
ಬೆಂಗಳೂರು: ಲಿಕ್ವಿಡ್ ನೈಟ್ರೋಜನ್ ಪಾನ್ ತಿಂದು 12 ವರ್ಷರ ಬಾಲಕಿಯ ಹೊಟ್ಟೆಯಲ್ಲಿ ರಂದ್ರವಾಗಿತ್ತು ಈ ಜನರಲ್ಲಿ ಆತಂಕ ಸೃಷ್ಟಿಸಿದ್ದು ಇದರ ಬೆನ್ನಲ್ಲೇ ಲಿಕ್ವಿಡ್ ನೈಟ್ರೋಜನ್ ಪಾನ್ ನಿಷೇಧಕ್ಕೆ ಹೋಟೆಲ್ ಅಸೋಸಿಯೇಷನ್ ಮುಂದಾಗಿದೆ,
ಹೋಟೆಲ್ ಅಸೋಸಿಯೇಷನ್ ನಗರದ ಎಲ್ಲಾ ಹೋಟೆಲ್ಗಳ ಮಾಲೀಕರೊಂದಿಗೆ ಸಭೆ ನಡಸಿದ್ದು, ಸಭೆಯಲ್ಲಿ ಲಿಕ್ವಿಡ್ ನೈಟ್ರೋಜನ್ ಪಾನ್ ನಿಷೇಧ ಮಾಡುವ ಕುರಿತು ಚರ್ಚೆ ನಡೆಲಿದೆ. ಸಭೆಯಲ್ಲಿ ನೈಟ್ರೋಜನ್ ಆ್ಯಸಿಡ್ ಪಾನ್ಗಳನ್ನು ಸಂಪೂರ್ಣವಾಗಿ ನಿಷೇಧಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.
ಇದರ ಬೆನ್ನಲ್ಲೇ ಲಿಕ್ವಿಡ್ ನೈಟ್ರೋಜನ್ ಪಾನ್ ನಿಷೇಧಿಸುವಂತೆ ಫೆಡರೇಶನ್ ಆಫ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಚೇಂಬರ್ಸ್ (FKCCI) ಅಸೋಸಿಯೇಷನ್ ಪತ್ರ ಬರೆದಿದೆ.
ನೈಟ್ರೋಜನ್ ಆ್ಯಸಿಡ್ ಪಾನ್ ತಿಂದು ಹೊಟ್ಟೆಯಲ್ಲಿ ರಂಧ್ರ ಪ್ರಕರಣ ಹಿನ್ನೆಲೆಯಲ್ಲಿ, ನೈಟ್ರೋಜನ್ ಪಾನ್ ಸಂಪೂರ್ಣವಾಗಿ ಬ್ಯಾನ್ ಮಾಡಲು ಹೋಟೆಲ್ ಅಸೋಸಿಯೇಷನ್ ನಿರ್ಧಾರ ಮಾಡಿದೆ. ಜೊತೆಗೆ ಎಪ್ಕೆಸಿಸಿಐ ಗೆ ಮನವಿ ಮಾಡಿದ್ದು, ಸರ್ಕಾರದ ಮಟ್ಟದಲ್ಲಿ ಕ್ರಮ ತೆಗೆದುಕೊಳ್ಳುವಂತೆ ಹೋಟೆಲ್ ಅಸೋಸಿಯೇಷನ್ ಮನವಿ ಮಾಡಿದೆ. ಈ ಸಂಬಂಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದಿದೆ.
ಜೊತೆಗೆ ಎಲ್ಲಾ ಹೋಟೆಲ್ ಹಾಗೂ ಪಾನ್ ಬೀಡಾ ಅಂಗಡಿಗಳಿಗೂ ಹೋಟೆಲ್ ಅಸೋಸಿಯೇಷನ್ ಆದೇಶ ನೀಡಿದೆ. ಈ ಆದೇಶ ಮೀರಿಯೂ ಒಂದು ವೇಳೆ ಲಿಕ್ವಿಡ್ ನೈಟ್ರೋಜನ್ ಪಾನ್ ಮಾರಿದ್ದೇ ಆದರೆ ಅಂತಹ ಹೋಟೆಲ್ ಅಥವಾ ಪಾನ್ ಬೀಡಾ ದಂಡ ಆಥವಾ ಪರವಾನಿಗೆ ರದ್ದು ಮಾಡಲು ನಿರ್ಧಾರಿಸಲಾಗಿದೆ.
Advertisement