ಶಾಲೆಗಳಲ್ಲಿ ಮೂಲಸೌಕರ್ಯ ಹೆಚ್ಚಿಸಿ, ಮುಟ್ಟಿನ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಿ: ಸರ್ಕಾರಕ್ಕೆ ಕಾರ್ಯಕರ್ತರ ಆಗ್ರಹ

ಜೀವಸೃಷ್ಟಿಯ ಮೂಲಕ್ರಿಯೆಯಾದ ಮುಟ್ಟು, ಜೀವಜಗತ್ತನ್ನು ಮುಂದುವರಿಸಲು ಅತ್ಯಗತ್ಯವಾದ ಕ್ರಿಯೆ. ಆದರೆ, ಇಂದಿನ ಆಧುನಿಕ ಯುಗದಲ್ಲೂ ಮುಟ್ಟಿನ ವೈಜ್ಞಾನಿಕ ಪ್ರಕ್ರಿಯೆಯ ಬಗ್ಗೆ ಅರಿಯದೆ, ಅದನ್ನು ಒಂದು ಅಶುದ್ಧ ಕ್ರಿಯೆ, ಅನಿಷ್ಟ ಎಂದು ಪರಿಗಣಿಸುವುದುಂಟು. ಈ ನಿಟ್ಟಿನಲ್ಲಿ ವ್ಯಾಪಕ ಅರಿವು ಮೂಡಿಸಲು 2014ರಿಂದ ಪ್ರತಿವರ್ಷ ಮೇ 28ರಂದು ಮುಟ್ಟಿನ ನೈರ್ಮಲ್ಯ ದಿನ ಆಚರಿಸುತ್ತಾ ಬರಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಜೀವಸೃಷ್ಟಿಯ ಮೂಲಕ್ರಿಯೆಯಾದ ಮುಟ್ಟು, ಜೀವಜಗತ್ತನ್ನು ಮುಂದುವರಿಸಲು ಅತ್ಯಗತ್ಯವಾದ ಕ್ರಿಯೆ. ಆದರೆ, ಇಂದಿನ ಆಧುನಿಕ ಯುಗದಲ್ಲೂ ಮುಟ್ಟಿನ ವೈಜ್ಞಾನಿಕ ಪ್ರಕ್ರಿಯೆಯ ಬಗ್ಗೆ ಅರಿಯದೆ, ಅದನ್ನು ಒಂದು ಅಶುದ್ಧ ಕ್ರಿಯೆ, ಅನಿಷ್ಟ ಎಂದು ಪರಿಗಣಿಸುವುದುಂಟು. ಈ ನಿಟ್ಟಿನಲ್ಲಿ ವ್ಯಾಪಕ ಅರಿವು ಮೂಡಿಸಲು 2014ರಿಂದ ಪ್ರತಿವರ್ಷ ಮೇ 28ರಂದು ಮುಟ್ಟಿನ ನೈರ್ಮಲ್ಯ ದಿನ ಆಚರಿಸುತ್ತಾ ಬರಲಾಗುತ್ತಿದೆ.

ಇದರಂತೆ ನಗರದ ಹೊರವಲಯದಲ್ಲಿರುವ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿರುವ ಕಾರ್ಯಕರ್ತರು, ಮುಟ್ಟಿನ ಬಗ್ಗೆ ಇರುವ ಮನಸ್ಥಿತಿಯನ್ನು ವಿವರಿಸಿದರು.

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರವು ಬಾಲಕಿಯರು ಶಿಕ್ಷಣದಿಂದ ವಂಚಿತರಾಗದಂತೆ ತಡೆಯಲು ಶಾಲೆಗಳಲ್ಲಿ ಮೂಲಸೌಕರ್ಯ ಹೆಚ್ಚಿಸಿ, ಮುಟ್ಟಿನ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು.

ಸಂಗ್ರಹ ಚಿತ್ರ
ಬಿಳಿ ಮುಟ್ಟು ಅಥವಾ White Discharge (ಕುಶಲವೇ ಕ್ಷೇಮವೇ)

ಪ್ರಸ್ತುತ ಶಾಲೆಗಳಲ್ಲಿನ ಶೌಚಾಲಯಗಳ ಮೂಲಸೌಕರ್ಯಗಳ ನವೀಕರಿಸುವದು, ನೀರು ಹಾಗೂ ಡಸ್ಟ್‌ಬಿನ್‌ಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಸುನಿತಿ ಸೊಲೊಮನ್ ಫೌಂಡೇಶನ್‌ನ ತರಬೇತಿ ಅಧಿಕಾರಿ ಅಗಾತಾ ಶೇಖರ್ ಅವರು ಮಾತನಾಡಿ, ಆಗಾಗ್ಗೆ ವಿದ್ಯಾರ್ಥಿಗಳಿಗಾಗಿ ಆಗಾಗ್ಗೆ ಮುಟ್ಟಿನ ನೈರ್ಮಲ್ಯದ ಬಗ್ಗೆ ಕಾರ್ಯಕ್ರಮಗಳನ್ನು ನಡೆಸಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಆದರೆ, ಇಂದಿಗೂ ಹೆಣ್ಣುಮಕ್ಕಳು ಈ ವಿಚಾರ ಬಗ್ಗೆ ನಾಚಿಕೆಪಡುವುದುಂಟು. ಅದರ ಬಗ್ಗೆ ಮಾತನಾಡಲು ಮುಂದೆ ಬರುವುದಿಲ್ಲ. ಸಮಾಜದಲ್ಲಿ ಈ ಬಗ್ಗೆ ಹಲವಾರು ತಪ್ಪು ಕಲ್ಪನೆಗಳು ಮತ್ತು ಕಳಂಕಗಳಿವೆ. ಕಾರ್ಯಕ್ರಮಗಳ ವೇಳೆ ಹೆಣ್ಣು ಮಕ್ಕಳ ಕುಟುಂಬಸ್ಥರು, ಸಮುದಾಯಗಳ ಜನರು ಇನ್ನೂ ಹಳೆಯ ಸಂಪ್ರದಾಯಗಳು ಮತ್ತು ನಿರ್ಬಂಧಗಳನ್ನು ಅನುಸರಿಸುತ್ತಿರುವುದು ಕಂಡು ಬರುತ್ತಿದೆ. ಮುಟ್ಟಾಗುತ್ತಿದ್ದಂತೆಯೇ ಅವರನ್ನು ಪ್ರತ್ಯೇಕವಾಗಿ ಇರಿಸುತ್ತಿರುವುದೂ ಕಂಡುಬರುತ್ತಿದೆ. ಮುಟ್ಟಿನ ನೈರ್ಮಲ್ಯ ಪಾಲಿಸುವಲ್ಲಿ ಮಕ್ಕಳು ವಿಫಲರಾಗುತ್ತಿದ್ದಾರೆಂದು ಹೇಳಿದ್ದಾರೆ.

ಮತ್ತೊಬ್ಬ ಕಾರ್ಯಕರ್ತೆ ಅನಿತಾ ರಾಮ್ ಮಾತನಾಡಿ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆಯಿದೆ. ಪ್ಯಾಡ್ ಬದಲಾಯಿಸಲು ಬಾಗಿಲು ಮುಚ್ಚುವ ಸೌಲಭ್ಯ ಇಲ್ಲದಂತಾಗಿದೆ. ಇದರಿಂದಾಗಿ ಬಾಲಕಿಯರು ಶಿಕ್ಷಣವನ್ನೇ ಮದ್ಯದಲ್ಲಿಯೇ ಕೈಬಿಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com