ಮಂಗಳೂರು ನಂತರ ಇದೀಗ ಉಡುಪಿಯಲ್ಲೂ ಕುಡಿಯುವ ನೀರಿನ ಪಡಿತರ ಆರಂಭ!

ಕರಾವಳಿ ಜಿಲ್ಲೆಯ ಮಂಗಳೂರು ನಂತರ ಇದೀಗ ಉಡುಪಿಯಲ್ಲಿಯೂ ನೀರಿನ ಪಡಿತರ ವ್ಯವಸ್ಥೆ ಆರಂಭಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಉಡುಪಿ: ಕರಾವಳಿ ಜಿಲ್ಲೆಯ ಮಂಗಳೂರು ನಂತರ ಇದೀಗ ಉಡುಪಿಯಲ್ಲಿಯೂ ನೀರಿನ ಪಡಿತರ ವ್ಯವಸ್ಥೆ ಆರಂಭಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಬುಧವಾರದಿಂದಲೇ ಪಡಿತರ ವ್ಯವಸ್ಥೆ ಜಾರಿಗೆ ಬರಲಿದ್ದು, ಜಲಾಶಯದಲ್ಲಿ ನೀರಿನ ಸಂಗ್ರಹ ಉತ್ತಮ ಮಟ್ಟ ತಲುಪವರೆಗೂ ಮುಂದುವರಿಯಲಿದೆ ಎಂದು ಉಡುಪಿ ನಗರ ಪಾಲಿಕೆಯ ಆಯುಕ್ತ ರಾಯಪ್ಪ ಪಿಟಿಐಗೆ ತಿಳಿಸಿದ್ದಾರೆ.

ಉಡುಪಿ ನಗರಕ್ಕೆ ಏಕೈಕ ನೀರಿನ ಮೂಲವಾಗಿರುವ ಬಜೆ ಎಂಬ ಸ್ಥಳದಲ್ಲಿ ಸ್ವರ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಅಣೆಕಟ್ಟಿನಲ್ಲಿ 3. 25 ಮೀಟರ್ ಮಾತ್ರ ನೀರಿನ ಸಂಗ್ರಹವಿದೆ. ಜಲಾಶಯ ಮತ್ತೆ ಸಂಪೂರ್ಣ ಭರ್ತಿಯಾಗುವವರೆಗೂ ನೀರಿನ ಪಡಿತರ ನಿರ್ಧಾರವನ್ನು ಆಗಾಗ್ಗೆ ಪರಿಶೀಲಿಸಲಾಗುತ್ತದೆ ಎಂದು ಅಧಿಕಾರಿ ಹೇಳಿದರು.

ಸಾಂದರ್ಭಿಕ ಚಿತ್ರ
ಬಿರು ಬೇಸಗೆಯ ಆರ್ಭಟಕ್ಕೆ ಮಧ್ಯ ಕರ್ನಾಟಕ ತತ್ತರ: ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಅಭಾವ!

ತುಂಬೆಯಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ಶನಿವಾರ ನೀರಿನ ಪಡಿತರ ವ್ಯವಸ್ಥೆ ಆಶ್ರಯಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com