ಬೆಂಗಳೂರು: ಲಾಲ್ ಬಾಗ್ ನಲ್ಲಿ ಮೇ 24 ರಿಂದ ಜೂನ್ 10 ರವರೆಗೆ 'ಮಾವು ಮೇಳ'

ಹಣ್ಣಿನ ರಾಜ ಹಣ್ಣಾಗಲು ವಿಳಂಬವಾಗಿದ್ದರೂ ಮತ್ತು ಅದು ಹೆಚ್ಚು ದುಬಾರಿ ಹೊರತಾಗಿಯೂ, ಮಾವು ಮೇಳ ಬೆಂಗಳೂರಿನ ಲಾಲ್ ಬಾಗ್‌ನಲ್ಲಿ ಮೇ 24 ರಿಂದ 18 ದಿನಗಳ ಕಾಲ ನಡೆಯಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹಣ್ಣಿನ ರಾಜ ಹಣ್ಣಾಗಲು ವಿಳಂಬವಾಗಿದ್ದರೂ ಮತ್ತು ಅದು ಹೆಚ್ಚು ದುಬಾರಿ ಹೊರತಾಗಿಯೂ, ಮಾವು ಮೇಳ ಬೆಂಗಳೂರಿನ ಲಾಲ್ ಬಾಗ್‌ನಲ್ಲಿ ಮೇ 24 ರಿಂದ 18 ದಿನಗಳ ಕಾಲ ನಡೆಯಲಿದೆ.

ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ(KSMDMCL) ಮತ್ತು ತೋಟಗಾರಿಕಾ ಇಲಾಖೆಯಿಂದ ಮಾವು ಮೇಳವನ್ನು ಆಯೋಜಿಸಲಾಗಿದೆ.

“ನಾವು ಈ ವರ್ಷ ಯಾವುದೇ ಮಾವು ಪ್ರವಾಸವನ್ನು ಆಯೋಜಿಸುತ್ತಿಲ್ಲ ಏಕೆಂದರೆ ಬೆಳೆ ಕಳಪೆಯಾಗಿದೆ. ಬೇಸಿಗೆ ಕಠಿಣವಾಗಿದೆ. ಆದಾಗ್ಯೂ ರೈತರು ಮತ್ತು ಗ್ರಾಹಕರಿಂದ ಮೇಳಕ್ಕೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ನಾವು ರೈತರೊಂದಿಗೆ ಸಭೆ ನಡೆಸಿದ್ದೇವೆ ಮತ್ತು ಅವರು ಉತ್ತಮ ವ್ಯಾಪಾರ ಮಾಡಲು ಲಾಲ್ ಬಾಗ್‌ನಲ್ಲಿ ಮೇಳವನ್ನು ನಡೆಸಬೇಕೆಂದು ಕೇಳಿಕೊಂಡಿದ್ದರು. ಮೇ 24 ರಿಂದ ಜೂನ್ 10 ರವರೆಗೆ ಮೇಳ ನಡೆಸಲು ನಿರ್ಧರಿಸಿದ್ದೇವೆ ಎಂದು ಕೆಎಸ್‌ಎಂಡಿಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಕೆಂಪೇಗೌಡ ವಿಮಾನ ನಿಲ್ದಾಣದ ಮಾವು ರಫ್ತು ಪ್ರಮಾಣದಲ್ಲಿ ಶೇ.124 ರಷ್ಟು ಹೆಚ್ಚಳ

ಈ ವರ್ಷ ಶೇ.30ರಷ್ಟು ಮಾತ್ರ ಬೆಳೆ ಬಂದಿದೆ. ರಾಜ್ಯದಲ್ಲಿ ಮಾವು ಬೆಳೆಯುವ ಪ್ರದೇಶವು 1.49 ಲಕ್ಷ ಹೆಕ್ಟೇರ್ ಆಗಿದ್ದು, ಸುಮಾರು 12-15 ಲಕ್ಷ ಮೆಟ್ರಿಕ್ ಟನ್ ಇಳುವರಿ ನೀಡುತ್ತದೆ. ಆದರೆ ಈ ವರ್ಷ, ತೀವ್ರ ಬಿಸಿ ಮತ್ತು ಶುಷ್ಕ ಹವಾಮಾನದ ಕಾರಣ, ರಾಜ್ಯದಾದ್ಯಂತ ಎಲ್ಲಾ ಬೆಳೆ ತಳಿಗಳಲ್ಲಿ ಸುಮಾರು ಐದು ಲಕ್ಷ ಮೆಟ್ರಿಕ್ ಟನ್ ಇಳುವರಿ ಬಂದಿದೆ ಎಂದು ಅವರು ಹೇಳಿದ್ದಾರೆ.

ಶೇ. 30 ರಷ್ಟು ಮಾತ್ರ ಬೆಳೆ ಬಂದಿರುವುದರಿಂದ ಹಲವು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಮಾವು ಮೇಳವು ಅವರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಈ ಬಾರಿ ಬಸ್ ವ್ಯವಸ್ಥೆ ಮಾಡಿ ಮಾವು ಪ್ರವಾಸ ಆಯೋಜಿಸುತ್ತಿಲ್ಲ. ಆದರೆ ಪ್ರವಾಸಕ್ಕಾಗಿ ರೈತರು ನೇರವಾಗಿ ಅಪಾರ್ಟ್‌ಮೆಂಟ್ ಸಂಘಗಳು ಮತ್ತು ಖರೀದಿದಾರರನ್ನು ಸಂಪರ್ಕಿಸಿದ್ದಾರೆ ಎಂಬ ವರದಿಗಳು ನಮಗೆ ಸಿಕ್ಕಿವೆ. ರೈತರು ಉತ್ತಮ ಆದಾಯ ಗಳಿಸಲು ಎಲ್ಲ ಮಾರ್ಗಗಳನ್ನು ನೋಡುತ್ತಿದ್ದಾರೆ. ಈ ಬಗ್ಗೆ ರೈತ ಸಂಘಗಳಿಂದ ವರದಿ ಕೇಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಕೋಲಾ, ಧಾರವಾಡ, ಕೊಪ್ಪಳ, ರಾಯಚೂರು, ಚಿತ್ರದುರ್ಗ ಮಾತ್ರವಲ್ಲದೆ ರಾಮನಗರ, ಕೋಲಾರ, ಬೆಳಗಾವಿ ಮತ್ತಿತರ ಕಡೆಯ ರೈತರನ್ನೂ ಮಂಡಳಿ ಸೆಳೆಯುತ್ತಿದೆ. ರೈತರಿಗೆ ಮಾವು ಮತ್ತು ಹಲಸು ಮಾರಾಟ ಮಾಡಲು ಸುಮಾರು 50-60 ಮಳಿಗೆಗಳನ್ನು ವ್ಯವಸ್ಥೆ ಮಾಡಲಾಗುವುದು. ಈ ವರ್ಷ ಮಾವು ಮತ್ತು ಹಲಸಿನ ಎಲ್ಲಾ ತಳಿಗಳು ಮಾರಾಟಕ್ಕೆ ಬರಲಿವೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com