
ಬೆಂಗಳೂರು: ಸದ್ಯ ಲಭ್ಯವಿರುವ ಪೂರೈಕೆಯನ್ನೂ ಮೀರಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ನಗರದಲ್ಲಿನ ಪಬ್‌ಗಳು ಮತ್ತು ಬ್ರೂವರೀಸ್‌ಗಳು ಹೆಣಗಾಡುತ್ತಿದ್ದು, ನೀರಿನ ಕೊರತೆಯನ್ನು ಎದುರಿಸುತ್ತಿರುವ ಬೆಂಗಳೂರಿಗರು ಇದೀಗ ಶೀಘ್ರದಲ್ಲೇ 'ಬಿಯರ್ ಕೊರತೆ' ಎದುರಿಸಬಹುದು ಎನ್ನಲಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಬಿಯರ್ ಮಾರಾಟದಲ್ಲಿ ಹೆಚ್ಚಳ ಕಂಡುಬಂದಿದ್ದು, ಬ್ರೂವರೀಸ್‌ನಲ್ಲಿ ದಾಸ್ತಾನು ಇಲ್ಲದಂತಾಗಿದೆ. ಇದಕ್ಕೆ ಪ್ರತಿಯಾಗಿ, ಚಿಲ್ಲರೆ ಅಂಗಡಿಗಳಿಗೂ ದಾಸ್ತಾನುಗಳನ್ನು ಪೂರೈಸುವಲ್ಲಿ ವಿಳಂಬ ಉಂಟಾಗಿದೆ.
ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಅನೇಕ ಪಬ್‌ಗಳು ಮತ್ತು ಬ್ರೂವರೀಸ್‌ಗಳು ವಾರಾಂತ್ಯದಲ್ಲಿ ನೀಡುತ್ತಿದ್ದ ಆಫರ್‌ಗಳನ್ನು ನಿಲ್ಲಿಸಲು ಸಿದ್ಧವಾಗಿವೆ. ಬಿಯರ್ ಬೇಡಿಕೆಯಲ್ಲಿ ಕಂಡುಬಂದಿರುವ ಹೆಚ್ಚಳವು ಕೇವಲ ಬೇಸಿಗೆಯ ಕಾರಣದಿಂದಾಗಿರುವುದಿಲ್ಲ. ಬದಲಿಗೆ, ಇದೀಗ ಹಣ್ಣುಗಳ ಋತುವಾಗಿರುವುದರಿಂದ ಮತ್ತು ಹಲವಾರು ದೀರ್ಘ ವಾರಾಂತ್ಯಗಳು ಬಂದಿರುವುದರಿಂದ ಈ ಸಮಯದಲ್ಲಿ ಜನರು ಸಾಮಾನ್ಯವಾಗಿ ಬಿಯರ್ ಮೊರೆಹೋಗುತ್ತಾರೆ.
ಮಾರತ್ತಹಳ್ಳಿಯ ಪ್ರಮುಖ ಬ್ರೂವರೀಸ್‌ನ ಪ್ರತಿನಿಧಿಯೊಬ್ಬರು ಮಾತನಾಡಿ, ಈ ವರ್ಷದ ಪೂರೈಕೆ ಮತ್ತು ಬಳಕೆ ನಮ್ಮ ನಿರೀಕ್ಷೆಯನ್ನು ಮೀರಿದೆ. ಇದಕ್ಕಾಗಿ ನಾವು ಯಾವುದೇ ಸಿದ್ಧತೆ ಮಾಡಿಕೊಂಡಿರಲಿಲ್ಲ. 'ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ, ನಾವು ಹಣ್ಣಿನ ರುಚಿಯ ಬಿಯರ್ ಅನ್ನು ಪರಿಚಯಿಸುತ್ತೇವೆ. ಮಾವಿನಹಣ್ಣು ಮತ್ತು ಅನಾನಸ್‌ಗಳಂತಹ ಹಣ್ಣುಗಳ ಮೇಲೆ ಹೆಚ್ಚು ಮಾರಾಟವು ಅವಲಂಬಿತವಾಗಿರುತ್ತದೆ. ಈ ವರ್ಷ, ಮಾವಿನಹಣ್ಣಿನ ಉಪದ್ರವದಿಂದಾಗಿ ಹಣ್ಣಿನ ಬಿಯರ್ ಮಾರಾಟವು ಕಡಿಮೆಯಾಗಿದೆ. ಹೀಗಾಗಿ, ಜನರು ಸಾಮಾನ್ಯ ಬಿಯರ್ ಕೊಂಡುಕೊಳ್ಳಲು ಮುಂದಾಗುತ್ತಿದ್ದಾರೆ ಎಂದರು.
ವ್ಯಾಪಕ ಬಿಸಿಲು, ಐಪಿಎಲ್ ಸೀಸನ್ ಮತ್ತು ದೀರ್ಘ ವಾರಾಂತ್ಯವಾಗಿರುವುದರಿಂದ ಮಾರಾಟವೂ ಹೆಚ್ಚುತ್ತಲೇ ಇತ್ತು. ಈ ವರ್ಷ ಸರಿಸುಮಾರು 30,000 ಲೀಟರ್ ಬಿಯರ್ ಅನ್ನು ಈಗಾಗಲೇ ಮಾರಾಟ ಮಾಡಲಾಗಿದೆ. ಹಿಂದಿನ ವರ್ಷ ಸುಮಾರು 9,000 ಲೀಟರ್ ಬಿಯರ್ ಮಾರಾಟವಾಗಿತ್ತು ಎಂದು ಹೇಳಿದರು.
ಗಿಲ್ಲಿಸ್ ರೆಸ್ಟೊಬಾರ್‌ನ ಕಾರ್ಯಾಚರಣಾ ಮುಖ್ಯಸ್ಥರು ಮಾತನಾಡಿ, 'ಬಹುತೇಕ ಎಲ್ಲ ಗ್ರಾಹಕರು ಯಾವುದೇ ಇತರ ಪಾನೀಯಕ್ಕಿಂತ ಬಿಯರ್ ಆರ್ಡರ್‌ಗಳನ್ನು ಮಾಡುತ್ತಿರುವುದರಿಂದ ಮಾರಾಟವು ಶೇ 40 ರಷ್ಟು ಹೆಚ್ಚಾಗಿದೆ. ಬ್ರೂವರೀಸ್‌ನಿಂದ ಆರ್ಡರ್‌ಗಳ ವಿಳಂಬದಿಂದಾಗಿ ಮಾರಾಟವನ್ನು ನಿರ್ವಹಿಸುವುದು ಸವಾಲಿನ ಸಂಗತಿಯಾಗಿದೆ ಎನ್ನುತ್ತಾರೆ.
'ಆಫರ್‌ಗಳ ಕಡಿತ'
ಬಿಯರ್ ಬೇಡಿಕೆ ಹೆಚ್ಚಿದ್ದು, ಪೂರೈಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ವಾರಾಂತ್ಯದಲ್ಲಿ ನೀಡಲಾಗುತ್ತಿದ್ದ ಕೊಡುಗೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲು ತೀರ್ಮಾನಿಸಲಾಗಿದೆ. ಎಲ್ಲ ಬ್ರಾಂಡ್ ಬಿಯರ್‌ಗಳಲ್ಲಿ 2 ಖರೀದಿಸಿ 1 ಅನ್ನು ಉಚಿತವಾಗಿ 1 ಪಡೆಯಿರಿಯಂತ ಆಫರ್‌ಗಳನ್ನು ನಿಲ್ಲಿಸಲಾಗುವುದು ಎಂದು ಅವರು ಹೇಳಿದರು.
ರೆಸಿಡೆನ್ಸಿ ರಸ್ತೆಯಲ್ಲಿರುವ ಮತ್ತೊಂದು ಬ್ರೂವರೀಸ್ ಮುಖ್ಯಸ್ಥ ಪೃಥ್ವಿ ಮಾತನಾಡಿ, ಸದ್ಯ ತಾಪಮಾನ ಏರಿಕೆಯಾಗುತ್ತಿದ್ದು, ಧಾನ್ಯಗಳಿಂದ ತೆಗೆದ ದ್ರವ ದ್ರಾವಣವನ್ನು ಸಮರ್ಪಕವಾಗಿ ತಣ್ಣಗಾಗಿಸುವುದು ಮತ್ತು ಸಕ್ಕರೆ ಮೂಲದ ಬ್ರೂವರಿಗಳನ್ನು ಕುದಿಸಿದ ನಂತರ ಬಿಯರ್ ಯೀಸ್ಟ್‌ಗಳನ್ನು ರಚಿಸುವುದು ಸವಾಲಿನ ಸಂಗತಿಯಾಗಿದೆ ಎಂದು ಹೇಳುತ್ತಾರೆ.
ನಾವು ಅಂತಹ ಹವಾಮಾನ ಪರಿಣಾಮಗಳನ್ನು ಎದುರಿಸಲಿಲ್ಲ, ಆದ್ದರಿಂದ ತಾತ್ಕಾಲಿಕ ಪರಿಹಾರವನ್ನು ನೀಡುವ ಹೊಸ ಕ್ರಮಗಳಿಗೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು.
Advertisement