ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪೊಲೀಸರ ಚೀತಾ ಬೈಕ್'ಗೆ ಹೈಟೆಕ್ ಟಚ್, MDT-GPS ವ್ಯವಸ್ಥೆ ಅಳವಡಿಕೆಗೆ ಇಲಾಖೆ ಮುಂದು!

ಪೊಲೀಸರ ಚೀತಾ ಬೈಕ್'ಗೆ ಹೈಟೆಕ್ ಟಚ್ ನೀಡಲು ಪೊಲೀಸ್ ಇಲಾಖೆ ಮುಂದಾಗಿದ್ದು, ಮೊಬೈಲ್ ಡೇಟಾ ಟರ್ಮಿನಲ್ (MDT) ಮತ್ತು ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (GPS) ವ್ಯವಸ್ಥೆಯನ್ನು ಅಳವಡಿಸಲು ನಿರ್ಧರಿಸಿದೆ.
Published on

ಬೆಂಗಳೂರು: ಪೊಲೀಸರ ಚೀತಾ ಬೈಕ್'ಗೆ ಹೈಟೆಕ್ ಟಚ್ ನೀಡಲು ಪೊಲೀಸ್ ಇಲಾಖೆ ಮುಂದಾಗಿದ್ದು, ಮೊಬೈಲ್ ಡೇಟಾ ಟರ್ಮಿನಲ್ (MDT) ಮತ್ತು ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (GPS) ವ್ಯವಸ್ಥೆಯನ್ನು ಅಳವಡಿಸಲು ನಿರ್ಧರಿಸಿದೆ.

ಪಾರದರ್ಶಕತೆ ಕಾಯ್ದುಕೊಳ್ಳಲು, ತ್ವರಿತ ಪ್ರತಿಕ್ರಿಯೆ ಸಮಯವನ್ನು ಸುಧಾರಿಸಲು ಮತ್ತು ತುರ್ತು, ಗಸ್ತು ಸಮಯದಲ್ಲಿ ಸಮನ್ವಯವನ್ನು ಹೆಚ್ಚಿಸುವ ಸಲುವಾಗಿ ಅಸ್ತಿತ್ವದಲ್ಲಿರುವ 363 ‘ಚೀತಾ’ ಗಸ್ತು ದ್ವಿಚಕ್ರ ವಾಹನಗಳ ನವೀಕರಿಸಲಾಗುತ್ತಿದ್ದು, ಬೈಕ್ ಗಳಿಗೆ ಎಂಡಿಟಿ ಹಾಗೂ ಜಿಪಿಎಸ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ.

ಇದರಿಂದ ಪೊಲೀಸರು ವಾಹನಗಳಲ್ಲಿಯೇ ಮಾಹಿತಿಯನ್ನು ಪಡೆಯಲು, ಪರಿಶೀಲನೆ ನಡೆಸಲು ಅವಕಾಶವಿರುತ್ತದೆ. ಜಿಪಿಎಸ್ ನ್ಯಾವಿಗೇಶನ್, ಆಡಿಯೋ-ವಿಡಿಯೋ ರೆಕಾರ್ಡಿಂಗ್ ಮತ್ತು ವೀಡಿಯೊ ಕಾನ್ಫರೆನ್ಸಿಂಗ್‌ನಂತಹ ಸೌಲಭ್ಯಗಳನ್ನೂ ಕೂಡ ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಅವರು ಮಾತನಾಡಿ, ಸಂಚಾರ ದಟ್ಟಣೆ ಮತ್ತು ಕಿರಿದಾದ ರಸ್ತೆಗಳಲ್ಲಿ ಹೊಯ್ಸಳ ವಾಹನಗಳು ತಮ್ಮ ಗಮ್ಯಸ್ಥಾನಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಗಸ್ತು ಪಡೆಗಳು ಕೆ.ಜಿ.ಹಳ್ಳಿ, ಡಿಜಿ ಹಳ್ಳಿ ಮತ್ತು ಕಮರ್ಷಿಯಲ್ ಸ್ಟ್ರೀಟ್ ಮತ್ತು ದೂರದ ಪ್ರದೇಶಗಳನ್ನು ತ್ವರಿತವಾಗಿ ತಲುಪಲು ಸಾಧ್ಯವಾಗುತ್ತಿಲ್ಲ. MDT ವ್ಯವಸ್ಥೆಯನ್ನು ಹೊಂದಿರುವ ಚೀತಾ ವಾಹನಗಳು ಈ ಸಮಸ್ಯೆಗೆ ನೆರವಾಗಬಲ್ಲವು. ದ್ವಿಚಕ್ರ ವಾಹನವಾದ್ದರಿಂದ ವೇಗವಾಗಿ ಗಮ್ಯಸ್ಥಾನಗಳನ್ನು ತಲುಪಬಹುದು. ಮುಂದಿನ ದಿನಗಳಲ್ಲಿ ಚೀತಾ ಬೈಕ್‌ಗಳು ಹಿಂದಿನವುಗಳಂತೆ ಥೀಮ್ ಆಧಾರಿತ (ಕಪ್ಪು ಚುಕ್ಕೆಗಳೊಂದಿಗೆ ಬಿಳಿ ಲೇಪಿತ) ಬೈಕ್ ಗಳಂತಿರುವುದಿಲ್ಲ ಎಂದು ಹೇಳಿದ್ದಾರೆ.

ಸಂಗ್ರಹ ಚಿತ್ರ
ಬೆಂಗಳೂರು: ಅಪರಾಧ ತಡೆಗೆ ರಾತ್ರಿ ಪೊಲೀಸ್ ಗಸ್ತು ಹೆಚ್ಚಳ; ನಗರ ಪೊಲೀಸ್ ಆಯುಕ್ತ ಬಿ ದಯಾನಂದ್

241 ಹೊಯ್ಸಳ ವಾಹನಗಳಿಗೆ ಎಂಡಿಟಿ ವ್ಯವಸ್ಥೆ ಅಳವಡಿಸಲಾಗಿದೆ. 100 ಕೋಬ್ರಾ ಟ್ರಾಫಿಕ್ ಟುವ್ಹೀಲರ್ ಗಳಲ್ಲೂ ಎಂಡಿಟಿ ವ್ಯವಸ್ಥೆ ಇರಲಿವೆ. ಹೊಯ್ಸಳ ವಾಹನಗಳಂತೆ ಚೀತಾ ಬೈಕ್‌ಗಳಿಗೆ ನಿರ್ದಿಷ್ಟ ಅಧಿಕಾರಿಗಳನ್ನು ನಿಯೋಜಿಸಲಾಗಿಲ್ಲ. ಚೀತಾ ಬೈಕ್ ಗಳಲ್ಲಿರುವ ಪೊಲೀಸರು ನಿರಂತರವಾಗಿ ಗಸ್ತು ತಿರುಗುವುದಿಲ್ಲ. ಅವರಿಗೆ ನಿಲುಗಡೆ ಪಾಯಿಂಟ್‌ಗಳೂ ಕೂಡ ಇಲ್ಲ. 111 ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಗಳಿಗೆ ಅವುಗಳ ವ್ಯಾಪ್ತಿಯ ಪ್ರದೇಶಕ್ಕೆ ಅನುಗುಣವಾಗಿ ಮೂರರಿಂದ ನಾಲ್ಕು ಚೀತಾ ಗಸ್ತು ಬೈಕ್‌ಗಳನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಉಪ ಪೊಲೀಸ್ ಆಯುಕ್ತ ಶಿವ ಕುಮಾರ್ (ವೈಟ್‌ಫೀಲ್ಡ್ ವಿಭಾಗ) ಅವರು ಮಾತನಾಡಿ, 112 ಗೆ ಕರೆ ಬಂದಾಗ ಹತ್ತಿರದ ಗಸ್ತು ವಾಹನವನ್ನು ಪತ್ತೆಹಚ್ಚಲಾಗುತ್ತದೆ. ಅವರಿಗೆ ಮಾಹಿತಿ ನೀಡಿ ಪರಿಸ್ಥಿತಿಯನ್ನು ಗಮನಿಸುವಂತೆ ಮಾಹಿತಿ ನೀಡಲಾಗುತ್ತದೆ. ಚೀತಾ ಬೈಕ್ ಗಳಿಗೆ MDT ವ್ಯವಸ್ಥೆಯನ್ನು ಅಳವಡಿಸಿದರೆ, ಈ ಪ್ರಕ್ರಿಯೆ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ. ಮಾದಕ ದ್ರವ್ಯ ದಂಧೆ, ಹೊಡೆದಾಟ, ಚೈನ್ ಸ್ನ್ಯಾಚಿಂಗ್ ಮತ್ತು ಮನೆಗಳ್ಳತನದಂತಹ ಸಣ್ಣ ಅಪರಾಧಗಳನ್ನು ತಡೆಯಲು ಇದು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ,

ಎಂಡಿಟಿ, ಜಿಪಿಎಸ್ ಅಲ್ಲದೆ, ಚೀತಾ ಬೈಕ್ ಗಳಿಗೆ ಹೆಚ್ಚುವರಿಯಾಗಿ ಫ್ಲ್ಯಾಶ್‌ಲೈಟ್‌ಗಳು, ಸೈರನ್‌ಗಳು, ವಾಕಿ-ಟಾಕಿಗಳು, ಗ್ಯಾಜೆಟ್ ಹೋಲ್ಡರ್‌ಗಳು ಮತ್ತು ಇತರ ಪರಿಕರಗಳನ್ನು ಒದಗಿಸಲಾಗಿದೆ. ಪ್ರತಿಯೊಂದಕ್ಕೂ ಒಬ್ಬ ಪೊಲೀಸ್ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಇವುಗಳನ್ನು ನಿಯಮಿತ ಸೇವೆಗಳೊಂದಿಗೆ ನಿರ್ವಹಿಸಲಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com