ಮೇ 27ರಂದು ರಾಜ್ಯಕ್ಕೆ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಭೇಟಿ; ಬೆಳಗಾವಿ, ಬೆಂಗಳೂರಿನಲ್ಲಿ ಪ್ರವಾಸ

ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಮತ್ತು ಅವರ ಪತ್ನಿ ಸುದೇಶ್ ಧನಕರ್ ಮೇ 27 ರಂದು ಬೆಳಗಾವಿ ಮತ್ತು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಅಧಿಕೃತ ಹೇಳಿಕೆ ಪ್ರಕಾರ, ತಮ್ಮ ಒಂದು ದಿನದ ಪ್ರವಾಸದ ಸಮಯದಲ್ಲಿ, ಉಪರಾಷ್ಟ್ರಪತಿ ಬೆಳಗಾವಿಗೆ ಆಗಮಿಸಲಿದ್ದಾರೆ.
ಜಗದೀಪ್ ಧನಕರ್
ಜಗದೀಪ್ ಧನಕರ್

ಬೆಂಗಳೂರು: ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಮತ್ತು ಅವರ ಪತ್ನಿ ಸುದೇಶ್ ಧನಕರ್ ಮೇ 27 ರಂದು ಬೆಳಗಾವಿ ಮತ್ತು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಅಧಿಕೃತ ಹೇಳಿಕೆ ಪ್ರಕಾರ, ತಮ್ಮ ಒಂದು ದಿನದ ಪ್ರವಾಸದ ಸಮಯದಲ್ಲಿ, ಉಪರಾಷ್ಟ್ರಪತಿ ಬೆಳಗಾವಿಗೆ ಆಗಮಿಸಲಿದ್ದಾರೆ.

ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟ್ರಡಿಷನಲ್ ಮೆಡಿಸಿನ್ (ಎನ್‌ಐಟಿಎಂ) ಸಂಸ್ಥಾಪನಾ ದಿನ ಮತ್ತು ಬೆಳಗಾವಿಯ ಕೆಎಲ್‌ಇ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ನಂತರ, ಧನಕರ್ ಅವರು CSIR-NAL ಬೆಂಗಳೂರು ಕ್ಯಾಂಪಸ್‌ಗೆ ಭೇಟಿ ನೀಡಲಿದ್ದು, ಲಘು ಯುದ್ಧ ವಿಮಾನ (ಎಲ್‌ಸಿಎ) ಘಟಕಗಳು ಮತ್ತು ಸಾರಸ್‌ನ ಪ್ರದರ್ಶನವನ್ನು ವೀಕ್ಷಿಸಲಿದ್ದಾರೆ.

ರಾಷ್ಟ್ರೀಯ ಏರೋಸ್ಪೇಸ್ ಲ್ಯಾಬೋರೇಟರೀಸ್ (ಎನ್ಎಎಲ್) ವಿನ್ಯಾಸಗೊಳಿಸಿದ ಲಘು ಸಾರಿಗೆ ವಿಮಾನ ವಿಭಾಗದಲ್ಲಿ ಸಾರಸ್ ಮೊದಲ ಭಾರತೀಯ ಬಹುಪಯೋಗಿ ನಾಗರಿಕ ವಿಮಾನವಾಗಿದೆ.

ಇದರೊಂದಿಗೆ ಧನಕರ್ ಅವರು ರಾಷ್ಟ್ರೀಯ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ (ಎನ್‌ಎಎಲ್) ಕೆಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದೇ ವೇಳೆ ಬೆಂಗಳೂರಿನ ರಾಜಭವನಕ್ಕೂ ಭೇಟಿ ನೀಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com