
ಬೆಂಗಳೂರು: ನಾಡಿನಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಅಜ್ಞಾನದ ಕತ್ತಲನ್ನು ಜ್ಞಾನದ ಹಣತೆ ಬೆಳಗುವ ಮೂಲಕ ಹಿಮ್ಮೆಟ್ಟಿಸೋಣ. ಸಂಭ್ರಮ-ಸಡಗರದಿಂದ ದೀಪಾವಳಿಯನ್ನು ಆಚರಿಸೋಣ ಎಂದು ಹೇಳಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅರು ಪೋಸ್ಟ್ ಮಾಡಿ, ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು! ಈ ದೀಪೋತ್ಸವ ನಿಮ್ಮ ಜೀವನವನ್ನು ಜ್ಯೋತಿರ್ಮಯಗೊಳಿಸಲಿ. ಈ ಬೆಳಕಿನ ಹಬ್ಬವು ನಿಮ್ಮ ಬದುಕಲ್ಲಿ ಸಮೃದ್ಧಿ, ಸಂತೋಷ ಮತ್ತು ಸಾಮರಸ್ಯದಿಂದ ಬೆಳಗಲಿ. ದೀಪಾವಳಿಯ ಚೈತನ್ಯವು ಎಲ್ಲರ ನಡುವೆ ಏಕತೆ ಮತ್ತು ಸಹೋದರತ್ವವನ್ನು ಉತ್ತೇಜಿಸಲಿ ಎಂದು ಹಾರೈಸುತ್ತೇನೆಂದು ತಿಳಿಸಿದ್ದಾರೆ.
Advertisement