ಪ್ರತಿಕೂಲ ಹವಾಮಾನ: ಬೆಂಗಳೂರು ತಲುಪಬೇಕಾಗಿದ್ದ 11 ವಿಮಾನಗಳು ಚೆನ್ನೈಗೆ Divert

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುಡುಗು, ಮೋಡ, ಕ್ರಾಸ್‌ವಿಂಡ್‌ಉಂಟಾದ ಪರಿಣಾಮ ಬೆಂಗಳೂರಿಗೆ ಬರಬೇಕಾಗಿದ್ದ 11 ವಿಮಾನಗಳು ಭಾನುವಾರ ರಾತ್ರಿ ಚೆನ್ನೈಗೆ ತಲುಪಿವೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುಡುಗು, ಮೋಡ, ಕ್ರಾಸ್‌ವಿಂಡ್‌ಉಂಟಾದ ಪರಿಣಾಮ ಬೆಂಗಳೂರಿಗೆ ಬರಬೇಕಾಗಿದ್ದ 11 ವಿಮಾನಗಳು ಭಾನುವಾರ ರಾತ್ರಿ ಚೆನ್ನೈಗೆ ತಲುಪಿವೆ. ಅವುಗಳಲ್ಲಿ ನಾಲ್ಕು ಅಂತರಾಷ್ಟ್ರೀಯ ವಿಮಾನಗಳಾಗಿವೆ.

ವಿಮಾನ ನಿಲ್ದಾಣದಲ್ಲಿ ಗುಡುಗು ಸಹಿತ ಮೋಡಗಳಿಂದಾಗಿ ಏರ್ ಟ್ರಾಫಿಕ್ ನಿಯಂತ್ರಣದ ಮೇಲೆ ಪರಿಣಾಮ ಉಂಟುಮಾಡಿದವು. ಇದರಿಂದಾಗಿ ಕ್ರಾಸ್ ವಿಂಡ್ ಉಂಟಾಯಿತು. ಇದು ಗಂಟೆಗೆ 20 ರಿಂದ 25 ಕಿ.ಮೀ ವೇಗ ಹೊಂದಿತ್ತು. ಉತ್ತರ ಮತ್ತು ದಕ್ಷಿಣದ ಎರಡೂ ರನ್‌ವೇಗಳು ಏರ್ ಟ್ರಾಫಿಕ್ ಕಂಟ್ರೋಲ್ ಸಮೀಪದಲ್ಲಿವೆ, ಆ ಅವಧಿಯಲ್ಲಿ ಟೈಲ್‌ವಿಂಡ್‌ಗಳ ಕಾರಣದಿಂದಾಗಿ ವಿಮಾನಗಳು ಇಳಿಯುವುದು ಅಥವಾ ಟೇಕ್ ಆಫ್ ಮಾಡುವುದು ಖಂಡಿತವಾಗಿಯೂ ಸುರಕ್ಷಿತವಲ್ಲ ಎಂದು ಏರೋಡ್ರಮ್ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಭಾರೀ ಹವಾಮಾನ ಮತ್ತು ಮಿಂಚಿನ ಕಾರಣದಿಂದ ರಾತ್ರಿ 11.18 ರಿಂದ 11.54 ರವರೆಗೆ ಲ್ಯಾಂಡಿಂಗ್ ನಿಲ್ಲಿಸಲಾಗಿತ್ತು. ಪ್ರತಿಕೂಲ ಹವಾಮಾನ 11 ವಿಮಾನಗಳ ಮೇಲೆ ಪರಿಣಾಮ ಬೀರಿತು. ಅವುಗಳಲ್ಲಿ ನಾಲ್ಕು ಅಂತರರಾಷ್ಟ್ರೀಯ ವಿಮಾನಗಳಾಗಿವೆ ಎಂದು ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (ಬಿಐಎಎಲ್) ವಕ್ತಾರರು ತಿಳಿಸಿದ್ದಾರೆ. ಮಾರ್ಗ ಬದಲಾವಣೆಯಿಂದಾಗಿ ವಿಮಾನಗಳು ತಮ್ಮ ಗಮ್ಯಸ್ಥಾನ ತಲುಪುವಲ್ಲಿ ಎರಡೂವರೆ ಗಂಟೆಯಿಂದ ಮೂರೂವರೆ ಗಂಟೆಗಳ ವಿಳಂಬವಾಯಿತು. ಬ್ಯಾಂಕಾಕ್‌ನಿಂದ ಥಾಯ್ ವಿಮಾನ (TG 325), ಬ್ಯಾಂಕಾಕ್‌ನಿಂದ ಥಾಯ್ ಲಯನ್ ಏರ್ (SL 216) ಪ್ಯಾರಿಸ್‌ನಿಂದ ಏರ್ ಫ್ರಾನ್ಸ್ (AF 194) ಮತ್ತು ಆಮ್‌ಸ್ಟರ್‌ಡ್ಯಾಮ್‌ನಿಂದ KLM ವಿಮಾನ (KL 879) ಗಳು ಸೇರಿವೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಮುಂಬೈ ವಿಮಾನ ನಿಲ್ದಾಣದಲ್ಲಿ 13.56 ಕೋಟಿ ರೂ. ಮೌಲ್ಯದ ಚಿನ್ನ ಜಪ್ತಿ; 11 ಪ್ರಯಾಣಿಕರ ಬಂಧನ

ಮುಂಬೈ (AI 585) ಮತ್ತು ದೆಹಲಿ (AI 512), ಗೋವಾದಿಂದ ಆಕಾಶ ಏರ್ ವಿಮಾನಗಳು (QP 1397) ಮತ್ತು ಮುಂಬೈ (QP 1341) ನಿಂದ ಏರ್ ಇಂಡಿಯಾ ವಿಮಾನಗಳು ಚೆನ್ನೈಗೆ ಮಾರ್ಗ ಬದಾಲವಣೆ ಮಾಡಿದ ದೇಶೀಯ ವಿಮಾನಗಳಾಗಿವೆ.

ದೆಹಲಿಯಿಂದ ವಿಸ್ತಾರಾ ವಿಮಾನ (ಯುಕೆ 807), ಗೋವಾದಿಂದ ಏರ್ ಅಲಯನ್ಸ್ ವಿಮಾನ (91 548) ಮತ್ತು ಏರ್ ಏಷ್ಯಾ ಇಂಡಿಯಾ ವಿಮಾನವು ಗುವಾಹಟಿಯಿಂದ (I5 821) ಹೊರಟು ಚೆನ್ನೈನಲ್ಲಿ ನಿಲುಗಡೆಯ ನಂತರ ಬೆಂಗಳೂರಿಗೆ ಬರಬೇಕಿತ್ತು. ಈ ಏರ್ ಏಷ್ಯಾ ವಿಮಾನವು ಗುವಾಹಟಿಯಿಂದ ಸಂಜೆ 6.25 ಕ್ಕೆ ಹೊರಟು ರಾತ್ರಿ 9.25 ಕ್ಕೆ ಚೆನ್ನೈ ತಲುಪಿತು. ಇದು ನಿಗದಿತ ಸಮಯಕ್ಕೆ ರಾತ್ರಿ 10.05ಕ್ಕೆ ಚೆನ್ನೈನಿಂದ ಹೊರಟು ರಾತ್ರಿ 11 ಗಂಟೆಗೆ ಬೆಂಗಳೂರು ತಲುಪಬೇಕಿತ್ತು.

ಆದಾಗ್ಯೂ, KIA ಯಲ್ಲಿನ ಹವಾಮಾನದ ಕಾರಣದಿಂದ ಅದನ್ನು ಚೆನ್ನೈಗೆ ಹಿಂತಿರುಗಿಸಲಾಯಿತು ಮತ್ತು ಅಂತಿಮವಾಗಿ 3 ಗಂಟೆ ಮತ್ತು 27 ನಿಮಿಷಗಳ ತಡವಾಗಿ ಸೋಮವಾರ ಬೆಳಗಿನ ಜಾವ 2.27 ಕ್ಕೆ ಬೆಂಗಳೂರು ತಲುಪಿತು, ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್‌ಗಳು ವಿಷಯವನ್ನು ಬಹಿರಂಗಪಡಿಸಿತು.

ಪ್ರತಿಕೂಲ ಹವಾಮಾನದಿಂದಾಗಿ ಶುಕ್ರವಾರ (ಮೇ 10) ಸಹ ಒಟ್ಟು 17 ವಿಮಾನಗಳ ಮಾರ್ಗವನ್ನು ಬದಲಾಯಿಸಬೇಕಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com