ಮುಂಡರಗಿ: ಬೀಯರ್ ಬಾಟಲಿಯಿಂದ ಹೊಡೆದು ಯುವಕನ ಹತ್ಯೆ!

ಯುವಕನೋರ್ವನ ತಲೆಗೆ ಬೀಯರ್ ಬಾಟಲಿಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿಯಲ್ಲಿ ನಡೆದಿದೆ. ರಾತ್ರಿ ಮೂವರು ಗೆಳೆಯರು ಭರ್ಜರಿ ಎಣ್ಣೆ ಪಾರ್ಟಿ ಮಾಡಿ ನಿದ್ರೆ ಹೋಗಿದ್ದು, ನಡು ರಾತ್ರಿಯಲ್ಲಿ ಓರ್ವನ ಹತ್ಯೆಯಾಗಿದೆ. ಪಾರ್ಟಿ ಮಾಡಿದ ಗೆಳೆಯರು ಕಂಗಾಲಾಗಿ ಊರಿಗೆ ಬಂದು ವಿಷಯ ತಿಳಿಸಿದ್ದಾರೆ.
ಯುವಕ ಕೊಲೆಯಾದ ಸ್ಥಳ
ಯುವಕ ಕೊಲೆಯಾದ ಸ್ಥಳ
Updated on

ಮುಂಡರಗಿ: ಯುವಕನೋರ್ವನ ತಲೆಗೆ ಬೀಯರ್ ಬಾಟಲಿಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿಯಲ್ಲಿ ನಡೆದಿದೆ. ರಾತ್ರಿ ಮೂವರು ಗೆಳೆಯರು ಭರ್ಜರಿ ಎಣ್ಣೆ ಪಾರ್ಟಿ ಮಾಡಿ ನಿದ್ರೆ ಹೋಗಿದ್ದು, ನಡು ರಾತ್ರಿಯಲ್ಲಿ ಓರ್ವನ ಹತ್ಯೆಯಾಗಿದೆ. ಪಾರ್ಟಿ ಮಾಡಿದ ಗೆಳೆಯರು ಕಂಗಾಲಾಗಿ ಊರಿಗೆ ಬಂದು ವಿಷಯ ತಿಳಿಸಿದ್ದಾರೆ.

ಸುಭಾಷ್ ನಾಯಕ್ (23) ಕೊಲೆಯಾದ ಯುವಕ. ಕೊಪ್ಪಳ ಜಿಲ್ಲೆ ಹೈದರ್ ನಗರ ತಾಂಡಾದ ನಿವಾಸಿಯಾಗಿದ್ದು, ಬುಧವಾರ ರಾತ್ರಿ ಹೊರವಲಯದಲ್ಲಿ ಮೂವರು ಗೆಳೆಯರು ಸೇರಿ ಪಾರ್ಟಿ ಮಾಡಿದ್ದಾರೆ. ಆದರೆ, ತಡರಾತ್ರಿ ನಡುರಾತ್ರಿ ಎದ್ದು ನೋಡಿದಾಗ ಸುಭಾಷ್ ಕೊಲೆಯಾಗಿದ್ದಾನೆ. ಗಾಬರಿಗೊಂಡ ಯುವಕರು ತಾಂಡಾಕ್ಕೆ ಹೋಗಿ ವಿಷಯ ತಿಳಿಸಿದ್ದಾರೆ.

ಯುವಕ ಕೊಲೆಯಾದ ಸ್ಥಳ
ಬೆಂಗಳೂರು: ಮಗಳನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ ತಂದೆಗೆ ಚಾಕುವಿನಿಂದ ಇರಿದು ಕೊಲೆ, ಯುವಕನ ಬಂಧನ

ಜೊತೆಗಿದ್ದ ಗೆಳೆಯರು ನೀಡುತ್ತಿರುವ ಮಾಹಿತಿ ಗೊಂದಲಕಾರಿಯಾಗಿದ್ದು, ಅನುಮಾನ ಮೂಡಿದೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಫಾರೆನ್ಸಕ್‌ ತಂಡದಿಂದ ಪರಿಶೀಲನೆ ನಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com