ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ಎಸ್ ಸುರೇಶ್ ಬಾಬು ನಿಧನ

1999 ರಲ್ಲಿ ಗೌರವಾನ್ವಿತ ಸೇವೆಗಾಗಿ ಪೊಲೀಸ್ ಪದಕ ಮತ್ತು 2005 ರಲ್ಲಿ ವಿಶೇಷ ಸೇವೆಗಳಿಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ಪಡೆದಿದ್ದರು.
Former ADGP Suresh BABU
ಮಾಜಿ ಎಡಿಜಿಪಿ ಸುರೇಶ್ ಬಾಬು
Updated on

ಬೆಂಗಳೂರು: ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಕೆ.ಎಸ್.ಸುರೇಶ್ ಬಾಬು ನಿಧನರಾಗಿದ್ದಾರೆ. ಅವರು 1974 ರಿಂದ 2006 ರವರೆಗೆ ಭಾರತೀಯ ಪೊಲೀಸ್ ಸೇವೆಯ (IPS) ಕರ್ನಾಟಕ ಕೇಡರ್‌ನಲ್ಲಿ ಸೇವೆ ಸಲ್ಲಿಸಿದ್ದರು.

ತಮ್ಮ ವಿಶಿಷ್ಟ ವೃತ್ತಿಜೀವನದಲ್ಲಿ ಐಜಿಪಿ (ದಕ್ಷಿಣ ವಲಯ, ಮೈಸೂರು), ಐಜಿಪಿ (ಪಶ್ಚಿಮ ವಲಯ ಮಂಗಳೂರು) ಐಜಿಪಿ (ಗುಪ್ತಚರ), ಬೆಂಗಳೂರು ನಗರದಲ್ಲಿ ಜಂಟಿ ಪೊಲೀಸ್ ಕಮಿಷನರ್ (ಅಪರಾಧ) ಮತ್ತು ಮೈಸೂರಿನಲ್ಲಿರುವ ಪೊಲೀಸ್ ಅಕಾಡೆಮಿಯ ನಿರ್ದೇಶಕ ಸ್ಥಾನ ಸೇರಿದಂತೆ ಹಲವಾರು ಪ್ರಮುಖ ಹುದ್ದೆಗಳನ್ನು ಸುರೇಶ್ ಬಾಬು ಅಲಂಕರಿಸಿದ್ದರು.

1999 ರಲ್ಲಿ ಗೌರವಾನ್ವಿತ ಸೇವೆಗಾಗಿ ಪೊಲೀಸ್ ಪದಕ ಮತ್ತು 2005 ರಲ್ಲಿ ವಿಶೇಷ ಸೇವೆಗಳಿಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ಪಡೆದಿದ್ದರು.

ನಿವೃತ್ತಿಯ ನಂತರ, ಕನ್ನಡ ದಿನಪತ್ರಿಕೆಯೊಂದರಲ್ಲಿ ಪೋಲೀಸ್‌ನ ವಿವಿಧ ಅಂಶಗಳ ಕುರಿತು ಜನಪ್ರಿಯ ಸಾಪ್ತಾಹಿಕ ಅಂಕಣವನ್ನು ಬರೆಯುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವುದನ್ನು ಮುಂದುವರೆಸಿದ್ದರು. ಬೆಂಗಳೂರಿನ NSLUSI, ಕರ್ನಾಟಕ ನ್ಯಾಯಾಂಗ ಅಕಾಡೆಮಿ, ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ, ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜು ಮತ್ತು ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿ, ಅಲಯನ್ಸ್ ಕಾನೂನು ವಿಶ್ವವಿದ್ಯಾಲಯದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದರು.

ಸುರೇಶ್ ಬಾಬು ಅವರು ಪತ್ನಿ ಶಾಮಲಾ, ಪುತ್ರಿಯರಾದ ಶಾಲಿನಿ ಮತ್ತು ಸವಿತಾ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com