ರಾಮನಗರ: ದುರಾದೃಷ್ಟ ಎಂಬಂತೆ ರಾಮನಗರ ಜಿಲ್ಲೆಯಲ್ಲಿ 78 ವರ್ಷದ ಮಹಿಳೆಯೊಬ್ಬರನ್ನು 45 ನಿಮಿಷಗಳ ಅಂತರದಲ್ಲಿ ಎರಡು ಬಾರಿ ದರೋಡೆಗೊಳಗಾಗಿದ್ದಾರೆ.
ಪುಟ್ಟಮ್ಮ ಎಂಬುವರು 1.5 ಲಕ್ಷ ರು. ಮೌಲ್ಯದ ತಮ್ಮ 30 ಗ್ರಾಂ ಚಿನ್ನದ ಸರ ಕಳೆದುಕೊಂಡಿದ್ದಾರೆ. ಪುಟ್ಟಮ್ಮ ಸಾತನೂರು ರಸ್ತೆಯ ಕನಕನಗರ ನಿವಾಸಿ. ಶನಿವಾರ ಸಂಜೆ 4.30ರಿಂದ 5.15ರ ನಡುವೆ ಅಪ್ಪಗೆರೆಯ ದೇವಸ್ಥಾನವೊಂದಕ್ಕೆ ಒಂಟಿಯಾಗಿ ತೆರಳುತ್ತಿದ್ದ ವೇಳೆ ಆಕೆಯ ಮೇಲೆ ದಾಳಿ ನಡೆದಿದೆ.
ಸ್ಕೂಟರ್‌ನಲ್ಲಿ ಬಂದ ದುಷ್ಕರ್ಮಿಯೊಬ್ಬ ಆಕೆಯನ್ನು ಅಡ್ಡಗಟ್ಟಿ ಆಕೆಯ ಸರವನ್ನು ಕಸಿದುಕೊಳ್ಳಲು ಯತ್ನಿಸಿದ್ದಾನೆ. ವೇಳೆ ಸಂತ್ರಸ್ತೆ ಇನ್ನರ್ಧವನ್ನು ಹಿಡಿದುಕೊಂಡಿದ್ದಾರೆ. ಆರೋಪಿ ಅರ್ಧದಷ್ಟು ಸರದೊಂದಿಗೆ ಪರಾರಿಯಾಗಿದ್ದಾನೆ. ಅಷ್ಟರಲ್ಲಾಗಲೇ ಬೈಕ್‌ನಲ್ಲಿ ಬಂದ ಮತ್ತೋರ್ವ ವ್ಯಕ್ತಿ ಪುಟ್ಟಮ್ಮನನ್ನು ತನ್ನ ವಾಹನದಲ್ಲಿ ಕರೆದುಕೊಂಡು ಹೋಗಿ ದರೋಡೆ ಮಾಡಿದ ದುಷ್ಕರ್ಮಿಯನ್ನು ಹಿಂಬಾಲಿಸಿ ಹಿಡಿಯಲು ಮುಂದಾದರು.
ಆರೋಪಿಗಾಗಿ ಹುಡುಕಾಟ ನಡೆಸಿದಂತೆ ನಟಿಸಿ, ಬೈಕ್‌ನಲ್ಲಿ ಬಂದ ವ್ಯಕ್ತಿ ಪುಟ್ಟಮ್ಮ ಅವರನ್ನು ಆಕೆಯ ಮನೆಗೆ ಸಮೀಪವಿರುವ ಹೌಸಿಂಗ್ ಬೋರ್ಡ್ ಹಿಂಭಾಗದ ಸಿಎಂಸಿ ಟೌನ್‌ನಲ್ಲಿ ಡ್ರಾಪ್ ಮಾಡಿದ್ದಾನೆ. ಆಕೆ ಅವನಿಗೆ ಧನ್ಯವಾದ ಹೇಳುತ್ತಿರುವಾಗ, ಆ ವ್ಯಕ್ತಿ ಸರದ ಉಳಿದ ಅರ್ಧವನ್ನು ಕಿತ್ತುಕೊಂಡಿದ್ದಾನೆ. ಪುಟ್ಟಮ್ಮನ ಚಿನ್ನದ ಬಳೆಗಳು ಮತ್ತು ಕಿವಿಯೋಲೆಗಳನ್ನು ಕೊಡುವಂತೆ ಕೇಳಿದ್ದಾನೆ. ಕೈಯ್ಯಲ್ಲಿ ಸ್ವಲ್ಪ ದ್ರವವಿರುವ ಪ್ಲಾಸ್ಟಿಕ್ ಬಾಟಲಿಯನ್ನು ಹಿಡಿದುಕೊಂಡು ಆಸಿಡ್ ಎರಚುವುದಾಗಿ ಬೆದರಿಕೆ ಹಾಕಿದ್ದಾನೆ. ವೃದ್ಧೆ ಸಹಾಯಕ್ಕಾಗಿ ಕಿರುಚಲು ಆರಂಭಿಸಿದಾಗ ಆರೋಪಿ ಆಕೆಯ ಮುಖಕ್ಕೆ ದ್ರವ ಎರಚಿ ಪರಾರಿಯಾಗಿದ್ದಾರೆ. ಅದೃಷ್ಟವಶಾತ್ ಅದು ಸೀಮೆಎಣ್ಣೆ ಎಂದು ತಿಳಿದುಬಂದಿದೆ. ಆಕೆಯ ಅಳಲು ಕೇಳಿದ ಸ್ಥಳೀಯರು ಆಕೆಯ ಸಹಾಯಕ್ಕೆ ಧಾವಿಸಿ ಆಕೆಯ ಮಗ ಶ್ರೀನಿವಾಸ್‌ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ನನ್ನ ತಾಯಿ ಆಘಾತಕ್ಕೊಳಗಾಗಿದ್ದಾರೆ. ಅದೃಷ್ಟವಶಾತ್ ಆ ದ್ರವ ಸೀಮೆಎಣ್ಣೆಯಾಗಿತ್ತು. ಮೊದಲ ದುಷ್ಕರ್ಮಿ ಸ್ಕೂಟರ್‌ನಲ್ಲಿ ಬಂದಿದ್ದರೆ, ಮತ್ತೊಬ್ಬ ಬೈಕ್‌ನಲ್ಲಿ ಬಂದಿದ್ದಾನೆ. ಇಬ್ಬರೂ ಸಹಚರರಾಗಿರಬೇಕು ಎಂದು ಶ್ರೀನಿವಾಸ್ ಟಿಎನ್‌ಐಇಗೆ ತಿಳಿಸಿದರು. ಇಬ್ಬರು ಅಪರಿಚಿತ ಆರೋಪಿಗಳ ವಿರುದ್ಧ ಬಿಎನ್‌ಎಸ್ ಸೆಕ್ಷನ್ 309(4) ಅಡಿಯಲ್ಲಿ ದರೋಡೆ ಪ್ರಕರಣ ದಾಖಲಾಗಿದ್ದು, ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Advertisement