ಸೈಬರ್ ವಂಚನೆ: 15.98 ಲಕ್ಷ ರೂ. ಕಳೆದುಕೊಂಡ ಹಾಸನ ಡಿವೈಎಸ್ಪಿ!

ಸೈಬರ್​​ ವಂಚನೆಗೆ ಸಿಲುಕಿ ಹಾಸನದ ಡಿವೈಎಸ್‌ಪಿ 15.98 ಲಕ್ಷ ರೂ. ಕಳೆದುಕೊಂಡಿದ್ದಾರೆ. ಮೇ 21 ರಂದು ಹಾಸನದ ಸೈಬರ್ ಕ್ರೈಂ, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧಗಳ ಪೊಲೀಸ್ ಠಾಣೆಗೆ ಮುರುಳೀಧರ್ ದೂರು ನೀಡಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಹಾಸನ: ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಎಷ್ಟೇ ಜಾಗೃತಿ ಮೂಡಿಸಲು ಸರ್ಕಾರ ಪ್ರಯತ್ನಿಸುತ್ತಿದ್ದರೂ ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಇದೀಗ ಸೈಬರ್​​ ವಂಚನೆಗೆ ಸಿಲುಕಿ ಹಾಸನದ ಡಿವೈಎಸ್‌ಪಿ 15.98 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಹಾಸನ ಉಪವಿಭಾಗದ ಡಿವೈಎಸ್ಪಿ ಮುರುಳೀಧರ್ ಅವರು ಸೈಬರ್ ವಂಚನೆಗೆ ಸಿಲುಕಿದ್ದು, ಅವರ ಖಾತೆಯಲ್ಲಿದ್ದ ಹಣವು ನೇರವಾಗಿ ಅಪರಿಚಿತ ವ್ಯಕ್ತಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿರುವುದರಿಂದ 15.98 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಮೇ 21 ರಂದು ಹಾಸನದ ಸೈಬರ್ ಕ್ರೈಂ, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧಗಳ ಪೊಲೀಸ್ ಠಾಣೆಗೆ ದೂರು ನೀಡಿರುವ ಮುರುಳೀಧರ್, ಮೇ 20 ರಂದು ತಮ್ಮ ಫೋನ್‌ಗೆ ಸಂದೇಶ ಬಂದ ನಂತರವೇ ವಂಚನೆ ನಡೆದಿರುವುದು ಗೊತ್ತಾಗಿದೆ ಎಂದಿದ್ದಾರೆ.

ಪ್ರಾತಿನಿಧಿಕ ಚಿತ್ರ
ಸೈಬರ್ ವಂಚನೆ; ಅಧಿಕ ಲಾಭದ ಆಮಿಷಕ್ಕೆ ಸಿಲುಕಿ 1.8 ಕೋಟಿ ರೂ. ಕಳೆದುಕೊಂಡ ಧಾರವಾಡದ ವೈದ್ಯ

ಮುರುಳೀಧರ್ ಠೇವಣಿ ಇಟ್ಟಿದ್ದ ಮಡಿಕೇರಿಯ ಬ್ಯಾಂಕ್‌ನಿಂದ ಆನ್‌ಲೈನ್ ಮೂಲಕ 10 ವಹಿವಾಟುಗಳಲ್ಲಿ 15.98 ಲಕ್ಷ ರೂ.ಗಳನ್ನು ವಿವಿಧ ಖಾತೆಗಳಿಗೆ ದುಷ್ಕರ್ಮಿಗಳು ವರ್ಗಾಯಿಸಿದ್ದಾರೆ. ಮುರುಳೀಧರ್ ಶಾಖೆಯ ವ್ಯವಸ್ಥಾಪಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಬ್ಯಾಂಕ್ ಸಿಬ್ಬಂದಿ ಡಿವೈಎಸ್‌ಪಿ ಅವರ ಖಾತೆಯಿಂದ ವಿವಿಧ ಬ್ಯಾಂಕ್‌ಗಳಲ್ಲಿನ ವಿವಿಧ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದನ್ನು ಖಚಿತಪಡಿಸಿದ್ದಾರೆ.

ಸಿಇಎನ್ ಪೊಲೀಸರ ಪ್ರಕಾರ, ಇದು ಹೊಸ ರೀತಿಯ ಸೈಬರ್ ವಂಚನೆಯಾಗಿದ್ದು, ಆನ್‌ಲೈನ್‌ನಲ್ಲಿ ಹಣವನ್ನು ನೇರವಾಗಿ ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com