ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ 20,000 ಕೋಟಿ ರೂ. ಕಲೆಕ್ಷನ್!

ಕಳೆದ ಹಣಕಾಸು ವರ್ಷದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ರೂ. 20,000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ನೋಂದಣಿಯಾಗದ ದಾಖಲೆಗಳ ಮೇಲಿನ ಸುಂಕ ಹೆಚ್ಚಿಸುವ ಮೂಲಕ ಇಲಾಖೆ 2023-2024ರ ಹಣಕಾಸು ವರ್ಷದಲ್ಲಿ ಆದಾಯ ಸಂಗ್ರಹಣೆಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕಳೆದ ಹಣಕಾಸು ವರ್ಷದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ರೂ. 20,000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ನೋಂದಣಿಯಾಗದ ದಾಖಲೆಗಳ ಮೇಲಿನ ಸುಂಕ ಹೆಚ್ಚಿಸುವ ಮೂಲಕ ಇಲಾಖೆ 2023-2024ರ ಹಣಕಾಸು ವರ್ಷದಲ್ಲಿ ಆದಾಯ ಸಂಗ್ರಹಣೆಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ರಾಜ್ಯದಾದ್ಯಂತ ಅದರ 256 ಸಬ್ ರಿಜಿಸ್ಟ್ರಾರ್ ಕಚೇರಿಗಳಿಂದ ಒಟ್ಟು ರೂ. 20,287.3 ಕೋಟಿ ಆದಾಯ ಸಂಗ್ರಹಿಸಲ್ಪಟ್ಟಿದೆ. ಇದು ಅದರ 150ಕ್ಕೂ ಹೆಚ್ಚಿನ ವರ್ಷಗಳ ಇತಿಹಾಸದಲ್ಲಿಯೇ ಅತ್ಯಧಿಕವಾಗಿದೆ. 2022-2023ರ ಅವಧಿಯಲ್ಲಿ 17,873.97 ಕೋಟಿ ರೂ.ಗಳ ಆದಾಯ ಸಂಗ್ರಹಿಸಲಾಗಿತ್ತು ಎಂದು ಇಲಾಖೆ ಮಾಹಿತಿ ಹಂಚಿಕೊಂಡಿದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅಧಿಕಾರಿಯೊಬ್ಬರು, “ಸಾಮಾನ್ಯವಾಗಿ, ಬೆಂಗಳೂರು ನಗರವು ಶಿವಾಜಿ ನಗರ, ಗಾಂಧಿ ನಗರ, ಜಯನಗರ, ಬಸವನಗುಡಿ ಮತ್ತು ರಾಜಾಜಿನಗರ ನೋಂದಣಿ ಇಲಾಖೆಯಿಂದ ಗುರುತಿಸಲಾದ ಸಂಗ್ರಹಿಸಲಾದ 13,016.88 ಕೋಟಿ ರೂಪಾಯಿಗಳೊಂದಿಗೆ ಶೇ. 60 ರಷ್ಟು ಆದಾಯ ಸಂಗ್ರಹಿಸಿದರೆ. ಇಂದಿರಾ ನಗರ ಮತ್ತು ಬಸವನಗುಡಿ ಸಬ್ ರಿಜಿಸ್ಟ್ರಾರ್ ಕಛೇರಿಗಳು ಆದಾಯ ಸಂಗ್ರಹಣೆಯಲ್ಲಿ ರಾಜ್ಯದ ಮೊದಲ ಎರಡು ಸ್ಥಾನಗಳನ್ನು ಆಕ್ರಮಿಸಿಕೊಂಡಿವೆ. ರಾಜ್ಯಾದ್ಯಂತ ಇಲಾಖೆಯಿಂದ ಗುರುತಿಸಲಾದ 35 ಜಿಲ್ಲೆಗಳ ಪೈಕಿ ಬೆಂಗಳೂರು ನಗರವು 1260.07 ಕೋಟಿ ರೂಪಾಯಿ ಆದಾಯ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದೆ.

ಅಕ್ಟೋಬರ್ 1 ರಿಂದ ಮಾರ್ಗದರ್ಶಿ ಮೌಲ್ಯದ ಹೆಚ್ಚಳವು ಇದಕ್ಕೆ ಪ್ರಾಥಮಿಕ ಕಾರಣವಾಗಿದೆ. ಆಸ್ತಿ ಮೌಲ್ಯದ ಶೇ. 5 ರಷ್ಟು ಸ್ಟ್ಪಾಂಪ್ ಶುಲ್ಕ ಮತ್ತು ನೋಂದಣಿ ಶುಲ್ಕ ಶೇ. 1 ರಷ್ಟು ಹೆಚ್ಚಳವಾಗಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು.

28 ವರ್ಷಗಳ ಅಂತರದ ನಂತರ, ರಾಜ್ಯ ಸರ್ಕಾರ ಈ ವರ್ಷ, ದತ್ತು ತೆಗೆದುಕೊಳ್ಳಲು ಕಾನೂನು ದಾಖಲೆಗಳು, ಉದ್ಯೋಗಿ ಒಪ್ಪಂದಗಳು, ಅಫಿಡವಿಟ್‌ಗಳು, ಸಾಲಗಳು, ಷೇರು ವರ್ಗಾವಣೆ, ವಿಚ್ಛೇದನ, ಬಾಡಿಗೆ, ಲೀಸ್ ಒಪ್ಪಂದದಂತಹ ಮೇಲೆ ಸ್ಟ್ಯಾಂಪ್ ಡ್ಯೂಟಿ ಹೆಚ್ಚಳವನ್ನು ಶೇ. 200 ರಿಂದ ಶೇ. 500 ರಷ್ಟು ಹೆಚ್ಚು ಮಾಡಿದ್ದು, ಕರ್ನಾಟಕ ಸ್ಟ್ಯಾಂಪ್ ಕಾಯ್ದೆ 1957 ಅನ್ನು ಕರ್ನಾಟಕ ಸ್ಟಾಂಪ್ (ತಿದ್ದುಪಡಿ ಕಾಯ್ದೆ) 2023 ಎಂದು ತಿದ್ದುಪಡಿ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ
ಕಂದಾಯ ಇಲಾಖೆಯಿಂದ ಒಂದೇ ದಿನ ದಾಖಲೆಯ ಆಸ್ತಿ ನೋಂದಣಿ; 312.84 ಕೋಟಿ ರೂ. ಮುದ್ರಾಂಕ ಶುಲ್ಕ ಸಂಗ್ರಹ

ಇದೀಗ ಮುಕ್ತಾಯಗೊಂಡ ಆರ್ಥಿಕ ವರ್ಷದಲ್ಲಿ ಮತ್ತೊಂದು ದಾಖಲೆ ಮಾಡಲಾಗಿದೆ. ಸೆಪ್ಟೆಂಬರ್ 27, 2023 ರಂದು ಒಂದೇ ದಿನದಲ್ಲಿ ರೂ 312.84 ಕೋಟಿ ಸ್ಟ್ಯಾಂಪ್ ಡ್ಯೂಟಿ ಶುಲ್ಕ ಸಂಗ್ರಹವಾಗಿದೆ. ಬೃಹತ್ ಪ್ರಮಾಣದ ನೋಂದಣಿಗಳನ್ನು ನಿರ್ವಹಿಸಲು ಅನುಕೂಲವಾದ ಕಾವೇರಿ-2 ಸಾಫ್ಟ್‌ವೇರ್ ಕೂಡ ದಾಖಲೆ ಸಂಗ್ರಹದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಆದಾಯ ಸಂಗ್ರಹದಿಂದ ಉತ್ತೇಜಿತರಾದ ಮುಖ್ಯಮಂತ್ರಿಗಳು ಈ ಹಣಕಾಸು ವರ್ಷಕ್ಕೆ (2024-2025) 26,000 ಕೋಟಿ ರೂ.ಗಳನ್ನು ಗುರಿಯಾಗಿ ಘೋಷಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com