ಬೆಂಗಳೂರಿನ ಕಾಮರಾಜ್ ರಸ್ತೆ
ಬೆಂಗಳೂರಿನ ಕಾಮರಾಜ್ ರಸ್ತೆ

ಜೂನ್ ತಿಂಗಳಿನಿಂದ ಬೆಂಗಳೂರಿನ ಕಾಮರಾಜ್ ರಸ್ತೆ ಸಂಚಾರಕ್ಕೆ ಮುಕ್ತ!

ಬೆಂಗಳೂರು ಮೆಟ್ರೊ ಕಾಮಗಾರಿಗೆ ಸಂಬಂಧಿಸಿದಂತೆ ಐದು ವರ್ಷಗಳ ಹಿಂದೆ ಬಂದ್ ಆಗಿದ್ದ ಎಂಜಿ ರಸ್ತೆ ಮತ್ತು ಕಬ್ಬನ್ ರಸ್ತೆಗೆ ಸಂಪರ್ಕ ಕಲ್ಪಿಸುವ ಕಾಮರಾಜ್ ರಸ್ತೆ ಜೂನ್ ಮೊದಲಾರ್ಧದಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ.
Published on

ಬೆಂಗಳೂರು: ಬೆಂಗಳೂರು ಮೆಟ್ರೊ ಕಾಮಗಾರಿಗೆ ಸಂಬಂಧಿಸಿದಂತೆ ಐದು ವರ್ಷಗಳ ಹಿಂದೆ ಬಂದ್ ಆಗಿದ್ದ ಎಂಜಿ ರಸ್ತೆ ಮತ್ತು ಕಬ್ಬನ್ ರಸ್ತೆಗೆ ಸಂಪರ್ಕ ಕಲ್ಪಿಸುವ ಕಾಮರಾಜ್ ರಸ್ತೆ ಜೂನ್ ಮೊದಲಾರ್ಧದಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ.

ರಸ್ತೆ ಸಂಚಾರಕ್ಕೆ ಮುಕ್ತವಾಗಿಸುವ ಮೊದಲು ಬಿಎಂಆರ್‌ಸಿಎಲ್ ಬೀದಿ ದೀಪಗಳು ಮತ್ತು ಮುನ್ನೆಚ್ಚರಿಕೆ ಫಲಕಗಳನ್ನು ಅಳವಡಿಸಬೇಕು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ನಾಗವಾರದಿಂದ ಕಾಳೇನ ಅಗ್ರಹಾರದ ಎಂಜಿ ರಸ್ತೆಯ ಅಂಡರ್ ಪಾಸ್ ಒಳಗೆ ಮೆಟ್ರೋ ನಿಲ್ದಾಣವನ್ನು ನಿರ್ಮಿಸಲು 220 ಮೀಟರ್ ಉದ್ದದ ಕಾಮರಾಜ್ ರಸ್ತೆಯನ್ನು 2019ರ ಜೂನ್‌ನಲ್ಲೇ ಮುಚ್ಚಲಾಗಿತ್ತು. ಈ ನಿಲ್ದಾಣವು ಅಸ್ತಿತ್ವದಲ್ಲಿರುವ ಪರ್ಪಲ್ ಲೈನ್‌ನೊಂದಿಗೆ ವರ್ಗಾವಣೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.

ಈ ಹಿಂದೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ರಸ್ತೆಯ ಅರ್ಧದಷ್ಟು ಭಾಗವನ್ನು ತೆರೆಯುವಂತೆ ಏಪ್ರಿಲ್ ಅಂತ್ಯದವರೆಗೆ ಗಡುವು ನೀಡಿತ್ತು. ಆದರೆ ಪ್ರಸ್ತುತ ಇದನ್ನು ಏಕಮುಖ ಮಾರ್ಗವನ್ನಾಗಿ ಮಾಡಲು ಸಂಚಾರಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ಆ ಮೂಲಕ ವಾಹನಗಳು ಎಂಜಿ ರಸ್ತೆಯಿಂದ ಕಬ್ಬನ್ ರಸ್ತೆಯ ಕಡೆಗೆ ಮಾತ್ರ ಪ್ರಯಾಣಿಸಲು ಅನುವು ಮಾಡಿಕೊಡಲಾಗುತ್ತಿದೆ ಎಂದು ಜಂಟಿ ಪೊಲೀಸ್ ಕಮಿಷನರ್ (ಸಂಚಾರ) ಎಂಎನ್ ಅನುಚೇತ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಬೆಂಗಳೂರಿನ ಕಾಮರಾಜ್ ರಸ್ತೆ
ಮನೆಗಳಿಗೆ ಮಳೆ ನೀರು ನುಗ್ಗಿದರೆ ಎಂಜಿನಿಯರ್‌ಗಳೇ ಹೊಣೆ, ರಸ್ತೆ ಗುಂಡಿ ದುರಸ್ತಿಗೆ ವಿಶೇಷ ಸೆಲ್ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

BMRCL ನ ಯಂತ್ರೋಪಕರಣಗಳು ಇನ್ನೂ ಸುತ್ತಲೂ ಇವೆ ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅವುಗಳನ್ನು ತೆಗೆದುಹಾಕಬೇಕಾಗಿದೆ. ಜತೆಗೆ ಬೀದಿ ದೀಪಗಳನ್ನು ಅಳವಡಿಸುವ ಜತೆಗೆ ತಿರುವು ಫಲಕ ಸೇರಿದಂತೆ ಮುನ್ನೆಚ್ಚರಿಕೆ ಫಲಕಗಳನ್ನು ನೀಡಬೇಕಿದೆ. ಇವು ಸಾರ್ವಜನಿಕ ಸುರಕ್ಷತೆಗೆ ಅಗತ್ಯವಾಗಿದ್ದು, ಅವು ಸ್ಥಳದಲ್ಲಿಲ್ಲದ ಹೊರತು ನಾವು ರಸ್ತೆಯನ್ನು ತೆರೆಯಲು ಸಾಧ್ಯವಿಲ್ಲ. ಇದಕ್ಕಾಗಿ ಇನ್ನೂ ಎರಡು ವಾರ ಸಮಯ ತೆಗೆದುಕೊಳ್ಳುತ್ತದೆ ಮತ್ತು ಜೂನ್ ಮೊದಲಾರ್ಧದಲ್ಲಿ ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ.

ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿವೆ. ಟ್ರಾಫಿಕ್ ಪೊಲೀಸರು ನಾವು ಕೈಗೊಳ್ಳಲು ಬಯಸುವ ಕೆಲಸಗಳನ್ನು ಇತರ ಏಜೆನ್ಸಿಗಳ ಮೂಲಕ ಮಾಡಬೇಕಾಗಿದೆ ಎಂದಿದ್ದಾರೆ. ಟಿಎನ್‌ಐಇ ಗುರುವಾರ ಸ್ಥಳಕ್ಕೆ ಭೇಟಿ ನೀಡಿದಾಗ ಕೆಲಸ ನಡೆಯುತ್ತಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com