ಮಂಗಳೂರು: ಸಿಡಿಲು ಬಡಿದು ಯುಪಿ ಮೂಲದ ಕಾರ್ಮಿಕ ಸಾವು, ಇಬ್ಬರು ಗಾಯ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಶನಿವಾರ ಸುರಿದ ಭಾರೀ ಮಳೆಗೆ ಸಿಡಿಲು ಬಡಿದು ಉತ್ತರ ಪ್ರದೇಶದ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಶನಿವಾರ ಸುರಿದ ಭಾರೀ ಮಳೆಗೆ ಸಿಡಿಲು ಬಡಿದು ಉತ್ತರ ಪ್ರದೇಶದ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ.

ಉತ್ತರ ಪ್ರದೇಶದ ಚೈನ್‌ಪುರ್ ಗುಲ್ವಾರಾದ 56 ವರ್ಷ ವಯಸ್ಸಿನ ಶ್ರೀಕಿಸನ್ ಮೃತ ವ್ಯಕ್ತಿ. ಬಿಹಾರ ಮೂಲದ 30 ವರ್ಷದ ಮಹದೇವ್ ಮತ್ತು 45 ವರ್ಷದ ಗೌರಿ ಚೌಧರಿ ಗಾಯಗೊಂಡಿದ್ದಾರೆ. ನೂಜಿಬಾಳ್ತಿಲ ಗ್ರಾಮದ ಇಚ್ಲಂಪಾಡಿ ಕುರಿಯಾಲುಕೊಪ್ಪದ ಗುಂಡ್ಯ ನದಿಯಲ್ಲಿ ಮರಳು ತೆಗೆದ ನಂತರ ಕಾರ್ಮಿಕರು ತಮ್ಮ ಶೆಡ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ
ಬೆಂಗಳೂರು: ಸಿಡಿಲು ಬಡಿದು ಮಹಿಳೆ, 48 ಕುರಿಗಳು ಸಾವು; ಜಿಲ್ಲಾಡಳಿತದಿಂದ 6 ಲಕ್ಷ ರೂ. ಪರಿಹಾರ ಘೋಷಣೆ!

ಪಿಪಿ ಜಾಯ್ ಎಂಬ ವ್ಯಕ್ತಿ ಬಳಿ 30 ಸ್ಥಳೀಯ ಮತ್ತು ಇತರ ರಾಜ್ಯಗಳ ಕಾರ್ಮಿಕರೊಂದಿಗೆ ಅವರು ಕೆಲಸ ಮಾಡುತ್ತಿದ್ದರು. ಕೆಲಸದ ನಂತರ ನದಿ ದಂಡೆಯ ಶೆಡ್‌ನಲ್ಲಿ ತಂಗಿದ್ದರು. ಆ ಸಂದರ್ಭದಲ್ಲಿ ಒಂದು ಶೆಡ್ ಗೆ ಸಿಡಿಲು ಬಡಿದು ಶ್ರೀಕಿಸನ್‌ ಸಾವನ್ನಪ್ಪಿದ್ದಾರೆ. ಗಾಯಗೊಂಡ ಇನ್ನಿಬ್ಬರು ಕಾರ್ಮಿಕರನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಕಡಬ ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಮೇ 3 ರಂದು ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com