ಬೆಂಗಳೂರು ಕೃಷಿ ಮೇಳಕ್ಕೆ‌ ತೆರೆ: 6 ಕೋಟಿ ರೂ. ಗೂ ಅಧಿಕ ವಹಿವಾಟು; ಗಮನ ಸೆಳೆದ ಚಾಲಕ ರಹಿತ ಟ್ರ್ಯಾಕ್ಟರ್‌!

ಈ ಬಾರಿಯ ಕೃಷಿ ಮೇಳದಲ್ಲಿ ಹನಿ ನೀರಾವರಿ ವ್ಯವಸ್ಥೆ, ಕತ್ತೆ ಹಾಲು ಆಧಾರಿತ ಸಾಬೂನುಗಳು ಮತ್ತು ಕ್ರೀಮ್‌ಗಳು, ತೆಂಗಿನಕಾಯಿ ಸುಲಿಯುವ ಸ್ಟ್ಯಾಂಡ್, ಚಾಲಕ ರಹಿತ ಟ್ರ್ಯಾಕ್ಟರ್‌ಗಳು ರೈತರ ಗಮನ ಸೆಳೆಯಿತು.
ಕೃಷಿ ಮೇಳ
ಕೃಷಿ ಮೇಳ
Updated on

ಬೆಂಗಳೂರು: ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ 4 ದಿನಗಳ ಕಾಲ ನಡೆದ ಕೃಷಿ ಮೇಳಕ್ಕೆ ಭಾನುವಾರ ಅದ್ಧೂರಿ ತೆರೆ ಬಿದ್ದಿದೆ. ಈ ಬಾರಿಯ ಕೃಷಿ ಮೇಳಕ್ಕೆ 34.13 ಲಕ್ಷ ಜನರು ಭೇಟಿ ನೀಡಿದ್ದು, ರೂ.6.17 ಕೋಟಿ ವಹಿವಾಟು ನಡೆದಿದೆ ಹಾಗೂ 53 ಸಾವಿರ ಮಂದಿ ಮಧ್ಯಾಹ್ನದ ಭೋಜನ ಸವಿದಿದ್ದಾರೆ.

ಈ ಬಾರಿಯ ಕೃಷಿ ಮೇಳದಲ್ಲಿ ಹನಿ ನೀರಾವರಿ ವ್ಯವಸ್ಥೆ, ಕತ್ತೆ ಹಾಲು ಆಧಾರಿತ ಸಾಬೂನುಗಳು ಮತ್ತು ಕ್ರೀಮ್‌ಗಳು, ತೆಂಗಿನಕಾಯಿ ಸುಲಿಯುವ ಸ್ಟ್ಯಾಂಡ್, ಚಾಲಕ ರಹಿತ ಟ್ರ್ಯಾಕ್ಟರ್‌ಗಳು ಹಲವರ ಗಮನ ಸೆಳೆಯಿತು. ಅಲ್ಲದೆ, ಮೇಳದಲ್ಲಿ ನಾವೀನ್ಯತೆಯು ಕೃಷಿಯನ್ನು ಹೇಗೆ ಪರಿವರ್ತಿಸುತ್ತಿದೆ ಎಂಬುದನ್ನು ತಿಳಿಸಿಕೊಡಲಾಯಿತು.

ಕೊನೆಯ ದಿನ‌ ವಾರಾಂತ್ಯದ ರಜೆ ಕಾರಣ, ನಗರ ವಾಸಿಗಳು ಕುಟುಂಬ ಸಮೇತ ಮೇಳಕ್ಕೆ ಭೇಟಿ ನೀಡಿದ್ದರು. ಕೃಷಿ ಮೇಳದಲ್ಲಿದ್ದ ಮಳಿಗೆಗಳಲ್ಲಿ ಜನ ಜಾತ್ರೆಯೇ ಕಂಡು ಬಂದಿತ್ತು. ಅಲ್ಲದೆ, ಆಹಾರ ಮಳಿಗೆಗಳಲ್ಲೂ ಸಾಕಷ್ಟು ಜನರು ಸೇರಿದ್ದರು.

ಬೂಮ್ ಸ್ಪ್ರೇಯರ್‌ಗಳು ಮತ್ತು ಸ್ವಯಂಚಾಲಿತ ಪಕ್ಷಿ ಮತ್ತು ಮಂಕಿ ಸ್ಕೇರ್‌ಗಳಂತಹ ತಂತ್ರಗಳತ್ತ ಸಾಕಷ್ಟು ಜನರು ಆಕರ್ಷಿತರಾದರು. ಅಲ್ಲದೆ, 80 ಅಡಿಗಳವರೆಗೆ ತಲುವ ಸಾಮರ್ಥ್ಯವಿರುವ ತೆಂಗಿನಕಾಯಿ ಸುಲಿಯುವ ಸ್ಟ್ಯಾಂಡ್ ಮೇಳದ ಪ್ರಮುಖ ಆಕರ್ಷಣೆಯಾಗಿತ್ತು. ಇದಲ್ಲದೆ, ಪರಿಸರ ಸ್ನೇಹಿ ತೆಂಗಿನಕಾಯಿ ತಟ್ಟೆಗಳನ್ನು ಉತ್ಪಾದಿಸುವ ತಂತ್ರ ಕೂಡ ಜನರ ಗಮನ ಸೆಳೆಯಿತು.

ಇದಲ್ಲದೆ, ಮಣ್ಣು ಮತ್ತು ಹವಾಮಾನದ ನಿರ್ದಿಷ್ಟ ಮಾಹಿತಿ ಒದಗಿಸಿ, ಉತ್ತಮ ಗುಣಮಟ್ಟದ ಫಸಲಿನೊಂದಿಗೆ ಹೆಚ್ಚಿನ ಇಳುವರಿ ಪಡೆಯಲು ಸಹಾಯ ಮಾಡುವ ತಂತ್ರಜ್ಞಾನ ಆಧಾರಿತ ‘ಫೈಲೋ’ ಸಾಧನ ಕೂಡ ರೈತರ ಗಮನ ಸೆಳೆಯಿತು.

ಮಣ್ಣಿನ ಆರೋಗ್ಯ, ಹವಾಮಾನ ಪರಿಸ್ಥಿತಿ, ಕೀಟಗಳು ಮತ್ತು ರೋಗಗಳ ನಿರ್ವಹಣೆ ಮಾಡುವುದರ ಮೇಲೆ ಇಳುವರಿ ನಿರ್ಧರಿಸಲ್ಪಡುತ್ತದೆ. ಈ ಎಲ್ಲವುಗಳ ನಿರಂತರವಾಗಿ ಮೇಲ್ವಿಚಾರಣೆ ಮಾಡಿ, ರೈತರಿಗೆ ನಿಖರವಾದ ಮಾಹಿತಿ ಒದಗಿಸಲು ಫೈಲೋ ಸಾಧನವನ್ನು ಅಗ್ರಿಟೆಕ್‌ ಸ್ಟಾರ್ಟ್‌ಅಪ್‌ ಅಭಿವೃದ್ಧಿಪಡಿಸಿದೆ. ಸೆನ್ಸಾರ್‌ ಹೊಂದಿರುವ ಫೈಲೋ ಸಾಧನವು ಕೈರೋ ಹಾಗೂ ನೀರೋ ಯೂನಿಟ್‌ಗಳಿಂದ ನಿರ್ಮಿಸಲ್ಪಟ್ಟಿದೆ.

ಇವು ಹವಾಮಾನ ಮತ್ತು ಮಣ್ಣಿನ ತೇವಾಂಶದ ಬಗ್ಗೆ ತನ್ನಲ್ಲಿರುವ ಮಣ್ಣು ಮತ್ತು ಹವಾಮಾನದ ಸಂವೇದಕಗಳ ಮುಖಾಂತರ ನಿರ್ದಿಷ್ಟ ಮಾಹಿತಿ ಒದಗಿಸುತ್ತದೆ. ಹವಾಮಾನದಲ್ಲಿನ ಬದಲಾವಣೆಗೆ ತಕ್ಕಂತೆ ಬೆಳೆಗಳಿಗೆ ಮುಂದೆ ಬರಲಿರುವ ರೋಗ, ಕೀಟಗಳ ಬಗ್ಗೆ ರೈತರಿಗೆ ಎಚ್ಚರಿಕೆ ನೀಡುತ್ತದೆ. ಆಗ, ರೈತರು ಕಡಿಮೆ ಖರ್ಚಿನಲ್ಲಿಬೆಳೆ ನಿರ್ವಹಣೆ ಮಾಡಬಹುದು. ಮಾತ್ರವಲ್ಲದೆ, ತೇವಾಂಶಕ್ಕೆ ಅನುಗುಣವಾಗಿ ನೀರು ಒದಗಿಸಬಹುದು. ಬೆಳೆ ಮತ್ತು ಮಣ್ಣಿನ ನಿರ್ದಿಷ್ಟ ಎಚ್ಚರಿಕೆ ಕೊಡುವುದ­ರಿಂದ ಬೆಳೆ ನಿರ್ವಹಣೆ ಸರಳವಾಗುತ್ತದೆ.

ದಾಳಿಂಬೆ, ದ್ರಾಕ್ಷಿ ಮತ್ತು ಕಿತ್ತಳೆಗಳಂತಹ ಬೆಳೆಗಳಿಗೆ ಸಿಂಪಡಿಸಲು ವಿಶೇಷವಾಗಿ ನಿರ್ಮಿಸಲಾದ 173 ಲೀಟರ್ ಕೀಟನಾಶಕವನ್ನು ಹಿಡಿದಿಡಲು ವಿನ್ಯಾಸಗೊಳಿಸಲಾದ ಮಹೀಂದ್ರಾ ಮಿತ್ರ ಟ್ರಾಕ್ಟರ್ ಮತ್ತೊಂದು ಪ್ರಮುಖ ಆಕರ್ಶಕವಾಗಿತ್ತು.

ಇದು ಚಾಲಕರಹಿತ ಟ್ರಾಕ್ಟರ್ ಆಗಿದ್ದು, ದೊಡ್ಡ ದೊಡ್ಡ ಕೃಷಿ ಭೂಮಿಗಳಿಕೆ ಕೀಟನಾಶಗಳ ಸಿಂಪಡಿಸಲು ಇದು ಸಹಾಯಕವಾಗಿದೆ. ಹಾಗೂ ಉತ್ತಮ ಬೆಳೆ ರಕ್ಷಣೆಯನ್ನು ಇದು ಖಾತ್ರಿಪಡಿಸುತ್ತದೆ.

ಇನ್ನು, ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು, ಸಮಾರಂಭಕ್ಕೂ ಮುನ್ನ ಪ್ರಾತ್ಯಕ್ಷಿಕೆ ತಾಕುಗಳು, ಮಳಿಗೆಗಳಿಗೆ ಭೇಟಿ ನೀಡಿದರು. ಡಿಜಿಟಲ್‌ ಬೂಮ್ ಸ್ಪ್ರೇಯರ್ ಅರೆ ಸ್ವಯಂ ಚಾಲಿತ ಟ್ರ್ಯಾಕ್ಟರ್ ಅನ್ನು ಚಾಲನೆ ಮಾಡಿದರು.

ಕೃಷಿಯಲ್ಲಿ ಡ್ರೋನ್‌ ಬಳಕೆ, ರಿಮೋಟ್ ಆಧಾರಿತ ನೆಲಗಡಲೆ ಬಿತ್ತುವ ಯಂತ್ರ ‘ಕೃಷಿ ಬಾಟ್‌’ನ ಕಾರ್ಯವೈಖರಿ ಕುರಿತು ಮಾಹಿತಿ ಪಡೆದರು. ಜೈವಿಕ ಇಂಧನ ಮಳಿಗೆ, ತರಕಾರಿ ಕೃಷಿ ತಾಕುಗಳು ಸೇರಿ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿದರು.

ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ತಾಲೂಕು ಮತ್ತು ಜಿಲ್ಲಾ ಮಟ್ಟದ ಅತ್ಯುತ್ತಮ ಯುವ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಡಾ. ಎಂ. ಹೆಚ್. ಮರೀಗೌಡ ಅವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ, ಡಾ. ಆರ್. ದ್ವಾರಕೀನಾಥ್ ಅವರಿಗೆ ಅತ್ಯುತ್ತಮ ರೈತ ಪ್ರಶಸ್ತಿ ಪ್ರಶಸ್ತಿ ನೀಡಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com