ಬೆಂಗಳೂರು ಹವಾಮಾನ: ಬಿಸಿಲ ಧಗೆಯಿಂದ ಸಿಕ್ಕೀತೆ ಮುಕ್ತಿ? IMD Yellow Alert!

ಬಿಸಿಲ ಧಗೆಯಿಂದ ಉರಿಯುತ್ತಿದ್ದ ಬೆಂಗಳೂರಿನ ಹವಾಮಾನ ಈಗ ಸುಧಾರಿಸುತ್ತಿದ್ದು, ಕೆಲವು ದಿನಗಳಿಂದ ಅಲ್ಪ ಪ್ರಮಾಣದ ಮಳೆಯಾಗುತ್ತಿದೆ.
ಬೆಂಗಳೂರಿನಲ್ಲಿ ಮಳೆ
ಬೆಂಗಳೂರಿನಲ್ಲಿ ಮಳೆonline desk

ಬೆಂಗಳೂರು: ಬಿಸಿಲ ಧಗೆಯಿಂದ ಉರಿಯುತ್ತಿದ್ದ ಬೆಂಗಳೂರಿನ ಹವಾಮಾನ ಈಗ ಸುಧಾರಿಸುತ್ತಿದ್ದು, ಕೆಲವು ದಿನಗಳಿಂದ ಅಲ್ಪ ಪ್ರಮಾಣದ ಮಳೆಯಾಗುತ್ತಿದೆ.

ಈ ಮಧ್ಯೆ ಐಎಂಡಿ ಬೆಂಗಳೂರಿಗೆ ಮಳೆಗೆ ಸಂಬಂಧಿಸಿದಂತೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಜೋರು ಗಾಳಿ ಸಹಿತ ಮಳೆಯಾಗಲಿದೆ ಎಂದು ಐಎಂಡಿ ಹೇಳಿದೆ.

ಕೆಲವು ದಿನಗಳಿಂದ ನಗರದಲ್ಲಿ ಅಲ್ಪ ಪ್ರಮಾಣದ ಮಳೆಯಾಗುತ್ತಿದ್ದು ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿದ್ದವು. ಗಾಳಿಗೆ ಮರದ ಕೊಂಬೆಗಳು ಮುರಿದುಬಿದ್ದಿದ್ದವು. ಪರಿಸ್ಥಿತಿಯನ್ನು ಅನುಸರಿಸಿ, ಬೆಂಗಳೂರು ಟ್ರಾಫಿಕ್ ಪೊಲೀಸರು ನಗರದಲ್ಲಿನ ನೀರಿನ ಸಮಸ್ಯೆಗಳ ಬಗ್ಗೆ ಪ್ರಯಾಣಿಕರಿಗೆ ಮಾರ್ಗಸೂಚಿಗಳನ್ನು ಪ್ರಕಟಿಸಿ ಟ್ರಾಫಿಕ್ ತೊಂದರೆಗಳನ್ನು ಸರಾಗಗೊಳಿಸಿದರು.

ಬೆಂಗಳೂರಿನಲ್ಲಿ ಮಳೆ
ಬೆಂಗಳೂರು ಸೇರಿ ಸುತ್ತಮುತ್ತ ಜಿಲ್ಲೆಗಳಲ್ಲಿ ಇಂದು ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರಿಗೆ ಐಎಂಡಿ ಮುಂದಿನ ಕೆಲವು ದಿನಗಳಲ್ಲಿ ಮಳೆ ಮತ್ತು ಮೋಡ ಕವಿದ ದಿನಗಳನ್ನು ಮುನ್ಸೂಚನೆ ನೀಡಿದೆ. ಮೇ.08 ರಂದು ನಗರದಲ್ಲಿ ತಾಪಮಾನ 21 ರಿಂದ 35 ಡಿಗ್ರಿ ಸೆಲ್ಶಿಯಸ್ ಇರಲಿದ್ದು ಮೋಡ ಕವಿದ ವಾತಾವರಣ ಇರಲಿದ್ದು, ಮೇ.09 ರಂದೂ ಇದೇ ವಾತಾವರಣ ಇರಲಿದೆ.

41 ವರ್ಷಗಳಲ್ಲೇ ಇದು ಅತ್ಯಂತ ಹೆಚ್ಚು ಬಿಸಿಲಿನ ಏಪ್ರಿಲ್!

ಏಪ್ರಿಲ್ ತಿಂಗಳಲ್ಲಿನ ಬೇಸಿಗೆ ನಗರದಲ್ಲಿನ ಜನತೆಗೆ ಅಸಹನೀಯವಾಗಿತ್ತು. 41 ವರ್ಷಗಳಲ್ಲೇ ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಅತ್ಯಂತ ಹೆಚ್ಚು ಬಿಸಿಲು ವರದಿಯಾಗಿದೆ. 1983 ರ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಏಪ್ರಿಲ್ ತಿಂಗಳಲ್ಲಿ ಒಂದೇ ಒಂದು ಹನಿ ಮಳೆಯಾಗಿಲ್ಲ ಎಂದು ಐಎಂಡಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com