Virtopsy: ವರ್ಚುವಲ್ ಶವಪರೀಕ್ಷೆಗೆ ತಂತ್ರಜ್ಞಾನ ಅಳವಡಿಕೆಗೆ ವಿಕ್ಟೋರಿಯಾ ಆಸ್ಪತ್ರೆ ಮುಂದು..!

ವರ್ಚುವಲ್ ಶವಪರೀಕ್ಷೆ ಅಥವಾ ವಿರ್ಟೋಪ್ಸಿ ಎಂದರೆ ಮರಣಿಸಿದ ವ್ಯಕ್ತಿಯ ದೇಹವನ್ನು ಕತ್ತರಿಸದೆ ತಂತ್ರಜ್ಞಾನದ ಮೂಲಕ ಸ್ಕ್ಯಾನ್ ಮಾಡುವುದಾಗಿದೆ. ಈ ಪರೀಕ್ಷೆಯನ್ನು ಹೈಟೆಕ್ ಡಿಜಿಟಲ್ ಎಕ್ಸ್-ರೇ ಮತ್ತು ಸಿಟಿ ಸ್ಕ್ಯಾನ್ ಸಹಾಯದಿಂದ ಮಾಡಲಾಗುತ್ತದೆ.
ವಿಕ್ಟೋರಿಯಾ ಆಸ್ಪತ್ರೆ
ವಿಕ್ಟೋರಿಯಾ ಆಸ್ಪತ್ರೆ
Updated on

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಐತಿಹಾಸಿಕ ವಿಕ್ಟೋರಿಯಾ ಆಸ್ಪತ್ರೆಯು ಮೃತದೇಹಗಳನ್ನು ತೆರೆಯದೆಯೇ ಮಾಡುವ ವರ್ಚುವಲ್ ಶವಪರೀಕ್ಷೆ ಎಂದು ಕರೆಯಲ್ಪಡುವ ಅತ್ಯಾಧುನಿಕ ವಿರ್ಟೋಪ್ಸಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದು, ಈ ಮೂಲಕ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡ ದಕ್ಷಿಣ ಭಾರತ ಮೊದಲ ಸರ್ಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ವರ್ಚುವಲ್ ಶವಪರೀಕ್ಷೆ ಅಥವಾ ವಿರ್ಟೋಪ್ಸಿ ಎಂದರೆ ಮರಣಿಸಿದ ವ್ಯಕ್ತಿಯ ದೇಹವನ್ನು ಕತ್ತರಿಸದೆ ತಂತ್ರಜ್ಞಾನದ ಮೂಲಕ ಸ್ಕ್ಯಾನ್ ಮಾಡುವುದಾಗಿದೆ. ಈ ಪರೀಕ್ಷೆಯನ್ನು ಹೈಟೆಕ್ ಡಿಜಿಟಲ್ ಎಕ್ಸ್-ರೇ ಮತ್ತು ಸಿಟಿ ಸ್ಕ್ಯಾನ್ ಸಹಾಯದಿಂದ ಮಾಡಲಾಗುತ್ತದೆ. ಸಾಂಪ್ರದಾಯಿಕ ಮರಣೋತ್ತರ ಪರೀಕ್ಷೆಗೆ ಹೋಲಿಸಿದರೆ ಇದು ಈ ಮರಣೋತ್ತರ ಪರೀಕ್ಷೆಗೆ ತಗಲುವ ಸಮಯವನ್ನು ಕಡಿಮೆಯಾಗಿರುತ್ತದೆ.

ಬರಿಗಣ್ಣಿನಲ್ಲಿ ಮಾಡುವ ಶವಪರೀಕ್ಷೆಗಳಲ್ಲಿ ಸಣ್ಣ ಮುರಿತಗಳು ಮತ್ತು ಗಾಯಗಳನ್ನು ಗುರುತಿಸುವುದು ಕಷ್ಟ. ಆದರೆ, ವಿಕಿರಣಶಾಸ್ತ್ರದ ಪರೀಕ್ಷೆಯು ಬರಿಗಣ್ಣಿಗೆ ಕಾಣದ ಮುರಿತಗಳು ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ಇದು ಪತ್ತೆ ಮಾಡುತ್ತದೆ. ಇಲ್ಲದೆ, ಮೂಳೆಗಳಲ್ಲಿನ ಕೂದಲಗಳನ್ನೂ ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಈಗಾಗಲೇ ದೆಹಲಿಯ AIIMS ಹಾಗೂ ಮೇಘಾಲಯದ NEIGRIHMS ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ನಗರದ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಕೂಡ ಈ ಸೌಲಭ್ಯವನ್ನು ಹೊಂದಿದೆ.

ವಿಕ್ಟೋರಿಯಾ ಆಸ್ಪತ್ರೆಯ ಉನ್ನತ ಅಧಿಕಾರಿಯೊಬ್ಬರು ಮಾತನಾಡಿ, ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆಯು ಮುಕ್ತಾಯದ ಹಂತದಲ್ಲಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯು ವರ್ಚುವಲ್ ಶವಪರೀಕ್ಷೆಯನ್ನು ಪರಿಚಯಿಸಲು ಉತ್ಸುಕವಾಗಿದೆ ಎಂದು ಹೇಳಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆ
ಮಾನವೀಯತೆ ಮರೆತ ವಿಕ್ಟೋರಿಯಾ ಆಸ್ಪತ್ರೆ: ರೋಗಿಗಳು ನರಳಾಡುತ್ತಿದ್ದರೂ ದಾಖಲಿಸಿಕೊಳ್ಳದ ಸಿಬ್ಬಂದಿ, ಜನರಿಂದ ಆಕ್ರೋಶ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರತಿ ವರ್ಷ 3,000 ಕ್ಕೂ ಹೆಚ್ಚು ಮರಣೋತ್ತರ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ವರ್ಚುವಲ್ ಶವಪರೀಕ್ಷೆಯು ವೇಗವಾಗಿ ಪರೀಕ್ಷಿಸಲು ಸಹಾಯ ಮಾಡುತ್ತದೆ. ಆರಂಭಿಕ ಹಂತದಲ್ಲಿ, ರಸ್ತೆ ಅಪಘಾತ ಮತ್ತು ಆಕಸ್ಮಿಕ ಬಿದ್ದು ಸಾವನ್ನಪ್ಪಿದ ಪ್ರಕರಣಗಳಲ್ಲಿ ಮಾತ್ರ ಈ ಶವಪರೀಕ್ಷೆಯನ್ನು ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಅಪಘಾತ ಅಥವಾ ಆಕಸ್ಮಿಕವಾಗಿ ಬಿದ್ದ ಪ್ರಕರಣಗಳಲ್ಲಿ ಆರಂಭಿಕ ಹಂತದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದವರ ಸಂಖ್ಯೆ ಇಲ್ಲಿ ಹೆಚ್ಚಾಗಿರುತ್ತದೆ. ಹೀಗಾಗಿ ಈ ಪ್ರಕರಣಗಳಲ್ಲಿ ಯಾವುದೇ ಒಳಸಂಚುಗಳು ಇರುವುದಿಲ್ಲ. ಸಾವಿಗೆ ಕಾರಣ ಪತ್ತೆ ಮಾಡಲು ಶವಪರೀಕ್ಷೆಯ ಅಗತ್ಯವಿರುತ್ತದೆ ಎಂದು ಹೇಳಿದ್ದಾರೆ.

ಕೊಲೆ, ಆತ್ಮಹತ್ಯೆ ಮತ್ತು ವರದಕ್ಷಿಣಿ ಕಿರುಕುಳ ಪ್ರಕರಣಗಳಲ್ಲಿ ಸಾಂಪ್ರದಾಯಿಕ ಶವಪರೀಕ್ಷೆಯ ವಿಧಾನದ ಅಗತ್ಯವಿರುತ್ತದೆ. ಆದರೂ, ತಂತ್ರಜ್ಞಾನ ಸುಧಾರಿಸಿರುವುದರಿಂದ ಹಾಗೂ ವರ್ಚುವಲ್ ಶವಪರೀಕ್ಷೆಯಲ್ಲಿ ನಿಖರತೆ ಇರುವುದರಿಂದ ಮುಂದಿನ ದಿನಗಳಲ್ಲಿ ಈ ಪ್ರಕರಣಗಳಲ್ಲೂ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

ಧಾರ್ಮಿಕ ನಂಬಿಕೆಗಳಿಂದ ಹಲವರು ಮರಣೋತ್ತರ ಪರೀಕ್ಷೆಗೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಆದರೆ, ಕಾನೂನು ಪ್ರಕಾರ ವೈದ್ಯರು ಶವಪರೀಕ್ಷೆ ನಡೆಸಬೇಕಿತ್ತು. ಈ ತಂತ್ರಜ್ಞಾನ ನೊಂದ ಕುಟುಂಬಗಳಿಗೆ ತುಸು ಸಮಾಧಾನವನ್ನು ನೀಡಲಿದೆ. ಇದಲ್ಲದೆ, ವರ್ಚುವಲ್ ಶವಪರೀಕ್ಷೆಯು ಸಂಶೋಧನೆಗೂ ಸಹಾಯ ಮಾಡುತ್ತದೆ, ವೈದ್ಯರೂ ಕೂಡ ಇದರ ಪರವಾಗಿದ್ದಾರೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com