕರಿಸಿದ ನೀರು ಪೂರೈಕೆ

ಜಲ ತಜ್ಞ ವಿಶ್ವನಾಥ್ ಶ್ರೀಕಂಠಯ್ಯ ಮಾತನಾಡಿ, ಕೆಸಿ ವ್ಯಾಲಿಯಿಂದ 440 ಎಂಎಲ್‌ಡಿ ಸಂಸ್ಕರಿಸಿದ ನೀರು ಕೋಲಾರದ ಟ್ಯಾಂಕ್‌ಗಳಿಗೆ ಹೋಗುತ್ತಿವೆ. ಎಚ್‌ಎನ್ ವ್ಯಾಲಿಯಿಂದ 260 ಎಂಎಲ್‌ಡಿ ಸಂಸ್ಕರಿಸಿದ ನೀರು ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಆನೇಕಲ್‌ನ ಟ್ಯಾಂಕ್‌ಗಳಿಗೆ ಹೋಗುತ್ತಿವೆ.

ಈ ನೀರನ್ನು ಕೃಷಿ ಉದ್ದೇಶಗಳಿಗೆ ಬಳಸಬಹುದಾಗಿದೆ. ಅಲ್ಲದೆ, ಸಂಸ್ಕರಿಸಿದ ನೀರನ್ನು ಕೆರೆ ಪುನರುಜ್ಜೀವನಕ್ಕಾಗಿ ಮತ್ತು ಕೈಗಾರಿಕೆಗಳ ಬಳಕೆಗೆ ಸಹ ಸರಬರಾಜು ಮಾಡಬಹುದಾಗಿದೆ. ಪ್ರಸ್ತುತ ಬೆಂಗಳೂರಿಗೆ 1,470 ಎಂಎಲ್‌ಡಿ ಕಾವೇರಿ ನೀರನ್ನು ಪೈಪ್‌ಗಳ ಮೂಲಕ ಸರಬರಾಜು ಮಾಡಲಾಗುತ್ತಿದ್ದು, ಐದನೇ ಹಂತದ ಕಾವೇರಿಯಲ್ಲಿ ಹೆಚ್ಚುವರಿಯಾಗಿ 775 ಎಂಎಲ್‌ಡಿ ನೀರು ಪೂರೈಸಲಾಗುವುದು. ನಾವು ನಮ್ಮ ಎಲ್ಲಾ ಒಳಚರಂಡಿ ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ಸದುಪಯೋಗಪಡಿಸಿಕೊಂಡರೆ, ಅಂತರ್ಜಲ ಮಟ್ಟವನ್ನು ಹೆಚ್ಚಳ ಮಾಡಬಹುದು. ಕೆರೆಗಳನ್ನು ಸಂರಕ್ಷಿಸಬಹುದು. ಕಾವೇರಿ ನೀರಿನ ಮೇಲಿನ ಒತ್ತಡವನ್ನು ಶೇಕಡಾ 50 ರಷ್ಟು ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com