ಬೆಂಗಳೂರು: ಕುಂಡಗಳಲ್ಲಿ ಗಾಂಜಾ ಬೆಳೆದ ದಂಪತಿ ; ರೀಲ್ಸ್ ಮಾಡಿ ಪೊಲೀಸರ ಬಲೆಗೆ ಬಿದ್ದ ಜೋಡಿ!

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಊರ್ಮಿಳಾ ಕುಮಾರಿ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ವಿಡಿಯೋ ಮತ್ತು ಫೋಟೋ ಪೋಸ್ಟ್ ಮಾಡುತ್ತಿದ್ದರು.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಹೂವಿನ ಕುಂಡಗಳಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ದಂಪತಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಎಂಎಸ್‌ಆರ್ ನಗರ 3ನೇ ಮೇನ್‌ನಲ್ಲಿ ವಾಸವಾಗಿರುವ ಸಿಕ್ಕಿಂನ ಕೆ ಸಾಗರ್ ಗುರುಂಗ್ (37) ಮತ್ತು ಅವರ ಪತ್ನಿ ಊರ್ಮಿಳಾ ಕುಮಾರಿ (38) ಬಂಧಿತರಿ. ಈ ಜೋಡಿ ಫಾಸ್ಟ್ ಫುಡ್ ಜಾಯಿಂಟ್ ನಡೆಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಊರ್ಮಿಳಾ ಕುಮಾರಿ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ವಿಡಿಯೋ ಮತ್ತು ಫೋಟೋ ಪೋಸ್ಟ್ ಮಾಡುತ್ತಿದ್ದರು. ಇತ್ತೀಚೆಗೆ ಎಂಎಸ್‌ಆರ್ ನಗರದ ತಮ್ಮ ಮನೆಯಲ್ಲಿ ಹೂವಿನ ಕುಂಡಗಳಲ್ಲಿ ಬೆಳೆಯುತ್ತಿರುವ ವಿವಿಧ ಸಸ್ಯಗಳ ವಿಡಿಯೋ ಮತ್ತು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಬಾಲ್ಕನಿಯಲ್ಲಿ ಅಲಂಕಾರಿಕ ಗಿಡಗಳಿರುವ ಹೂವಿನ ಕುಂಡಗಳನ್ನು ಇಡಲಾಗಿತ್ತು.

17 ಕುಂಡಗಳ ಪೈಕಿ ಎರಡು ಕುಂಡಗಳಲ್ಲಿ ಗಾಂಜಾ ಬೆಳೆದಿದ್ದರು. ತಮ್ಮ ಪೋಸ್ಟ್‌ ಮೂಲಕ ಊರ್ಮಿಳಾ ಗಾಂಜಾ ಬೆಳೆಯುತ್ತಿರುವುದನ್ನು ಬಹಿರಂಗಪಡಿಸಿದ್ದಾರೆ. ಅವರ ಸಾಮಾಜಿಕ ಮಾಧ್ಯಮ ಖಾತೆ ಅನುಯಾಯಿಗಳು ಈ ವಿಷಯವನ್ನು ಪೊಲೀಸರ ಮುಂದೆ ತಂದಿದ್ದಾರೆ. ವಿಚಾರಣೆಯ ವೇಳೆ, ದಂಪತಿ ಗಾಂಜಾವನ್ನು ಮಾರಾಟ ಮಾಡಲು ಮತ್ತು ವೇಗವಾಗಿ ಹಣ ಗಳಿಸಲು ಬೆಳೆದಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ದಂಪತಿ ಮೊದಲ ಮಹಡಿಯಲ್ಲಿ ವಾಸವಾಗಿದ್ದು, ಫಾಸ್ಟ್ ಫುಡ್ ಜಾಯಿಂಟ್ ನೆಲ ಮಹಡಿಯಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಮಧ್ಯಾಹ್ನ ಅವರನ್ನು ಬಂಧಿಸಲಾಗಿದ್ದು, ಪೊಲೀಸರು ಸುಮಾರು 54 ಗ್ರಾಂ ತೂಕದ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.

Representational image
62 ಅಬಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಗಾಂಜಾ ಪತ್ತೆ

ಪೊಲೀಸರು ಆಗಮಿಸಿದಾಗ, ಫಾಸ್ಟ್ ಫುಡ್ ಜಾಯಿಂಟ್‌ನಲ್ಲಿದ್ದ ಆರೋಪಿಯ ಸಂಬಂಧಿಯೊಬ್ಬರು ಊರ್ಮಿಳಾ ಅವರನ್ನು ಎಚ್ಚರಿಸಿದರು. ಪೊಲೀಸರು ಅವರ ಮನೆಗೆ ಪ್ರವೇಶಿಸುವ ವೇಳೆಗೆ, ಅವಳು ಗಿಡಗಳನ್ನು ಕಿತ್ತು ಕಸದ ಬುಟ್ಟಿಗೆ ಎಸೆದಿದ್ದಳು.

ಅವರು ಸಕ್ರಿಯ ಪೆಡ್ಲರ್‌ಗಳಾಗಿದ್ದರೆ ಎಂಬ ಬಗ್ಗೆ ನಾವು ಇನ್ನೂ ಪರಿಶೀಲಿಸುತ್ತಿದ್ದೇವೆ. ವಶಪಡಿಸಿಕೊಂಡಿರುವ ದಂಪತಿಯ ಮೊಬೈಲ್ ಫೋನ್‌ಗಳನ್ನು ಹೆಚ್ಚಿನ ಮಾಹಿತಿ ಪಡೆಯಲು ವಿಶ್ಲೇಷಿಸಲಾಗುತ್ತದೆ. ಪೊಲೀಸರ ತಂಡ ಅವರ ಮನೆ ಮೇಲೆ ದಾಳಿ ನಡೆಸಿದಾಗ, ದಂಪತಿಗಳು ಗಾಂಜಾ ಗಿಡಗಳನ್ನು ಬೆಳೆಸಿಲ್ಲ ಎಂದು ನಿರಾಕರಿಸಿದರು.

ಗಿಡಗಳನ್ನು ಕಿತ್ತು ಕಸದ ಬುಟ್ಟಿಗೆ ಎಸೆದಿದ್ದರು. ಆದಾಗ್ಯೂ, ಕೆಲವು ಎಲೆಗಳು ಇನ್ನೂ ಮಡಕೆಯೊಳಗೆ ಇದ್ದವು. ಆರಂಭದಲ್ಲಿ, ಊರ್ಮಿಳಾ ಕುಮಾರಿ ಅಂತಹ ಯಾವುದೇ ವೀಡಿಯೊಗಳು ಅಥವಾ ಚಿತ್ರಗಳನ್ನು ಪೋಸ್ಟ್ ಮಾಡಿಲ್ಲ ಎಂದು ನಿರಾಕರಿಸಿದರು, ಆದರೆ ನಾವು ಅವರ ಫೋನ್ ಪರಿಶೀಲಿಸಿದಾಗ, ಅವರು ಅಕ್ಟೋಬರ್ 18 ರಂದು ವೀಡಿಯೊ ಮತ್ತು ಛಾಯಾಚಿತ್ರಗಳನ್ನು ಪೋಸ್ಟ್ ಮಾಡಿರುವುದು ದೃಢಪಟ್ಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಂಪತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪೊಲೀಸರು ಅವರ ವಿರುದ್ಧ ಎನ್‌ಡಿಪಿಎಸ್ ಪ್ರಕರಣ ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com