ಮುಂದಿನ ವರ್ಷ ಮೆಟ್ರೋ ಪ್ರಯಾಣ ದರ ಏರಿಕೆ ಅನಿವಾರ್ಯ; ಡಿಸೆಂಬರ್ 15 ರೊಳಗೆ ಸಮಿತಿ ವರದಿ

ಈ ಮಧ್ಯೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ವಿವಿಧ ವರ್ಗಗಳಿಂದ ರಿಯಾಯಿತಿ ದರ ಕುರಿತು ಪ್ರತಿಕ್ರಿಯೆ ಕೋರಿದ್ದು,100ಕ್ಕೂ ಹೆಚ್ಚು ಜನರು ಸಲಹೆ ನೀಡಿದ್ದಾರೆ.
Namma Metro
ನಮ್ಮ ಮೆಟ್ರೋ ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಮೆಟ್ರೋ ದರ ಪರಿಷ್ಕರಣೆಗಾಗಿ ರಚನೆಯಾಗಿರುವ ದರ ನಿಗದಿ ಸಮಿತಿ ಡಿಸೆಂಬರ್ 15 ರೊಳಗೆ ವರದಿ ಸಲ್ಲಿಸಲಿದ್ದು, 2025 ರ ಆರಂಭದಿಂದ ಮೆಟ್ರೋ ಪ್ರಯಾಣ ದರದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಈ ಮಧ್ಯೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ವಿವಿಧ ವರ್ಗಗಳಿಂದ ರಿಯಾಯಿತಿ ದರ ಕುರಿತು ಪ್ರತಿಕ್ರಿಯೆ ಕೋರಿದ್ದು, 100ಕ್ಕೂ ಹೆಚ್ಚು ಜನರು ಸಲಹೆ ನೀಡಿದ್ದಾರೆ.

ಪ್ರಸ್ತುತ 73 ಕಿ. ಮೀ ವ್ಯಾಪ್ತಿಯ ನಮ್ಮ ಮೆಟ್ರೋದಲ್ಲಿ ಕನಿಷ್ಠ ದರ ರೂ. 10 ಆಗಿದ್ದು, ಗರಿಷ್ಠ ದರ ರೂ. 60 ಆಗಿದೆ. ಸ್ಮಾರ್ಟ್ ಕಾರ್ಡ್ ಬಳಕೆದಾರರು ಅದರ ಮೇಲೆ ಶೇ. 5 ರಷ್ಟು ರಿಯಾಯಿತಿ ಹೊಂದಿರುತ್ತಾರೆ.

ದರ ಏರಿಕೆ ಕುರಿತು ಡಿಸೆಂಬರ್ 15 ರೊಳಗೆ ವರದಿ ಸಲ್ಲಿಸುವಂತೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸತ್ಯೇಂದ್ರ ಪಾಲ್ ಸಿಂಗ್ ಮತ್ತು ಕರ್ನಾಟಕದ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇವಿ ರಮಣ ರೆಡ್ಡಿ ಅವರನ್ನೊಳಗೊಂಡ ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಆರ್ ಥರಾಣಿ ಅಧ್ಯಕ್ಷತೆಯ ಸಮಿತಿಗೆ ಸೂಚಿಸಲಾಗಿದೆ. ಏನು ವರದಿ ನೀಡುತ್ತಾರೋ ಅದರ ಮೇಲೆ ನಿರ್ಧಾರ ಕೈಗೊಳ್ಳಲಾಗುವುದು ಎಂದು BMRCL ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮೆಟ್ರೋ ಹಂತ-1 ಮತ್ತು 2 ಗಾಗಿ ಅಗಾಧವಾದ ಕಾರ್ಯಾಚರಣೆಯ ವೆಚ್ಚ (ಹಿಂದಿನ ಹಣಕಾಸು ವರ್ಷದಲ್ಲಿ ರೂ.14 ಕೋಟಿಗಳಷ್ಟು ಅಲ್ಪಮಟ್ಟದ ಲಾಭ) ಬೃಹತ್ ಬಡ್ಡಿ ಮತ್ತು EIB, ADB, AFD ಮತ್ತು JAICA ಮತ್ತಿತರ ಅಂತರರಾಷ್ಟ್ರೀಯ ಸಾಲದಾತರಿಗೆ ಸಾಲ ಮರುಪಾವತಿ ಮತ್ತು ನಿರ್ವಹಣಾ ವೆಚ್ಚದಲ್ಲಿ ಹೆಚ್ಚಳ ಹಿನ್ನೆಲೆಯಲ್ಲಿ ದರ ಏರಿಸದ ಹೊರತು BMRCL ಕಾರ್ಯಾಚರಣೆ ಸುಗಮವಾಗಿ ಮುಂದುವರಿಸಲು ಮತ್ತು ವಿಸ್ತರಿಸಲು ಅಸಾಧ್ಯವಾಗಿದೆ ಎಂದು ಅವರು ಹೇಳಿದರು.

ಬಿಎಂಆರ್‌ಸಿಎಲ್ ಎಂಡಿ ಎಂ ಮಹೇಶ್ವರ್ ರಾವ್ ಮಾತನಾಡಿ, ಸಮಿತಿಯು ಇನ್ನೂ ಕೆಲಸ ಮಾಡುತ್ತಿದೆ. ಸದ್ಯಕ್ಕೆ ಸೂಚಿಸಬಹುದಾದ ಯಾವುದೇ ದರ ನಿಗದಿ ಬಗ್ಗೆ ನಾವು ಹೇಳಲು ಸಾಧ್ಯವಿಲ್ಲ ಎಂದರು.

Namma Metro
2026ರ ವೇಳೆಗೆ ಬೆಂಗಳೂರಿನಲ್ಲಿ 175 ಕಿ.ಮೀ ಮೆಟ್ರೊ ರೈಲು ಸೇವೆ: ಡಿ ಕೆ ಶಿವಕುಮಾರ್

ಪ್ರಸ್ತಾವಿತ ಪರಿಷ್ಕರಣೆಗೆ ಕಳೆದ ತಿಂಗಳು ಸಾರ್ವಜನಿಕರಿಂದ ಕೇಳಿದ ಪ್ರತಿಕ್ರಿಯೆ ಕುರಿತು ವಿವರಿಸಿದ ಮತ್ತೋರ್ವ ಅಧಿಕಾರಿ. 100ಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ. ಅವರಲ್ಲಿ ಕೆಲವರು ದರ ಹೆಚ್ಚಳವನ್ನು ವಿರೋಧಿಸಿದ್ದಾರೆ ಮತ್ತು ಕೆಲವರು ಹೆಚ್ಚಳ ಅಗತ್ಯವೆಂದು ಒಪ್ಪಿಕೊಂಡಿದ್ದಾರೆ. ಪ್ರಯಾಣ ದರದಲ್ಲಿ ರಿಯಾಯಿತಿ ನೀಡುವಂತೆ ಮಹಿಳೆಯರು ಪತ್ರ ಬರೆದಿದ್ದಾರೆ. ದಿವ್ಯಾಂಗರು ಪ್ರಯಾಣ ದರದಲ್ಲಿ ರಿಯಾಯಿತಿ ಕೋರಿದ್ದಾರೆ. ಕೆಲವು ಸರ್ಕಾರಿ ನೌಕರರು ಕೆಲವು ರೀತಿಯ ರಿಯಾಯಿತಿ ಕೇಳಿ ಪತ್ರ ಬರೆದಿದ್ದಾರೆ. ವಿದ್ಯಾರ್ಥಿಗಳು ವಿಶೇಷ ಪಾಸ್‌ಗಳನ್ನು ನೀಡಬೇಕೆಂದು ಬಯಸುತ್ತಾರೆ ಆದರೆ ಸಾಮಾನ್ಯ ಜನರು ರಿಯಾಯಿತಿ ದರದ ಮಾಸಿಕ ಪಾಸ್‌ ನೀಡುವಂತೆ ವಿನಂತಿಸಿದ್ದಾರೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com